ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ಸಾಧನೆಗೆ ಚೀನಾ ಮಾಧ್ಯಮಗಳ ಶ್ಲಾಘನೆ

Last Updated 16 ಫೆಬ್ರುವರಿ 2017, 16:45 IST
ಅಕ್ಷರ ಗಾತ್ರ

ಬೀಜಿಂಗ್‌: ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಏಕಕಾಲಕ್ಕೆ 104 ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಉಡಾವಣೆ ಮಾಡಿರುವ ಐತಿಹಾಸಿಕ ಸಾಧನೆಗೆ ನೆರೆರಾಷ್ಟ್ರ ಚೀನಾ ಮಾಧ್ಯಮಗಳು ಶ್ಲಾಘಿಸಿವೆ.

ಆದರೆ, ಚೀನಾ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತಕ್ಕಿಂತ ಮುಂದಿದೆ ಎಂದು ತಿಳಿಸಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಎಂಬ ಪತ್ರಿಕೆಯ ಸಂಪಾದಕೀಯ ಬರಹದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

ಇದಕ್ಕೂ ಮೊದಲು ರಷ್ಯಾ 2014ರಲ್ಲಿ 37 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆಗೊಳಿಸಿದ್ದ ಸಾಧನೆಯಾಗಿತ್ತು. ಭಾರತ ಹೊಸ ದಾಖಲೆ ಸೃಷ್ಟಿಸಿದೆ ಆದರೆ ಪ್ರಸ್ತುತ ದೇಶದ ಯಾವುದೇ ಗಗನಯಾತ್ರಿಯು ಅಂತರಿಕ್ಷದಲ್ಲಿ ನೆಲೆಸಿಲ್ಲ.

ಭಾರತದ ಸಾಧನೆ ವಿಶ್ವವನ್ನೇ ಬೆರಗುಗೊಳಿಸಿದೆ. ಏಕಕಾಲಕ್ಕೆ ಉಪಗ್ರಹ ಉಡಾವಣೆ ಮಾಡುವುದಕ್ಕಿಂತ ಅವುಗಳ ಕಾರ್ಯಕ್ಷಮತೆ ಮತ್ತು ನಿರ್ವಹಣೆ ಕುರಿತು ಕಾಳಜಿ ಅಗತ್ಯ ಎಂದಿದೆ.

ಅತಿ ಕಡಿಮೆ ಅನುದಾನದಲ್ಲಿ ಐತಿಹಾಸಿಕ ಸಾಧನೆ ಮೆರೆದಿರುವ ಇಸ್ರೊ, ಕಡಿಮೆ ವೆಚ್ಚದಲ್ಲಿ ಅಂತರಿಕ್ಷ ವಿಜ್ಞಾನದಲ್ಲಿ ಪ್ರಭುತ್ವ ಸಾಧಿಸುತ್ತಿರುವುದು ವಿಶ್ವದ ಇನ್ನಿತರ ರಾಷ್ಟ್ರಗಳ ದೃಷ್ಟಿ ಭಾರತದತ್ತ ತಿರುಗಿದೆ.

ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಪಂಚದ ರಾಷ್ಟ್ರವಾರು ಮೀಸಲಿರಿಸಿರುವ ಧನ (2013 ರ ವರದಿ ಅನ್ವಯ):

ಅಮೆರಿಕಾ 39.3 ಬಿಲಿಯನ್‌ ಡಾಲರ್‌
ಚೀನಾ 6.1 ಬಿಲಿಯನ್‌ ಡಾಲರ್‌
ರಷ್ಯಾ 5.3 ಬಿಲಿಯನ್‌ ಡಾಲರ್‌
ಜಪಾನ್‌ 3.6 ಬಿಲಿಯನ್‌ ಡಾಲರ್‌
ಭಾರತ 1.2 ಬಿಲಿಯನ್‌ ಡಾಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT