ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕಪ್-2017’ಕ್ಕೆ ಅರ್ಹತೆ ಪಡೆದ ಭಾರತ ಮಹಿಳಾ ತಂಡ

ಬಾಂಗ್ಲಾ ವಿರುದ್ಧ ಗೆಲುವು
Last Updated 17 ಫೆಬ್ರುವರಿ 2017, 14:27 IST
ಅಕ್ಷರ ಗಾತ್ರ

ಕೊಲಂಬೊ: ಸೂಪರ್ ಸಿಕ್ಸ್‌ ಹಂತದ ಏಕದಿನ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು 9 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ‘ವಿಶ್ವಕಪ್-2017’ಕ್ಕೆ ಅರ್ಹತೆ ಪಡೆದಿದೆ.

ಕೊಲಂಬೊದಲ್ಲಿ ನಡೆದ  ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್‌ ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಉತ್ತಮ ಫೀಲ್ಡಿಂಗ್‌ ನಡೆಸಿದ ಭಾರತ ತಂಡವು ಬಾಂಗ್ಲಾ ಆಟಗಾರ್ತಿಯರಿಗೆ ಹೆಚ್ಚು ರನ್‌ಗಳಿಸಲು ಅವಕಾಶ ನೀಡಲಿಲ್ಲ. ಬಾಂಗ್ಲಾ 50 ಓವರ್‌ಗಳಲ್ಲಿ 155 ರನ್‌ ಗಳಿಸಲಷ್ಟೇ ಶಕ್ತವಾಯಿತು.

155 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ 33. 3 ಓವರ್ ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 158 ರನ್ ಗಳಿಸಿತು. ಮೋನಾ ಮತ್ತು ಮಿಥಾಲಿ ರಾಜ್‌ ಜೋಡಿ 22 ಬೌಂಡರಿ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 2017ರ ಐಸಿಸಿ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದಿವೆ.

ಸ್ಕೋರ್‌:
ಬಾಂಗ್ಲಾ: 50 ಓವರ್‌, 8 ವಿಕೆಟ್‌  ನಷ್ಟಕ್ಕೆ155 ರನ್‌
ಭಾರತ: 33.3 ಓವರ್‌, 1 ವಿಕೆಟ್‌ ನಷ್ಟಕ್ಕೆ 158 ರನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT