ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕ ಒಪ್ಪಂದದಿಂದ ಹೊಸ ಅಧ್ಯಾಯ ಆರಂಭವಾಗಲಿದೆ: ಮೇರಿಕೇ ಕಾರ್ಲ್ಸನ್

Last Updated 17 ಫೆಬ್ರುವರಿ 2017, 18:31 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕದ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು, ವಿಶ್ವದ ಇತರ ದೇಶಗಳಿಂದ ಆಗಮಿಸಿರುವ ಸ್ನೇಹಿತರು, ಸೇನಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ರಕ್ಷಣಾ ಇಲಾಖೆಯ ಗುತ್ತಿಗೆದಾರರು ಏರೋ ಇಂಡಿಯಾ 2017 ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸವಾಗಿದೆ ಎಂದು ಅಮೆರಿಕದ ಉಪ ರಾಯಭಾರಿ ಮೇರಿಕೇ ಕಾರ್ಲ್ಸನ್ ಎಂದು ತಿಳಿಸಿದ್ದಾರೆ. 

ಈಗಾಗಲೇ ಅಮೆರಿಕ ಸಹಭಾಗಿತ್ವ ಕುರಿತಂತೆ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಸ್ಪೂರ್ತಿದಾಯಕ ಸಂದೇಶಗಳನ್ನು ರವಾನಿಸಿದ್ದು, ಕೆಲ ವೇದಿಕೆಗಳಲ್ಲಿ ಅದರ ಪ್ರಭಾವವನ್ನು ಕಾಣಬಹುದಾಗಿದೆ. ಈ ಹೊತ್ತಲ್ಲಿ ಕೆಲವೊಂದು ವಿಷಯಗಳನ್ನು ನಾನು ನಿಮ್ಮ ಮುಂದಿಡುತ್ತಿದ್ದೇನೆ.

* ಅಮೆರಿಕ ಮತ್ತು ಭಾರತದ ರಕ್ಷಣಾ ಇಲಾಖೆಯ ಸಂಬಂಧಗಳು ಸದಾ ಉತ್ತಮವಾಗಿವೆ. ಉಭಯ ದೇಶಗಳ ನಡುವಿನ ರಕ್ಷಣಾ ವಹಿವಾಟು 15 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

* ಅಮೆರಿಕದ 2017 ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ನಿಯಮಗಳ ಪ್ರಕಾರ, ಭಾರತವು ಅಮೆರಿಕದ ರಕ್ಷಣಾ ಇಲಾಖೆಯ ಪ್ರಮುಖ ಸಹಭಾಗಿತ್ವ ದೇಶವಾಗಿ ಹೊರಹೊಮ್ಮಿದ್ದು, ರಕ್ಷಣಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಉಭಯ ದೇಶಗಳ ಬಲವರ್ಧನೆಗೆ ತನ್ನದೇ ಆದ ಮಹತ್ವದ ಕಾಣಿಕೆಯನ್ನು ನೀಡಿದೆ.

* ಈ ಬಾರಿಯ ಏರೋ ಶೋನಲ್ಲಿ ಅಮೆರಿಕದ ರಕ್ಷಣಾ ವಲಯಕ್ಕೆ ಸಂಬಂಧಿಸಿದ 20 ಕಂಪನಿಗಳು ಭಾಗವಹಿಸಿರುವುದು ಹೆಮ್ಮೆ ತಂದಿದೆ. ಇದರಲ್ಲಿ ಹೆಚ್ಚಿನ ಕಂಪನಿಗಳು ಈಗಾಗಲೇ ಭಾರತದೊಂದಿಗೆ ಸಹಭಾಗಿತ್ವ ಹೊಂದಿದ್ದು, ಕೆಲ ಕಂಪೆನಿಗಳು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿವೆ.

* ಉಭಯ ದೇಶಗಳ ರಕ್ಷಣೆ ವಿಚಾರದಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ಒಪ್ಪಂದಗಳ ಮೂಲಕ ಹೊಸ ಸಾಧ್ಯತೆಗಳತ್ತ ದಾಪುಗಾಲು ಇಡುತ್ತಿರುವುದು ಖುಷಿ ಕೊಟ್ಟಿದೆ.

ಯಲಹಂಕಾ ಏರೋ ಇಂಡಿಯಾ ಶೋ ಕಾರ್ಯಕ್ರಮದಲ್ಲಿ ಅಮೆರಿಕ ಸಹಭಾಗಿತ್ವದ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ ಅವರು ಏರೋ ಇಂಡಿಯಾ 2017 ತೆರೆದ ಅಮೆರಿಕ ಸಹಭಾಗಿತ್ವ ಪೆವಿಲಿಯನ್ ಘೋಷಿಸಲು ನನಗೆ ಅತೀವ ಸಂತೋಷ ಆಗಿದೆ. ಮುಂಬರುವ ವರ್ಷಗಳಲ್ಲಿ ಕೂಡಾ ಏರೋ ಶೋ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT