ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಾಜಿನಲ್ಲಿ ಆಫ್ಘನ್‌ ಆಟಗಾರರು

Last Updated 16 ಫೆಬ್ರುವರಿ 2017, 19:08 IST
ಅಕ್ಷರ ಗಾತ್ರ
ನವದೆಹಲಿ: ಐಪಿಎಲ್‌ ಹತ್ತನೇ ಆವೃತ್ತಿಗೆ ಬೆಂಗಳೂರಿನಲ್ಲಿ ಫೆಬ್ರುವರಿ 20ರಂದು ನಡೆಯಲಿರುವ ಆಟಗಾರರ ಹರಾಜು ಹಲವು ಕಾರಣಗಳಿಗಾಗಿ ವಿಶೇಷ ಪಡೆದುಕೊಂಡಿದೆ. ಮೊದಲ ಬಾರಿಗೆ ಅಫ್ಘಾನಿಸ್ತಾನದ ಐವರು ಆಟ ಗಾರರಿಗೆ ಹರಾಜಿನಲ್ಲಿ ಅವಕಾಶ ಕೊಡಲಾಗಿದೆ.
 
ವೇಗವಾಗಿ ರನ್ ಗಳಿಸುವ ಬ್ಯಾಟಿಂಗ್‌ಗೆ ಹೆಸರಾಗಿರುವ ಆಫ್ಘನ್‌ನ  ಬ್ಯಾಟ್ಸ್‌ಮನ್‌ ಮಹಮ್ಮದ್‌ ಶೆಹ್ಜಾದ್‌, ಅಸ್ಗರ್‌ ಸ್ಟಾನಿಜಿಯಾ, ವೇಗಿ ದಾವ್ಲತ್‌ ಜದ್ರಾನ್‌, ಆಲ್‌ರೌಂಡರ್‌ ಮಹಮ್ಮದ್‌ ನಬಿ ಮತ್ತು ರಶೀದ್‌ ಖಾನ್‌ ಅರ್ಮನ್‌ ಅವರು ಹರಾಜಿಗೆ ಲಭ್ಯರಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
 
ಹೋದ ವರ್ಷ ಭಾರತದಲ್ಲಿ ನಡೆದ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಆಫ್ಘನ್ ತಂಡದ ಕೆಲ ಆಟಗಾರರು ಉತ್ತಮ ಸಾಮರ್ಥ್ಯ ನೀಡಿದ್ದರು. ಆದ್ದರಿಂದ ಈ ಬಾರಿಯ ಹರಾಜಿಗೆ ಅವರನ್ನು ಪರಿಗಣಿಸಲಾಗಿದೆ.
 
ಶೆಹ್ಜಾನ್‌ 48 ಏಕದಿನ ಮತ್ತು 55 ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ಗಳನ್ನಾಡಿದ್ದಾರೆ. ಏಕದಿನ ಮಾದರಿಯಲ್ಲಿ  1649 ರನ್ ಗಳಿಸಿದ್ದಾರೆ. ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿದೆ. ಜದ್ರಾನ್‌ ಮೂಲಬೆಲೆಯನ್ನು ₹ 30 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ. ರಶೀದ್ ಖಾನ್‌ (₹ 50 ಲಕ್ಷ), ಅಸ್ಗರ್‌ ಸ್ಟಾನಿಜಿಯಾ (₹ 20 ಲಕ್ಷ) ಮತ್ತು ಮಹಮ್ಮದ್‌ ನಬಿ (₹ 30 ಲಕ್ಷ) ಮೂಲ ಬೆಲೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT