ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಬಾಲ್‌ಬ್ಯಾಡ್ಮಿಂಟನ್‌

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮೂಡುಬಿದಿರೆ: ಭಾರತ ಬಾಲ್‌ ಬ್ಯಾಡ್ಮಿಂಟನ್‌ ಫೆಡರೇಷನ್‌ ಮಾರ್ಗ ದರ್ಶನದಲ್ಲಿ ಇಲ್ಲಿನ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಬಾಲ್‌ಬ್ಯಾಡ್ಮಿಂಟನ್‌ ಸಂಸ್ಥೆಯ ವತಿಯಿಂದ ಫೆಬ್ರುವರಿ 18ರಿಂದ 22 ರವರೆಗೆ ನಡೆಯಲಿರುವ 62ನೇ ಸೀನಿಯರ್‌ ರಾಷ್ಟ್ರೀಯ ಪುರುಷರ ಮತ್ತು ಮಹಿಳಾ ಬಾಲ್‌ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ರಂಗ ಸಜ್ಜುಗೊಂಡಿದೆ.

ಈ ಕೂಟದಲ್ಲಿ ಪಾಲ್ಗೊಳ್ಳುವ ಕರ್ನಾಟಕ ಪುರುಷರ ತಂಡಕ್ಕೆ ಬಿ.ಎನ್‌.ಕಿರಣ್‌ ಕುಮಾರ್‌ ನಾಯಕತ್ವ ವಹಿಸಲಿದ್ದರೆ, ಮಹಿಳಾ ತಂಡಕ್ಕೆ ಎಂ.ಆರ್‌.ಕಾವ್ಯಾ ನೇತೃತ್ವ ವಹಿಸಲಿ ದ್ದಾರೆ. ಇವರಿಬ್ಬರೂ ಆತಿಥೇಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯವರು.

ಪುರುಷರ ತಂಡ: ಬಿ.ಎನ್‌.ಕಿರಣ್‌ ಕುಮಾರ್‌, ವಿಜಯ ಕುಮಾರ್‌, ವಾರಿದಿ, ಗೋಪಾಲ್‌, ಎನ್‌.ವಿ. ಉಲ್ಲಾಸ್‌, ಎಚ್‌.ಎಂ. ರಂಜಿತ್‌, ಎಚ್‌. ಎಂ.ಮಹದೇವ ಸ್ವಾಮಿ, ಮನೀಶ್‌ ಕುಮಾರ್‌, ವೀರೇಂದ್ರ ಪಾಟೀಲ್‌, ಶ್ರೀನಿವಾಸ್‌. ಕೋಚ್‌: ಜಿ.ಬಿ. ನಾಗರಾಜ್‌, ಮ್ಯಾನೇಜರ್‌: ಮಹಮ್ಮದ್‌ ಇಲ್ಯಾಸ್‌.
ಮಹಿಳಾ ತಂಡ: ಎಂ.ಆರ್‌.ಕಾವ್ಯಾ, ಎಂ.ಪಿ.ರಂಜಿತಾ, ಕೆ.ಜಿ.ಯಶಸ್ವಿನಿ, ಜಯಲಕ್ಷ್ಮಿ, ಬಿ.ಡಿ.ಲಾವಣ್ಯ, ಸಂಗೀತಾ, ಎಂ.ಸುಷ್ಮಿತಾ, ಎಸ್‌.ಕೆ.ಪಲ್ಲವಿ, ಡಿ.ಎಸ್‌.ಸುಷ್ಮಿತಾ, ಲತಾ, ಕೋಚ್‌; ಪ್ರವೀಣ್‌ ಕುಮಾರ್‌, ಮ್ಯಾನೇಜರ್‌; ಜಿ.ರಶ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT