ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಅಪಾಯಕಾರಿ ರಾಷ್ಟ್ರ

ಸಿಐಎ ಮಾಜಿ ಅಧಿಕಾರಿ ಕೆವಿನ್ ಹೇಳಿಕೆ
Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ವಾಷಿಂಗ್ಟನ್: ‘ಪಾಕಿಸ್ತಾನ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರ’ ಎಂದು ಸಿಐಎ ಮಾಜಿ ಅಧಿಕಾರಿ ಕೆವಿನ್ ಹಲ್ಬರ್ಟ್  ಹೇಳಿದ್ದಾರೆ.
 
ಕೆವಿನ್ ಅವರು ಸಿಐಯ ಇಸ್ಲಾಮಾಬಾದ್‌ ಘಟಕದ ಮುಖ್ಯಸ್ಥರಾಗಿದ್ದರು. ಪಾಕಿಸ್ತಾನದಲ್ಲಿ ಕುಸಿಯುತ್ತಿರುವ ಆರ್ಥಿಕತೆ, ಭಯೋತ್ಪಾದನೆ ಚಟುವಟಿಕೆಗಳು, ಅಣ್ವಸ್ತ್ರಗಳನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ವೈಫಲ್ಯವು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದ್ದಾರೆ.
 
‘ಪಾಕಿಸ್ತಾನವು ನಷ್ಟದಲ್ಲಿ ಸಾಗುತ್ತಿರುವ ಬ್ಯಾಂಕ್‌ನಂತೆ. ಈ ರಾಷ್ಟ್ರವು ಪ್ರಸ್ತುತ ನೀತಿಗಳನ್ನು ಅನುಸರಿಸಿದರೆ ದುರಂತ ಎದುರಿಸಬೇಕಾದೀತು’ ಎಂದು ಗುಪ್ತಚರ ವಿಭಾಗಕ್ಕೆ ಸೇರಿದ ‘ಸೈಫರ್ ಬ್ರಿಫ್’ ಎಂಬ ಅಂತರ್ಜಾಲ ತಾಣದಲ್ಲಿ  ಕೆವಿನ್ ಅವರು  ಬರೆದಿದ್ದಾರೆ.
 
‘3.3 ಕೋಟಿ ಜನಸಂಖ್ಯೆ ಇರುವ ಆಫ್ಘಾನಿಸ್ತಾನದಲ್ಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪಾಕಿಸ್ತಾನವು 18.2 ಕೋಟಿ ಜನಸಂಖ್ಯೆ ಹೊಂದಿದೆ. ಇದು ಆಫ್ಘಾನಿಸ್ತಾನದ ಜನಸಂಖ್ಯೆಯ ಐದು ಪಟ್ಟಕ್ಕಿಂತಲೂ ಹೆಚ್ಚು. ಹೀಗಾಗಿ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ’ ಎಂದು ವಿವರಿಸಿದ್ದಾರೆ.
 
‘ಹೆಚ್ಚುತ್ತಿರುವ ಭಯೋತ್ಪಾದನೆ, ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವುದು, ವಿಶ್ವದಲ್ಲೇ ಆರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವುದು, ಅತಿ ಹೆಚ್ಚು ಜನನ ಪ್ರಮಾಣ ಇರುವುದು ಪಾಕಿಸ್ತಾನದ ಬಗ್ಗೆ ಆತಂಕಕ್ಕೆ ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT