ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಹಟ್ಟಿ ಪ.ಪಂ. ಬಜೆಟ್‌ ಮಂಡನೆ

₹ 7.78 ಕೋಟಿ ಆದಾಯ ನಿರೀಕ್ಷೆ; ₹ 7.70 ಕೋಟಿ ವೆಚ್ಚವಾಗುವ ಸಾಧ್ಯತೆ
Last Updated 16 ಫೆಬ್ರುವರಿ 2017, 11:41 IST
ಅಕ್ಷರ ಗಾತ್ರ
ಶಿರಹಟ್ಟಿ: ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಅಧ್ಯಕ್ಷ ಬುಡನಶ್ಯಾ ಮಕಾಂದರ್ ಪ್ರಸಕ್ತ ಸಾಲಿಗೆ ಸಂಬಂಧಿಸಿ ₹ 7,46,324 ಲಕ್ಷ ಉಳಿ ತಾಯ ಬಜೆಟ್‌ ಮಂಡಿಸಿದರು.
 
ವಿವಿಧ ಮೂಲಗಳಿಂದ ಒಟ್ಟು ₹ 7,78,01,447 ಅಂದಾಜು ಆದಾಯ ನಿರೀಕ್ಷಿಸಿದ್ದು, ₹ 7,70,55,123 ಅಂದಾಜು ವೆಚ್ಚವಾಗುವ ಸಾಧ್ಯತೆ ಇದೆ. ರಸ್ತೆ ನಿರ್ಮಾಣ, ಚರಂಡಿ ದುರಸ್ತಿ, ನೀರು ಪೂರೈಕೆಗೆ ಹೆಚ್ಚಿನ ಹಣ ಮೀಸಲಿಟ್ಟಿದ್ದು, ಪಟ್ಟಣ ಜನತೆಗೆ ಕುಡಿಯುವ ನೀರಿನ ಪೂರೈಸಲು ಹೆಚ್ಚು ಆದ್ಯತೆ ನೀಡಲಾಗು ವುದು ಎಂದು ಅಧ್ಯಕ್ಷ ಬುಡನಶ್ಯಾ ಮಕಾಂದರ್ ಹೇಳಿದರು.
 
ಭೀಕರ ಬರಗಾಲದ ಪರಿಣಾಮ ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಒದಗಿಸುವ ತುಂಗಭದ್ರೆ ಸದಸ್ಯ ಎಚ್‌.ಡಿ. ಮಾಗಡಿ ಮಾತ ನಾಡಿ, ಪಟ್ಟಣ ಸಮಗ್ರ ಅಭಿವೃದ್ಧಿ ಗಮನ ದಲ್ಲಿಟ್ಟುಕೊಂಡು ಆಯವ್ಯಯ ತಯಾರಿ ಸಿದ್ದು, ಪಕ್ಷಾತೀತವಾಗಿ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವದು. ನೀರು ಪೂರೈಕೆಯಲ್ಲಿ ಆಗಿರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಲಾಗಿದೆ ಎಂದು ಹೇಳಿದರು.
 
ಸಂಪನ್ಮೂಲ ಕ್ರೋಡಿಕರಣಕ್ಕೆ ಆದ್ಯತೆ ನೀಡಲಾಗಿದೆ. ಪಟ್ಟಣ ಅಭಿವೃದ್ದಿ ಪಥ ದತ್ತ ಸಾಗಲು ಎಲ್ಲರೂ ಸಹಕರಿಸಬೇಕು. ಇದಕ್ಕೆ ಸಾರ್ವಜನಿಕರ ಪ್ರೋತ್ಸಾಹ ಕೂಡ ಅಗತ್ಯ ಎಂದು ಹೇಳಿದರು.
 
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಕಾಶಮ್ಮ ಹುಲಕಡ್ಡಿ, ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಇಟಗಿ, ಮಾಬು ಸಾಬ್ ಮುಳಗುಂದ, ಸಂತೋಷ ಕುರಿ, ಲಲಿತಾ ಕಲ್ಲಪ್ಪನವರ, ರೇಖಾ ಅಕ್ಕಿ, ಪರಮೇಶ ಪರಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT