ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಮಹಲ್‌ ಕೇಂದ್ರಗಳ ಅಭಿವೃದ್ಧಿಗೆ ಕ್ರಮ

ಪ್ರತ್ಯೇಕ ಪ್ರಾಧಿಕಾರ ರಚನೆ, ಹೆಚ್ಚಿನ ಅನುದಾನ ನೀಡಿಕೆ ಬಗ್ಗೆ ಸಿಎಂ ಜತೆ ಚರ್ಚೆ : ಸಚಿವ ಎ.ಮಂಜು
Last Updated 16 ಫೆಬ್ರುವರಿ 2017, 8:38 IST
ಅಕ್ಷರ ಗಾತ್ರ
ಅಜ್ಜಂಪುರ: ದೇಶದ ಅಮೂಲ್ಯ ತಳಿ ಗಳನ್ನು ಹೊಂದಿರುವ ಅಮೃತ ಮಹಲ್‌ ತಳಿ ಸಂವರ್ಧನಾ ಕೇಂದ್ರಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಎ.ಮಂಜು ಭರವಸೆ ನೀಡಿದರು.
 
ಪಟ್ಟಣದ ಅಮೃತ್‌ಮಹಲ್‌ತಳಿ ಸಂವರ್ಧನಾ ಮತ್ತು ಸಂಶೋಧನಾ ಕೇಂದ್ರವನ್ನು ಬುಧವಾರ ವೀಕ್ಷಿಸಿ ಅವರು ಮಾತನಾಡಿದರು.
2010-11ರಲ್ಲಿ ₹ 5 ಲಕ್ಷ ವೆಚ್ಚದಲ್ಲಿ ನೀರಿನ ಒವರ್‌ಹೆಡ್‌ ಟ್ಯಾಂಕ್, ₹3 ಲಕ್ಷ ವೆಚ್ಚದಲ್ಲಿ ಪೈಪ್ ಅಳವಡಿಕೆಯಾಗಿದೆ. ಆದರೆ ಕೊಳವೆ ಬಾವಿಯಲ್ಲಿ ನೀರು ಬಾರದಿರುವುದರಿಂದ ಒಮ್ಮೆಯೂ ಟ್ಯಾಂಕ್‌ಗೆ ನೀರು ತುಂಬಿಸಲಾಗಿಲ್ಲ ಎಂಬ ಉತ್ತರ ನೀಡಿದ ಎಂಜಿನಿಯರ್‌ ವಿರುದ್ಧ ಸಚಿವರು ಕಿಡಿಕಾರಿದರು.
 
ಬಳಸದೇ ಹಾಳು ಮಾಡಿರುವ ವಿದೇಶಿ ನಿರ್ಮಿತ ರಾಸು ತೂಕದ ತಂತ್ರ, ತುಕ್ಕು ಹಿಡಿತುತ್ತಿರುವ ಸೈಲೇಜ್ ಆಹಾರ ತಯಾರಿಕಾ ಯಂತ್ರ ಹಾಗೂ ಕೃಷಿ ಬಳಕೆ ಟ್ಯಾಕ್ಟರ್‌ಗಳು, ಸ್ವಚ್ಛಗೊಳ್ಳದ ಕೊಟ್ಟಿಗೆ, ಕೇಂದ್ರದ ಕಾವಲಿನಲ್ಲಿ ತೆರವುಗೊಳ್ಳದ ಮುಳ್ಳಿನ ಗಿಡಗಳನ್ನು ವೀಕ್ಷಿಸಿದ ಸಚಿ ವರು, ಪತ್ರಿಕೆಯವರು ಬರೆದಮೇಲೆ, ಮೇವಿನ ಅಧಿಕಾರಿಗಳು, ಸಚಿವರು ಬಂದ ಮೇಲೆ ಎಚ್ಚೆತ್ತೊಳ್ಳಬೇಕಾ? ಮೂಕ ಪ್ರಾಣಿಗಳಿಗೆ ಸರಿಯಾಗಿ ಮೇವು-ನೀರು ನೀಡಿ. ಇಲ್ಲವಾದರೆ ದೇವರೆ ಶಾಪ ಹಾಕುತ್ತಾನೆ. ನೀವೇ ಶಿಕ್ಷೆ ಅನುಭವಿಸ ಬೇಕಾದೀತು ಎಂದರು.
 
ಅಜ್ಜಂಪುರ ಕೇಂದ್ರವಾಗಿರುವ ಅಮೃತ್‌ ಮಹಲ್‌ ಕೇಂದ್ರಗಳ 1400 ರಾಸುಗಳ ನಿರ್ವಹಣೆಗೆ ₹ 2 ಕೋಟಿ ನೀಡಿದ್ದು, ಇಲ್ಲಿನ ವಸ್ತುಸ್ಥಿತಿ ಗಮನಿ ಸಿದರೆ, ನೀಡಲಾದ ಹಣದ ಸದುಪ ಯೋಗ ಆಗಿರುವ ಬಗ್ಗೆ ಅನುಮಾನ ಕಾಡುತ್ತಿದೆ.  ಕೆಲ ದಿನಗಳ ಹಿಂದೆ ರಾಸು ಗಳ ಸಾವಿಗೆ ಸಂಬಂದಿಸಿದಂತೆ ಕರ್ತವ್ಯ ಲೋಪದ ಆಧಾರದಲ್ಲಿ ಇಬ್ಬರು ಅಧಿ ಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರುವುದನ್ನು ಪುನರಾವರ್ತಿಸಿದರೆ, ಕಟ್ಟನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
 
ಕೇಂದ್ರದಲ್ಲಿನ ಮುಖ್ಯ ಹುದ್ದೆಗಳು ಹಾಗೂ ಡಿ ದರ್ಜೆ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ರಾಜ್ಯದಲ್ಲಿ ಚಾಲನೆಯಲ್ಲಿರುವ 651 ಪಶುವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಖಾಲಿ ವೈದ್ಯ ಹುದ್ದೆಗಳಿಗೆ ತುಂಬಲಾಗುವುದು. ಇನ್ನು ಪಶು ವೈದ್ಯರ ಕೋರ್ಸ್ ಪೂರೈಸುವ ವೈದ್ಯರ 3 ತಿಂಗಳ ಸೇವೆಯನ್ನು ಬಳಸಿ ಕೊಳ್ಳಲಾಗುವುದು. ಹೊರಗುತ್ತಿಗೆ ಆಧಾ ರದಲ್ಲಿ ಡಿ ದರ್ಜೆ ನೌಕರರ ನೇಮಕಾತಿ ಬದಲಿಗೆ ಕಾಯಂ ನೌಕರರನ್ನು ನೇಮಿ ಸಲಾಗುವುದು ಎಂದು ತಿಳಿಸಿದರು.
 
ಅಜ್ಜಂಪುರ ಕೇಂದ್ರಕ್ಕೆ ಹೊಂದಿ ಕೊಂಡಂತೆ ಇರುವ 795 ಎಕರೆ ಭೂಮಿ ಅದೃಷ್ಟವಶಾತ್ ಒತ್ತುವರಿ ಆಗಿಲ್ಲ ಎಂಬುದು ಸಂತಸದ ವಿಷಯ. ಇಲ್ಲಿನ ಪೂರ್ಣ ಜಮೀನಿಗೆ ತಂತಿ-ಬೇಲಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಕೇಂದ್ರಕ್ಕೆ ಹೊಂದಿಕೊಂಡ 150 ಎಕರೆ ಯಲ್ಲಿ ಪರ್ವತರಾಯನ ಕೆರೆ ಇರುವುದು ವಿಶೇಷ. ಇಲ್ಲಿನ ನೀರು ಬಳಸಿಕೊಂಡು, ಹಂತ-ಹಂತವಾಗಿ ಕನಿಷ್ಠ 100 ಎಕರೆ ಯಲ್ಲಿ ಮೇವು ಅಭಿವೃದ್ಧಿಪಡಿಸಲು ಸೂಚಿಸಿದ್ದೇನೆ. ಇನ್ನು ಬರ ಹಾಗೂ ಮೇವಿನ ಕೊರತೆಯಂತಹ ತುರ್ತು ಸಂದ ರ್ಭದಲ್ಲಿ ರಾಜ್ಯದ ಅಮೃತ್ ಮಹಲ್ ರಾಸುಗಳಿಗೆ ಅಗತ್ಯವಿರುವ ಸೈಲೇಜ್ ಫುಡ್ ತಯಾರಿಸಲು ಆದೇಶಿಸಿದ್ದೇನೆ ಎಂದರು.
 
ಅಮೃತ್‌ಮಹಲ್‌ತಳಿ ಸಂವರ್ಧನಾ ಕೇಂದ್ರ ಪ್ರಾಧಿಕಾರ ಸ್ಥಾಪಿಸುವಂತೆ, ಸ್ಥಳೀ ಯರು ಮತ್ತು ಅಮೃತ್‌ ಮಹಲ್‌ಉಳಿಸಿ ಹೋರಾಟಗಾರರು ನೀಡಿರುವ ಸಲಹೆ ಬಗ್ಗೆ ಸಿಎಂ ಬಳಿ ಚರ್ಚಿಸಲಾಗುವುದು. ಹಾಗೂ ರಾಜ್ಯದ ಅಮೃತ್‌ಮಹಲ್‌ ತಳಿ ಸಂವರ್ಧನಾ ಕೇಂದ್ರ ಅಭಿವೃದ್ಧಿಗೆ ಬಜೆ ಟ್‌ನಲ್ಲಿ ಹೆಚ್ಚಿನ  ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದರು.
 
ಅಮೃತ್‌ಮಹಲ್‌ತಳಿ ಸಂವರ್ಧನಾ ಕೇಂದ್ರವನ್ನು ಉಳಿಸಿ, ಬೆಳೆಸುವ ಜತೆಗೆ ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪಿ ಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಜಿ.ಎಚ್.ಶ್ರೀನಿವಾಸ್ ಮನವಿ ಮಾಡಿದರು. ಪಶುಪಾಲನಾ ಇಲಾಖೆ ಆಯುಕ್ತ ಶೇಖರ್, ಜಂಟಿ ನಿರ್ದೇಶಕ ಹಲಗಪ್ಪ, ಪ್ರಭಾರಿ ಉಪನಿರ್ದೇಶಕ ವೀರಭದ್ರಪ್ಪ, ಅದೀಕ್ಷಕ ಶೌಕತ್‍ಅಲಿ, ಪಶುವೈದ್ಯ ರಾಜಶೇಖರ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT