ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: 35 ವಾಹನ ಜಪ್ತಿ

Last Updated 17 ಫೆಬ್ರುವರಿ 2017, 19:44 IST
ಅಕ್ಷರ ಗಾತ್ರ
ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಸುತ್ತಮುತ್ತ ಶುಕ್ರವಾರ ಕಾರ್ಯಾಚರಣೆ ನಡೆಸಿದ ಸಾರಿಗೆ ಅಧಿಕಾರಿಗಳು, 35 ವಾಹನಗಳನ್ನು ಜಪ್ತಿ ಮಾಡಿದರು.
 
‘ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ನಿಯೋಜಿಸಿದ್ದ ಜಂಟಿ ಆಯುಕ್ತ ಜೆ.ಜ್ಞಾನೇಂದ್ರಕುಮಾರ್‌ ನೇತೃತ್ವದ ವಿಶೇಷ ತಂಡವು ಈ ಕಾರ್ಯಾಚರಣೆ ನಡೆಸಿತು. 500ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಿ, 185 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಅದರಲ್ಲಿ 35 ವಾಹನಗಳನ್ನು ಜಪ್ತಿ ಮಾಡಿದೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಎಂ.ಕೆ.ಅಯ್ಯಪ್ಪ ತಿಳಿಸಿದರು.
 
‘ಕೆಲ ಶಾಲೆಯ ವಾಹನಗಳು, ಸುಪ್ರೀಂ ಕೋರ್ಟ್‌ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿರುವುದು ಕಂಡುಬಂತು. ಆ ವಾಹನಗಳಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ನಿಗದಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಅಂಥ ಐದು ವಾಹನಗಳನ್ನು ಜಪ್ತಿ ಮಾಡಿದ್ದೇವೆ’ ಎಂದರು.
 
ಓಲಾ, ಉಬರ್‌ ಟ್ಯಾಕ್ಸಿ ವಿರುದ್ಧ ಪ್ರಕರಣ: ನಿಯಮ ಉಲ್ಲಂಘಿಸಿದ ಓಲಾ ಹಾಗೂ ಉಬರ್‌ ಕಂಪೆನಿಯ ಟ್ಯಾಕ್ಸಿಗಳ ವಿರುದ್ಧವೂ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡರು.
 
‘ಟ್ಯಾಕ್ಸಿ ಚಾಲಕರು ಸಮವಸ್ತ್ರ ಧರಿಸಿರಲಿಲ್ಲ, ಟಿಂಟೆಡ್‌ ಗಾಜು ಹಾಕಿಕೊಂಡಿದ್ದರು. 
 
ಸೂಕ್ತ ದಾಖಲೆಗಳೂ ಅವರಲ್ಲಿ ಇರಲಿಲ್ಲ. ಹೀಗಾಗಿ  ಪ್ರಕರಣ ದಾಖಲಿಸಿಕೊಂಡು, 12 ಟ್ಯಾಕ್ಸಿಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಅಯ್ಯಪ್ಪ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT