ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ದೇಶ’ ಪರಿಹಾರಕ್ಕೆ ಒಲವು

ಇಸ್ರೇಲ್ – ಪ್ಯಾಲೆಸ್ಟೀನ್ ವಿವಾದ: ಡೊನಾಲ್ಡ್ ಟ್ರಂಪ್ ಹೊಸ ಚಿಂತನೆ
Last Updated 16 ಫೆಬ್ರುವರಿ 2017, 20:24 IST
ಅಕ್ಷರ ಗಾತ್ರ
ವಾಷಿಂಗ್ಟನ್: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಣ ಗಡಿ ವಿವಾದಕ್ಕೆ ಸಂಬಂಧಿಸಿ ‘ಎರಡು ರಾಷ್ಟ್ರ ಪರಿಹಾರ ನೀತಿ’ಯಿಂದ ಹಿಂದೆ ಸರಿಯುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದರು.
 
2002ರಿಂದಲೂ ಅಮೆರಿಕವು ಎರಡು ರಾಷ್ಟ್ರ ಪರಿಹಾರ ನೀತಿಯನ್ನು ಬೆಂಬಲಿಸುತ್ತಾ ಬಂದಿದೆ.
 
ಅಮೆರಿಕಕ್ಕೆ ಭೇಟಿ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್ ಅವರು, ಬರಾಕ್ ಒಬಾಮ ಅವರ ಆಡಳಿತದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಬೇರ್ಪಡಿಸಲಾಗದಂಥ ದ್ವಿಪಕ್ಷೀಯ ಬಾಂಧವ್ಯ ನಿರ್ಮಾಣವಾಗಿದೆ ಎಂದು ಶ್ಲಾಘಿಸಿದರು.
 
‘ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವುದಾದಲ್ಲಿ ಒಂದು ದೇಶ ಪರಿಹಾರಕ್ಕೆ ಸಮ್ಮತಿ ಸೂಚಿಸಲಿದ್ದೇನೆ. ಆದರೆ, ಯಹೂದಿಗಳಿಗೆ ಆಶ್ರಯ ನೀಡುವ ಕಾರ್ಯವನ್ನು ಇಸ್ರೇಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು’ ಎಂದು ಟ್ರಂಪ್ ಹೇಳಿದರು.
 
‘ಇದು ಭಿನ್ನವಾದದ್ದು. ಇದುವರೆಗೆ ಚರ್ಚಿಸದಂಥದ್ದು. ಇದೊಂದು ದೊಡ್ಡ ಒಪ್ಪಂದ’ ಎಂದು ಅವರು ಹೇಳಿದರು.
 
‘ಎರಡು ರಾಷ್ಟ್ರ ಪರಿಹಾರ ನೀತಿ ಮತ್ತು ಒಂದು ದೇಶ ಪರಿಹಾರ ನೀತಿ ಬಗ್ಗೆಯೂ ಗಮನಹರಿಸುತ್ತಿದ್ದೇನೆ. ಎರಡೂ ಕಡೆಯವರು ಆಯ್ಕೆ ಮಾಡುವುದಕ್ಕೆ ಸಮ್ಮತಿ ಸೂಚಿಸಲಿದ್ದೇನೆ. ಇದು ಸಂತಸದಾಯಕ ವಿಚಾರವಾಗಿರಲಿದೆ. ಇಸ್ರೇಲ್ ಸಹ ಪಾರದರ್ಶಕತೆ ಮೆರೆಯಬೇಕು’ ಎಂದೂ ಅವರು ಹೇಳಿದ್ದಾರೆ.
 
**
ಎರಡು ರಾಷ್ಟ್ರ ಪರಿಹಾರ ನೀತಿಯಿಂದ ಸಂಘರ್ಷ ಅಂತ್ಯವಾಗದಿದ್ದರೆ ಪರ್ಯಾಯ ಮಾರ್ಗೋಪಾಯಗಳಿಗೆ ಮುಕ್ತ ಚಿಂತನೆ ಹೊಂದಿದ್ದೇವೆ
-ಡೊನಾಲ್ಡ್ ಟ್ರಂಪ್,
ಅಮೆರಿಕದ ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT