ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ನೀತಿಗೆ ಹೊಸ ಆದೇಶ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ವಾಷಿಂಗ್ಟನ್: ವಲಸೆ ನಿಷೇಧ ವಿಷಯಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಮುಂದಿನ ವಾರ ಹೊಸ ಕಾರ್ಯಕಾರಿ ಆದೇಶ ಹೊರಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದರು.
 
ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಸೆ ನಿಷೇಧಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸ್ಥಗಿತಗೊಳಿಸಬೇಕು ಎಂಬ ನ್ಯಾಯಾಂಗ ಇಲಾಖೆ ಮನವಿಯನ್ನು ಸ್ಯಾನ್ ಫ್ರಾನ್ಸಿಸ್ಕೊದ ನ್ಯಾಯಾಲಯ ಪುರಸ್ಕರಿಸಿದ ಬೆನ್ನಲ್ಲೇ ಈ ಮಾಹಿತಿ ನೀಡಿದ್ದಾರೆ.
 
‘ನಮ್ಮ ದೇಶದ ಕೆಲವು ಉತ್ತಮ ವಕೀಲರು ಹೊಸ ಆದೇಶ ಸಿದ್ಧಪಡಿಸಲು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ದೇಶದ ಜನರನ್ನು ರಕ್ಷಿಸುವಂತಹ ಆದೇಶ ಸಿದ್ಧಪಡಿಸಲಿದ್ದೇವೆ. ನ್ಯಾಯಾಲಯದ ನಿರ್ಧಾರಕ್ಕೆ ಅನುಗುಣವಾಗಿ ಅದು ಸಿದ್ಧವಾಗಲಿದೆ’ ಎಂದು ಟ್ರಂಪ್ ತಿಳಿಸಿದರು. ಆದರೆ, ಹೊಸ ಆದೇಶದ ಕುರಿತು ವಿವರ ನೀಡಲು ಅವರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT