ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಕೊಹ್ಲಿ ಬ್ರಾಂಡ್‌ ಮೌಲ್ಯ ಎಷ್ಟು ಗೊತ್ತಾ?

Last Updated 17 ಫೆಬ್ರುವರಿ 2017, 17:10 IST
ಅಕ್ಷರ ಗಾತ್ರ
ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಅತಿಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ಭಾರತೀಯ ಸೆಲಬ್ರಿಟಿ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.

ಸದ್ಯ ಬಾಲಿವುಡ್‌ ನಟ ಶಾರುಖ್‌ ಖಾನ್‌ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಅವರ ನಂತರದ ಸ್ಥಾನದಲ್ಲಿರುವ ವಿರಾಟ್‌ ಬ್ರಾಂಡ್‌ ಮೌಲ್ಯ ಭಾರತ ಕ್ರಿಕೆಟ್‌ನ ಮೂರೂ ಮಾದರಿಯ ತಂಡಕ್ಕೆ ನಾಯಕರಾದ ಬಳಿಕ ಏರಿಕೆ ಕಂಡಿದೆ.

‘2016ರ ಸೆಲಬ್ರಿಟಿ ಬ್ರಾಂಡ್‌’ ವರದಿಯ ಪ್ರಕಾರ ಕೊಹ್ಲಿ ₹9.2 ಕೋಟಿ ಬ್ರಾಂಡ್‌ ಮೌಲ್ಯ ಹೊಂದಿದ್ದು, ಮೊದಲ ಸ್ಥಾನದಲ್ಲಿರುವ ಶಾರುಖ್‌ ₹13ಕೋಟಿ ಬ್ರಾಂಡ್‌ ಮೌಲ್ಯ ಹೊಂದಿದ್ದಾರೆ. ವಿರಾಟ್‌ ಕೊಹ್ಲಿ ಈಗಿರುವ ತಮ್ಮ ಫಾರ್ಮ್‌ನಲ್ಲಿಯೇ ಮುಂದುವರಿದರೆ ಶೀಘ್ರದಲ್ಲಿಯೇ ಶಾರುಖ್‌ಖಾನ್‌ರವರನ್ನು ಹಿಂದಿಕ್ಕಲಿದ್ದಾರೆ ಎಂದು ಮಾರುಕಟ್ಟೆ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ.

ದೋನಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರಾಟ್‌ ಭಾರತೀಯ ಕ್ರಿಕೆಟ್‌ ರಂಗದಲ್ಲಿ ತಮ್ಮ ಛಾಪನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ಜೊತೆಗೆ 2016ರಲ್ಲಿ 13 ವಿವಿಧ ಕಂಪೆನಿಗಳೊಡನೆ ಒಪ್ಪಂದ ಮಾಡಿಕೊಂಡು ಬ್ರಾಂಡ್‌ ಮೊತ್ತವನ್ನು ₹100ಕೋಟಿಗೆ ಹಿಗ್ಗಿಸಿಕೊಂಡಿದ್ದರು.

ಸದ್ಯ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯ ಮೇಲೆ ಗಮನ ಹರಿಸಿರುವ ವಿರಾಟ್‌, ಉತ್ತಮ ಪ್ರದರ್ಶನ ಮುಂದುವರಿಸಿದರೆ ಅವರ ಬ್ರಾಂಡ್‌ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಕೊಹ್ಲಿ ಬಳಿಯಿರುವ ಬ್ರಾಂಡ್‌ಗಳು: ಪೆಪ್ಸಿ, ಆಡಿ, ವಿಕ್ಸ್‌, ಬೂಸ್ಟ್‌, ಟಿಸ್ಸೂಟ್‌, ಹರ್ಬಲ್‌ ಲೈಫ್‌, ಕೋಲ್ಗೇಟ್‌, ಯುಎಸ್‌ಎಲ್‌, ಟಿವಿಎಸ್‌, ಸ್ಮಾಷ್‌, ನಿತೇಶ್‌ ಎಸ್ಟೇಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT