ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಿಂಚಣಿ ಪದ್ಧತಿ ರದ್ದುಗೊಳಿಸಲು ಆಗ್ರಹ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ– ಕಾಲೇಜು ಸಿಬ್ಬಂದಿ ಬೃಹತ್‌ ಪ್ರತಿಭಟನಾ ರ್‌್ಯಾಲಿ
Last Updated 16 ಫೆಬ್ರುವರಿ 2017, 12:45 IST
ಅಕ್ಷರ ಗಾತ್ರ
ಬೆಳಗಾವಿ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಜಿಲ್ಲಾ ಘಟಕದಿಂದ ಜಿಲ್ಲೆಯ ಖಾಸಗಿ ಶಾಲಾ–ಕಾಲೇಜು ಗಳನ್ನು ಬಂದ್‌ ಮಾಡಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
 
ಶಾಲಾ–ಕಾಲೇಜುಗಳಿಗೆ ಸಾಮೂಹಿಕ ರಜೆ ಹಾಕಿದ ಶಿಕ್ಷಕರು ಹಾಗೂ ನೌಕರರು ಇಲ್ಲಿನ ಲಿಂಗರಾಜ ಕಾಲೇಜು ಮೈದಾನ ದಲ್ಲಿ ಸಮಾವೇಶಗೊಂಡರು. ನಂತರ ಕಾಲೇಜು ರಸ್ತೆ– ರಾಣಿ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲೆಯಾದ್ಯಂತ ಆಗಮಿಸಿದ್ದ ನೂರಾರು ಮಂದಿ ನೌಕರರು ಪ್ರತಿಭಟನಾ ರ್‌್ಯಾಲಿಯಲ್ಲಿ ಭಾಗವಹಿಸಿದ್ದರು.
 
ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿ ಮಠ, ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಸ್‌.ಎಸ್‌. ಮಠದ ನೇತೃತ್ವದಲ್ಲಿ ಮನವಿ ಸಲ್ಲಿಸ ಲಾಯಿತು. ಮುರಗೋಡದ ನೀಲಕಂಠ ಸ್ವಾಮೀಜಿ ಕೂಡ ಭಾಗವಹಿಸಿದ್ದರು.
 
ಬೇಡಿಕೆಗಳೇನು?: ‘1995ರ ನಂತರ ಆರಂಭವಾದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಬಗೆಹರಿಸಬೇಕು. ಹೊಸ ಪಿಂಚಣಿ ಪದ್ಧತಿ ರದ್ದುಗೊಳಿಸಿ ಹಳೆ ಪದ್ಧತಿ ಮುಂದುವರಿಸಬೇಕು. ಶಿಕ್ಷಕ, ವಿದ್ಯಾರ್ಥಿಗಳ ಅನುಪಾತ ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲಿ ನಿಗದಿಗೊಳಿಸ ಬೇಕು.
 
ವೇತನ ತಾರತಮ್ಯ ನಿವಾರಿಸಿ, ವೇತನ ಆಯೋಗ ರಚಿಸಬೇಕು. ಖಾಸಗಿ ಪ್ರೌಢಶಾಲಾ ಮುಖ್ಯಶಿಕ್ಷಕರ ‘ಬಿ’ ಗ್ರೇಡ್‌ ಹುದ್ದೆಯನ್ನು ‘ಸಿ’ ಗ್ರೇಡ್‌ಗೆ ಹಿಂಬಡ್ತಿ ನೀಡಿರುವುದನ್ನು ರದ್ದುಪಡಿಸಬೇಕು. ಗುತ್ತಿಗೆ ಆಧಾರದ ಮೇಲೆ ನೇಮಕವಾದ ನೌಕರರಿಗೆ ನೀಡಿರುವ ಸವಲತ್ತು ಹಿಂ ಪಡೆಯಬಾರದು. ಮಾನ್ಯತೆ ನವೀಕರಣ ಸರಳಗೊಳಿಸಬೇಕು. 2006 ರಿಂದ ಪದವಿ ಕಾಲೇಜುಗಳಲ್ಲಿ ಪ್ರಾಚಾ ರ್ಯರ ಹುದ್ದೆಗಳನ್ನು ಅನುಮೋದಿಸ ಬೇಕು. ಪಿಯು ಕಾಲೇಜುಗಳಲ್ಲಿ ಉಪ ಪ್ರಾಚಾರ್ಯರ ಹುದ್ದೆಗೆ ಇರುವ ನಿರ್ಬಂಧ ಹಿಂಪಡೆಯಬೇಕು’.
 
‘ಶಾಲಾ–ಕಾಲೇಜುಗಳಲ್ಲಿ ಬೋಧಕೇ ತರ ಹುದ್ದೆಗಳನ್ನು ತುಂಬಿಕೊಳ್ಳಲು ವಿಧಿಸಿರುವ ನಿರ್ಬಂಧ ಹಿಂಪಡೆಯ ಬೇಕು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಸೌಲಭ್ಯ ಮುಂದುವರಿಸಬೇಕು. ಯೋಜನಾ ಸಿಬ್ಬಂದಿಯನ್ನು ಯೋಜನೇ ತರಕ್ಕೆ ಪರಿವರ್ತಿಸಬೇಕು. ಶುಲ್ಕ ಮರಳಿ ತುಂಬುವ ಮೊದಲಿನ ಪದ್ಧತಿ ಮರು ಜಾರಿಗೊಳಿಸಬೇಕು.
 
1987ರಿಂದ 1995ರ ಅವಧಿಯಲ್ಲಿ ಪ್ರಾರಂಭವಾದ ಪ್ರಥಮದರ್ಜೆ ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಬೇಕು. 31 ಖಾಸಗಿ ಪಾಲಿಟೆಕ್ನಿಕ್‌ಗಳನ್ನು ಅನು ದಾನಕ್ಕೆ ಒಳಪಡಿಸಬೇಕು. 2 ಕಿ.ಮೀ. ಗಿಂತಲೂ ಹೆಚ್ಚಿಗೆ ಇರುವ ಗ್ರಾಮೀಣ ಎಸ್ಸೆಸ್ಸೆಲ್ಸಿ ಪರೀಕ್ಷಾ ಕ್ಲಸ್ಟರ್‌ಗಳನ್ನು (2–3 ಶಾಲೆ ಸೇರಿಸಿ ಪರೀಕ್ಷಾ ಕೇಂದ್ರ ಮಾಡುವುದು) ರದ್ದುಪಡಿಸಬೇಕು’ ಎಂದು ಒತ್ತಾಯಿಸಲಾಗಿದೆ.
 
ಇದಕ್ಕೂ ಮುನ್ನ, ಲಿಂಗರಾಜ ಕಾಲೇಜು ಮೈದಾನದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪದಾಧಿಕಾ ರಿಗಳು, ‘ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಖಾಸಗಿ ಶಾಲಾ–ಕಾಲೇಜುಗಳವರಿಗೂ ನೀಡಬೇಕು. ಮಕ್ಕಳ ನಡುವೆ ತಾರತಮ್ಯ ಧೋರಣೆ ಸರಿಯಲ್ಲ. ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಪ್ರಕಾರ ಸರ್ಕಾರಿ ಸೀಟು ಕೊಡಲಾಗು ತ್ತಿದೆ. ಅಂಥ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್‌, ಮಧ್ಯಾಹ್ನದ ಬಿಸಿಯೂಟ ಕೊಡುವುದಿಲ್ಲವೇಕೆ’ ಎಂದರು.
 
‘ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲು ಸಹಕರಿಸ ಬೇಕು’ ಎಂದು ಆಗ್ರಹಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಜಿಲ್ಲಾ ಘಟಕದ ಸಲೀಂ ಕಿತ್ತೂರ, ಎಂ.ಎ. ಕೋರಿಶೆಟ್ಟಿ, ರಾಮು ಗುಗವಾಡ, ಬಿ.ವಿ. ಲಮಾಣಿ, ವಿ.ಬಿ. ಗೌಡರ, ಬಸನಗೌಡ ಪಾಟೀಲ, ಎಲ್‌.ಎನ್‌. ಪಾಟೀಲ, ಆರ್‌.ಎಂ. ಸನದಿ ಇದ್ದರು.
 
* ಸರ್ಕಾರವು ಖಾಸಗಿ ಶಾಲೆ,  ಸರ್ಕಾರಿ ಶಾಲೆ ಮಕ್ಕಳೆಂದು ತಾರತಮ್ಯ ಮಾಡಬಾರದು. ಎಲ್ಲರನ್ನೂ ಸಮಾನವಾಗಿ ಕಂಡು ಸೌಲಭ್ಯ ಕಲ್ಪಿಸಬೇಕು
-ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT