ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಚಿತ್ರಕ್ಕೆ ಬಣ್ಣ ಹಚ್ಚಿದ ಗಡ್ಡಪ್ಪ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ತಿಥಿ’, ‘ತರ್ಲೆ ವಿಲೇಜ್’ ಖ್ಯಾತಿಯ ಗಡ್ಡಪ್ಪ ಮತ್ತೊಂದು ಚಿತ್ರದಲ್ಲಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.  ‘ಪ್ರೊಡಕ್ಷನ್ ನಂಬರ್-2’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.  ಇತ್ತೀಚೆಗೆ ವಡ್ಡರಹಳ್ಳಿಯಲ್ಲಿ ಚಿತ್ರದ ಮುಹೂರ್ತ ನೆರವೇರಿತು. 

‘ಹಳ್ಳಿಯ ಇಬ್ಬರು ಗೌಡರ ಗೆಳೆತನ, ಗೌಡರ ಮಕ್ಕಳ ಜಗಳದ ಸುತ್ತ ಕಥೆ ಹೆಣೆಯಲಾಗಿದ್ದು, ಸಂಪೂರ್ಣ ಮನರಂಜನಾತ್ಮಕವಾಗಿ ಚಿತ್ರವನ್ನು ರೂಪಿಸಲಾಗಿದೆ. ಹಾಸ್ಯದ ಜೊತೆಜೊತೆಗೆ ಪ್ರೀತಿ, ಪ್ರೇಮದ ಬಗ್ಗೆಯೂ ತಿಳಿಸಲಾಗಿದೆ’ ಎನ್ನುತ್ತದೆ ಚಿತ್ರತಂಡ.

ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಎಸ್‌.ರಾಜು ಚಟ್ಟನಹಳ್ಳಿ ಮಾಡಿದ್ದಾರೆ. ಗಡ್ಡಪ್ಪ, ವಿಜಯ ಅರವಿಂದ್, ಅನಖಾ, ಜೋಕರ್ ಹನುಮಂತು, ವೆಂಕಟಾಚಲ, ಶಾಲಿನಿ ಸಂತೋಷ್, ಸುಮಂತ್ ಸೂರ್ಯ ದರ್ಶನ್, ವೇಣು, ಕೆ.ಆರ್.ಪೇಟೆ ತಮ್ಮಣ್ಣ, ಸಿದ್ದರಾಜು ಭೂಪಾಲ್, ಮಂಜುನಾಥ್ ಭದ್ರಾವತಿ, ಪಟೇಲ್ ರಂಗಪ್ಪ, ಹೇಮಂತ್‌ ಗೌಡ, ಸಂಧ್ಯಾ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT