ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಧಿ ಬಣ್ಣ ಮುದ್ದಾದ ಮೈಕಟ್ಟು’

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಗುರುಪ್ರಸಾದ್ ಹಾಗೂ ಧನಂಜಯ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾ ‘ಎರಡನೇ ಸಲ’. ಈಗಾಗಲೇ ಬಿಡುಗಡೆಗೊಂಡಿರುವ  ಸಿನಿಮಾದ ಎರಡೂ ಟೀಸರ್ ಹಿಟ್‌ ಆಗಿ ಲಕ್ಷಾಂತರ ಜನರ ಮನಗೆದ್ದಿದೆ.

ಟೀಸರ್‌ನಲ್ಲಿ ಬರುವ ‘ಕಾಫಿ ಸಮಾಚಾರ’ ಮತ್ತು ಸಂಗೀತಾ ಭಟ್‌ ಅವರ ನಗ್ನ ಬೆನ್ನು ಪಡ್ಡೆ ಹುಡುಗರನ್ನು ಮೋಡಿ ಮಾಡಿದೆ. ಇದೇ ಕಾರಣಕ್ಕೆ ಸಂಗೀತಾ ಭಟ್ ಅವರಿಗೆ ‘ಗೋಧಿ ಬಣ್ಣ ಮುದ್ದಾದ ಮೈಕಟ್ಟು’ ಎಂಬ ಬಿರುದೂ ಪ್ರಾಪ್ತವಾಗಿದೆ. ಮುದ್ದಾದ ಮೈಕಟ್ಟಿನ ಸಂಗೀತಾ ಹಂಚಿಕೊಂಡ ಮನದ ಮಾತುಗಳಿವು...

*ಬ್ಯಾಕ್‌ಲೆಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಿ..
ಇದನ್ನು ವಿಶೇಷವಾಗಿ ನೋಡುವ ಅಗತ್ಯವಿಲ್ಲ. ಪಾತ್ರಕ್ಕೆ ಬೇಕಾದ ಹಾಗೆ ನಟಿಸಿದ್ದೀನಿ, ನನ್ನ ಕುಟುಂಬದವರಿಗೂ ಈ ಬಗ್ಗೆ ಯಾವುದೇ ತಕರಾರಿಲ್ಲ. ನನ್ನ ಮೇಲೆ ಅವರಿಗೆ ವಿಶ್ವಾಸವಿದೆ.

*‘ಎರಡನೇ ಸಲ’ ಸಿನಿಮಾದ ಅನುಭವ...
ಗುರುಪ್ರಸಾದ್ ಅವರೊಂದಿಗೆ ಇದು ನನ್ನ ಮೊದಲನೇ ಸಿನಿಮಾ. ಒಳ್ಳೆಯ ಅನುಭವ ನೀಡಿತು. ಹಿರಿಯ ನಟಿ ಲಕ್ಷ್ಮಿ  ಅವರೊಂದಿಗೆ ಅಭಿನಯಿಸಿದ್ದೂ ಖುಷಿಯ ವಿಚಾರ, ಈ ಸಿನಿಮಾದಿಂದ ಧನಂಜಯ್ ಎಂಬ ಒಳ್ಳೆಯ ಗೆಳೆಯನನ್ನು ಪಡೆದುಕೊಂಡೆ. ಕಲಿಕೆ ನಿರಂತರ, ಎಲ್ಲರಿಂದಲೂ ಸಾಕಷ್ಟು ಕಲಿತೆ.

*ನಿರ್ದೇಶಕ ಗುರುಪ್ರಸಾದ್ ಬಗ್ಗೆ ಹೇಳಿ...
ಅವರ ಸಿನಿಮಾ ಯೂನಿಟ್ ಒಂದು ಪ್ರಯೋಗ ಶಾಲೆ. ಅವರು ಮನಸಿನಲ್ಲಿ ಅಂದುಕೊಂಡಂತೆ ಬರದೇ ಇದ್ದರೆ ಮತ್ತೆ ಚಿತ್ರೀಕರಣ ಮಾಡುತ್ತಾರೆ. 
ನೈಜವಾಗಿ ಕಾಣಬೇಕು ಎಂಬ ಕಾರಣಕ್ಕೆ ಈ ಸಿನಿಮಾದಲ್ಲಿ ಮೇಕಪ್ ಮಾಡಿಸಿಲ್ಲ.  ನನ್ನ ಕೈಯಲ್ಲಿ ಹಚ್ಚೆ ಇತ್ತು. ಮೇಕಪ್ ಮೂಲಕ ಅದನ್ನು ಮರೆಮಾಚುತ್ತಿದ್ದರು.

*ಟೀಸರ್ ನೋಡಿದವರು ಇದು ಪೋಲಿ ಸಿನಿಮಾ ಅಂತಿದ್ರು...
ಗುರುಪ್ರಸಾದ್ ಅವರ ಸ್ಟೈಲ್ ಅದೇ ಅಲ್ವಾ. ಕೆಲ ‘ಸಿಗ್ನೇಚರ್ ಡೈಲಾಗ್‌’ಗಳು ಇವೆ. ಇದರಲ್ಲಿ ಪೋಲಿ ಸಂಭಾಷಣೆ ಅನ್ನೋದೇನು ಇಲ್ಲ. ಸುತ್ತಿ ಬಳಸಿ ಕೆಲ ‘ವಿಷಯ’ಗಳನ್ನು ಹೇಳಲಾಗಿದೆ. ಒಂದೇ ಬಗೆಯ ಲವ್‌ ಸ್ಟೋರಿಗಳನ್ನು ಜನ ಎಷ್ಟು ದಿನ ನೋಡುತ್ತಾರೆ. ಹಾಸ್ಯ, ಪ್ರೀತಿ, ಆ್ಯಕ್ಷನ್, ಪತ್ತೇದಾರಿ, ಕೌಟುಂಬಿಕ ಸೇರಿದಂತೆ ಎಲ್ಲ ಕಥೆಯ ಸಿನಿಮಾಗಳೂ ಬರಬೇಕು ಅಲ್ವಾ? ಕಥೆ ಮತ್ತು ಪಾತ್ರಕ್ಕೆ ಪೂರಕವಾಗಿ ನಾನು ಅಭಿನಯಿಸುತ್ತಾ ಹೋಗುತ್ತೇನೆ.

*ಸಿನಿಮಾದ ರೊಮ್ಯಾಂಟಿಕ್ ದೃಶ್ಯಗಳ ಬಗ್ಗೆ ನಿಮ್ಮ ಅಭಿಪ್ರಾಯ
ನನಗೆ ಮುಜುಗರ ಎಲ್ಲೂ ಆಗಲಿಲ್ಲ. ನಾನು ಧನಂಜಯ್ ಒಳ್ಳೆಯ ಸ್ನೇಹಿತರು. ಪಾತ್ರಕ್ಕೆ ಬೇಕಾದ ಹಾಗೆ ಮಾಡಿದ್ದೇನೆ.

*ನಿಜ ಜೀವನದಲ್ಲಿ ನೀವೆಷ್ಟು ರೊಮ್ಯಾಂಟಿಕ್?
ಅಯ್ಯೋ ನಾನು ಬೋರಿಂಗ್ ಹುಡುಗಿ.

*ಹಾಗಾದರೆ ನಿಮ್ಮ ಬಾಯ್‌ಫ್ರೆಂಡ್ ನಿಮ್ಮನ್ನು ಬೋರಿಂಗ್ ಅಂತ ಆರೋಪಿಸುವುದಿಲ್ಲವಾ?
ಹಾಗೇನು ಇಲ್ಲ. ನಾನು ತಿಂಡಿಪೋತಿ. ನನ್ನ ಬಾಯ್‌ಫ್ರೆಂಡ್ ಸುದರ್ಶನ್‌ ಜೊತೆ (ಪ್ರೀತಿಗೀತಿ ಇತ್ಯಾದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ) ಡೇಟಿಂಗ್ ಹೋಗುವಾಗ ರೆಸ್ಟೊರೆಂಟ್‌ಗೆ ಕರೆದುಕೊಂಡು ಹೋಗುತ್ತೀನಿ. ಕಾರ್ನರ್ ಹೌಸ್‌ ಐಸ್‌ಕ್ರೀಂ, ಜಯನಗರ, ರಾಜಾಜಿನಗರ, ಸಂಜಯ್ ನಗರ ಚಾಟ್‌ ಸ್ಟ್ರೀಟ್‌ಗೆ ಹೋಗ್ತೀವಿ.

*ನಿಮ್ಮ ಮುದ್ದಾದ ದೇಹದ ಫಿಟ್‌ನೆಸ್ ಮಂತ್ರ?
ನಾನು ಯಾವುದೇ ಡಯೆಟ್ ಮಾಡೋದಿಲ್ಲ. ನನಗೆ ಅಡುಗೆ ಮಾಡೋದು ಇಷ್ಟ. ಹೊಸ ಶೈಲಿ ಅಡುಗೆ ಮಾಡ್ತೀನಿ. ಚೆನ್ನಾಗಿ ಊಟ ಮಾಡ್ತೀನಿ. ಜೂಂಬಾ ನೃತ್ಯ, ವ್ಯಾಯಾಮ ಮಾಡ್ತೀನಿ.

*ಕೋಪ ಬಂದ್ರೆ ಏನು ಮಾಡ್ತೀರಿ?
ಮನೆ ಕ್ಲೀನ್ ಮಾಡ್ತೀನಿ

*ಯಾವ ರೀತಿಯ ಪಾತ್ರ ನಿಮಗೆ ಇಷ್ಟ?
ಸಾಮಾನ್ಯ ಪಾತ್ರಗಳು ಮಾಡುತ್ತಲೇ ಇರುತ್ತೀವಿ ಅದರಲ್ಲಿ ಏನೂ ವಿಶೇಷವಿಲ್ಲ. ಪ್ರಯೋಗಶೀಲ ಪಾತ್ರ ನನಗೆ ಇಷ್ಟ, ಸವಾಲುಗಳಿರಬೇಕು. ವೇಶ್ಯೆಯಂಥ ಪಾತ್ರ ಮಾಡಬೇಕು, ನಮ್ಮ ಪ್ರತಿಭೆಯ ಅನ್ವೇಷಣೆಯಾಗಬೇಕು.

ಟೀಸರ್ ನೋಡಲು ಲಿಂಕ್‌: http://bit.ly/2kbjtvf

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT