ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾನ್ಯ ಕಾನೂನಿನ ಜ್ಞಾನ ಅಗತ್ಯ’

Last Updated 16 ಫೆಬ್ರುವರಿ 2017, 8:35 IST
ಅಕ್ಷರ ಗಾತ್ರ
ಮೂಡಬಾಗಿಲು(ಎನ್.ಆರ್.ಪುರ):  ಎಲ್ಲರೂ ಸಾಮಾನ್ಯ ಕಾನೂನಿನ ಬಗ್ಗೆ ಜ್ಞಾನ ಹೊಂದಿರುವುದು ಅವಶ್ಯಕ ಎಂದು ವಕೀಲ ಇ. ಸಿ. ಜೋಯಿ ತಿಳಿಸಿದರು. ತಾಲ್ಲೂಕಿನ ಮೂಡಬಾಗಿಲು ಗ್ರಾಮ ದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಶಿಬಿರದಲ್ಲಿ ಸೋಮವಾರ ‘ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
 
ಪ್ರತಿ ನಿತ್ಯ ಜೀವನದಲ್ಲಿ  ಕಾನೂನು ಪಾಲಿಸುವ ಅವಶ್ಯಕತೆ ಇದ್ದು,  ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ವಾಹನದ ದಾಖಲೆ, ಚಾಲನಾ ಪರವಾನಗಿ, ವಿಮೆ ಪಾವತಿಸಿದ ದಾಖಲೆ ಇವೆಲ್ಲವೂ ಅಗತ್ಯವಾಗಿ ಹೊಂದಿರಬೇಕು ಎಂದರು.
 
ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್, ಇಂಟರ್ ನೆಟ್ ಬಳಕೆಯ ಬಗ್ಗೆ ಜ್ಞಾನ ಹೊಂದಿರಬೇಕು.ಇಂಗ್ಲಿಷ್ ನೊಂದಿಗೆ ಇತರೆ ಭಾಷೆಗಳಲ್ಲೂ ಪ್ರಬುದ್ಧತೆ ಹೊಂದಬೇಕು. ಪ್ರಚಲಿತ ವಿದ್ಯಮಾನಗಳ ಜ್ಞಾನ ಪಡೆ ಯುವುದರ ಜತೆ ಮಾನವೀಯ ಸಂಬಂಧ. ನೈತಿಕ ಮೌಲ್ಯಗಳನ್ನು ಬೆಳೆಸಿ ಕೊಳ್ಳಬೇಕು ಎಂದರು.
 
ಪತ್ರಕರ್ತ ಪುರುಷೋತ್ತಮ ಮಾತನಾಡಿ, ಮಕ್ಕಳಿಗೆ ಜೀವನ ಕಲಿಸುವ ಶಿಕ್ಷಣ ಅಗತ್ಯವಾಗಿದ್ದು, ರಾಷ್ಟ್ರೀಯ ಯೋಜನಾ ಶಿಬಿರಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವರೂಪುಗೊಳ್ಳುತ್ತದೆ ಎಂದರು.
 
ಸಭೆಯ ಅಧ್ಯಕ್ಷತೆಯನ್ನು ಬಾಳೆ ಗ್ರಾಮ ಪಂಚಾಯಿತಿ ಸದಸ್ಯೆ ಸುಲೋ ಚನಾ ವಹಿಸಿ ಮಾತನಾಡಿದರು. ಸಭೆಯಲ್ಲಿ ಇನ್ನರ್‌ ವ್ಹೀಲ್ ಸದಸ್ಯ ಸಾಗರಿನಾಗೇಶ್, ಕೃಷಿಕ ಈಚಲದಾಳು ಚಂದ್ರಶೇಖರ್, ಗ್ರಾಮಸ್ಥರಾದ ಗೀತಾ ಗುರುಮೂರ್ತಿ, ರಾಷ್ಟ್ರೀಯ ಯೋಜನಾ ಶಿಬಿರಾಧಿ ಕಾರಿಗಳಾದ ಡಾ.ಕೆ.ಉಮೇಶ್, ಡಾ. ಅಣ್ಣಪ್ಪ ಎನ್.ಮಳೀಮಠ್, ವಿದ್ಯಾರ್ಥಿ ಗಳಾದ ಪ್ರಕೃತಿ, ಶಬ್ಬಿರ್ ಹುಸೇನ್, ಸುಪ್ರಿತಾ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT