ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಖರೀದಿ ಬೆಲೆ ₹ 3 ಹೆಚ್ಚಳ

ಬರ: ಹಾಲು ಉತ್ಪಾದಕರ ನೆರವಿಗೆ ಬಂದ ಹಾಲು ಒಕ್ಕೂಟ
Last Updated 16 ಫೆಬ್ರುವರಿ 2017, 10:45 IST
ಅಕ್ಷರ ಗಾತ್ರ
ತುಮಕೂರು: ಬರದ ಕಾರಣ ರೈತರಿಗೆ ನೆರವಾಗಲು ಈ ಹಿಂದೆ ಲೀಟರ್‌ ಹಾಲಿನ ಖರೀದಿ ಬೆಲೆಯನ್ನು  ₹ 2 ಹೆಚ್ಚಿಸಿದ್ದ ತುಮುಲ್‌ (ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಈಗ ಮತ್ತೆ ತಾತ್ಕಾಲಿಕವಾಗಿ ಲೀಟರ್‌ಗೆ ₹ 3 ಹೆಚ್ಚಿಸಿದೆ.
 
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಮುಲ್‌ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌, ಡಿಸೆಂಬರ್‌, ಜನವರಿ ತಿಂಗಳಿನಲ್ಲಿ ಲೀಟರ್‌ಗೆ ತಲಾ ₹ 1 ಹೆಚ್ಚಳ ಮಾಡಲಾಗಿತ್ತು. ಬರದ ತೀವ್ರತೆ ಹೆಚ್ಚಿರುವ ಕಾರಣ ಮತ್ತೆ  ₹ 3 ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
 
ಫೆ. 16ರಿಂದ ಹೊಸ ದರ ಜಾರಿಗೆ ಬರಲಿದೆ. ಆದರೆ ಗ್ರಾಹಕರ ಹಾಲಿನ ಮಾರಾಟದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದರು.
ಒಕ್ಕೂಟವು ₹ 27 ಕೋಟಿ ಲಾಭದಲ್ಲಿದೆ. ಲೀಟರ್‌ಗೆ ಹಾಲು ಖರೀದಿಗೆ ₹ 5 ಹೆಚ್ಚಳದಿಂದ ಮಾರ್ಚ್‌ ತಿಂಗಳ ಕೊನೆಗೆ ₹ 17 ಕೋಟಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.
 
 ಹಾಲಿನ ಬೆಲೆ ಹೆಚ್ಚಿಸುವಂತೆ ರೈತರು ಕೇಳದಿದ್ದರೂ ಅವರ ಕಷ್ಟ ನೋಡಿ ದರ ಹೆಚ್ಚಿಸಲಾಗಿದೆ. ತುಮುಲ್‌ ವತಿಯಿಂದ ಗೋಶಾಲೆ ತೆರೆಯಲು ಸಾಧ್ಯವಿಲ್ಲ. ಶೇ 75ರ ಸಬ್ಸಿಡಿ ದರದಲ್ಲಿ ಮೇವು ಕಿಟ್‌ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಒಕ್ಕೂಟ ನೀಡುವ ₹ 5 ರ ಜತೆಗೆ ಸರ್ಕಾರದ ₹ 5 ಪ್ರೋತ್ಸಾಹ ಧನವೂ ಸಿಗಲಿದೆ ಎಂದು ಹೇಳಿದರು.
 
ಸರ್ಕಾರದ ಪ್ರೋತ್ಸಾಹ ಧನ ಹೊರತುಪಡಿಸಿ  ಕನಿಷ್ಠ 3.4 ಜಿಡ್ಡು, 8.5 ಎಸ್‌ಎನ್‌ಎಫ್‌ ಇರುವ ಹಾಲಿಗೆ ಕನಿಷ್ಠ ₹ 25.84 ಹಾಗೂ ಸರಾಸರಿ 4.1 ಜಿಡ್ಡು ಹಾಗೂ 8.5 ಎಸ್‌ಎನ್‌ಎಫ್‌ ಇರುವ ಹಾಲಿಗೆ ಲೀಟರ್‌ಗೆ ₹27.16 ಸಿಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕರಾದ ಹಳೆಮನೆ ಶಿವನಂಜಪ್ಪ, ಚಂದ್ರಶೇಖರ್‌, ಚಂದ್ರಶೇಖರ ಗೌಡ, ಪ್ರಕಾರ್‌, ಕೆ.ಆರ್‌.ಸುರೇಶ್‌  ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT