ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಕ್ಕೆ ಕ್ಯಾಂಪ್ಕೊ ಅಡಿಕೆ ರಫ್ತು ಆರಂಭ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಂಗಳೂರು:  ಅಡಿಕೆಗೆ ಬೇಡಿಕೆಇರುವ ಚೀನಾ ದೇಶಕ್ಕೆ ಭಾರತದ ಅಡಿಕೆ ಕಳುಹಿಸುವ ಮೂಲಕ ದೇಶೀಯ ಅಡಿಕೆ ಮಾರುಕಟ್ಟೆಯ ಬಲವರ್ಧನೆಗೆ ಕ್ಯಾಂಪ್ಕೊ ಕೈಗೊಂಡಿರುವ ದೂರಗಾಮಿ ಯೋಜನೆಯ ಪ್ರಥಮ ಪ್ರಯತ್ನ ಯಶಸ್ವಿಯಾಗಿದೆ.

ಇಲ್ಲಿನ ಅಡಿಕೆ ಗುಣಮಟ್ಟ ಅರ್ಹತೆಯೊಂದಿಗೆ ಚೀನಾದಲ್ಲಿ ಸ್ವೀಕೃತವಾಗಿದೆ. ಪ್ರಾಯೋಗಿಕವಾಗಿ ಚೀನಾಕ್ಕೆ ಪ್ರಥಮ ಕಂತಿನಲ್ಲಿ ಕಳುಹಿಸಲಾದ ಇಲ್ಲಿನ ಎಳತು ಸಂಸ್ಕರಿತ ಅಡಿಕೆಯು, ಅಲ್ಲಿನ ಪ್ರತಿಷ್ಠಿತ, ‘ಕೃಷಿ ಕೈಗಾರಿಕಾ ಪ್ರಮಾಣ ಪ್ರಾಧಿಕಾರದ’ ಗುಣಮಟ್ಟ ಪರೀಕ್ಷೆಯಲ್ಲಿ ಭಾರತದ ಒಣ ಅಡಿಕೆಯು ಸರ್ವ ಮಾನ್ಯತೆಯ ಅರ್ಹ ಉತ್ಪನ್ನವೆಂದು ದೃಢೀಕರಣ ಪಡೆದಿದೆ.

ಚೀನಾಕ್ಕೆ ಕಳುಹಿಸಲಾದ ಅಡಿಕೆಯನ್ನು ಶಿವಮೊಗ್ಗ, ಪುತ್ತೂರು ಹಾಗೂ ಕೊಯಮತ್ತೂರು ಭಾಗಗಳಿಂದ ಸಂಗ್ರಹಿಸಲಾಗಿದೆ. ಅಲ್ಲಿನ ಆಯ್ದ ಎಳತು ಅಡಿಕೆಯನ್ನು ಪುತ್ತೂರಿನಲ್ಲಿ ಸಂಸ್ಕರಣೆ ಮಾಡಲಾಗಿದ್ದು, ಬಳಿಕ ಭಾರತ ಸರ್ಕಾರದ   ಪ್ರಯೋಗಾಲಯದಲ್ಲಿ ಗುಣಮಟ್ಟ ಪರೀಕ್ಷ್ಷೆಗೊಳಪಡಿಸಿ ದೃಢೀಕರಣಗೊಳಿಸಲಾಗಿದೆ.
ಚೀನಾದ ಕುವಿವಾಂಗ್ (ಕಿಂಗ್ ಆಫ್ ಟೇಸ್ಟ್) ಸಂಸ್ಥೆಯೊಂದಿಗಿನ ಒಪ್ಪಂದ ಅನ್ವಯ ಕ್ಯಾಂಪ್ಕೊ ಈ ರಫ್ತು ವ್ಯವಹಾರ ಆರಂಭಿಸಿದೆ.

ಹಸಿರು ಬಣ್ಣವನ್ನು ಉಳಿಸಿಕೊಂಡಿರುವ ಹಸಿ ಎಳತು ಅಡಿಕೆಯ ಬಗ್ಗೆ ಚೀನಾ ವಿಶೇಷ ಒಲವು ತೋರಿದೆ. ಉತ್ತಮ ಗುಣಮಟ್ಟ ಹೊಂದಿರುವ ಇಲ್ಲಿನ ಮೊಹಿತ್ ನಗರ ಜಾತಿಯ ಅಡಿಕೆಯನ್ನು ತರಿಸಿಕೊಳ್ಳಲು ಚೀನಾ ಉತ್ಸುಕವಾಗಿದೆ ಎಂದು ತಿಳಿದು ಬಂದಿದೆ.

ಚೀನಾಕ್ಕೆ ಭಾರತದ ಅಡಿಕೆ ರಫ್ತು ಯೋಜನೆ ಕಾರ್ಯಗತ ಆಗುವುದರಿಂದ ಅಡಿಕೆ ಕೃಷಿಕರ ಆರ್ಥಿಕ ಉನ್ನತಿಗೆ ಅನುಕೂಲ ಆಗಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT