ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ವಹಿವಾಟು ವೃದ್ಧಿ

Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ:  ಅಂತರರಾಷ್ಟ್ರೀಯ ಸರಕು ಮಾರುಕಟ್ಟೆ ಚೇತರಿಕೆ ಕಂಡುಕೊಳ್ಳುತ್ತಿರುವುದರಿಂದ ದೇಶದ ರಫ್ತು ವಹಿವಾಟು ಸತತ ಐದನೇ ತಿಂಗಳಿನಲ್ಲಿಯೂ ಏರಿಕೆ ಕಂಡಿದೆ.

ಜನವರಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್‌ ವಸ್ತುಗಳು ಮತ್ತು ಕಬ್ಬಿಣದ ಅದಿರು ರಫ್ತು ಹೆಚ್ಚಾಗಿರುವುದರಿಂದ ₹1.49 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದ್ದು ಶೇ 4.32 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಆಮದು: ಆಮದು ಪ್ರಮಾಣವೂ ಶೇ 11 ರಷ್ಟು ತಗ್ಗಿದ್ದು, ₹2.17 ಲಕ್ಷ ಕೋಟಿ ಮೌಲ್ಯದ ವಸ್ತುಗಳು ಆಮದಾಗಿವೆ.

ಚಿನ್ನ ಆಮದು ಇಳಿಕೆ: ನೋಟು ರದ್ದತಿಯಿಂದ ಚಿನ್ನದ ಬೇಡಿಕೆಯೂ ತಗ್ಗಿದೆ. ಹೀಗಾಗಿ ಚಿನ್ನದ ಆಮದು ಶೇ 30 ರಷ್ಟು ಕುಸಿತ ಕಂಡಿದೆ.
ವಹಿವಾಟಿನ ಪ್ರಮಾಣವು ₹20,400 ಕೋಟಿಗಳಿಂದ ₹13,600 ಕೋಟಿಗಳಿಗೆ ಇಳಿಕೆಯಾಗಿದೆ.

ಅಮೆರಿಕದ ಆರ್ಥಿಕ ರಕ್ಷಣಾ ನೀತಿ, ಕರೆನ್ಸಿ ಚಂಚಲತೆ, ಜಾಗತಿಕ ಆರ್ಥಿಕತೆಯು ಅನಿಶ್ಚಿತತೆ ದೇಶಿ ರಫ್ತು ಉದ್ಯಮದ ಪಾಲಿಗೆ ಬಹು ದೊಡ್ಡ ಸವಾಲು ಎಂದು ಭಾರತದ ರಫ್ತುದಾರರ ಒಕ್ಕೂಟಗಳ ಸಂಘಟನೆ (ಎಫ್‌ಐಇಒ) ಅಧ್ಯಕ್ಷ ಎಸ್‌.ಸಿ. ರಹ್ಲಾನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT