ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಡಾರ್‌ ಕಣ್ಣಿಗೆ ಮಣ್ಣೆರಚುವ ಕವಚ

Last Updated 17 ಫೆಬ್ರುವರಿ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ಶತ್ರು ದೇಶದ ರಾಡಾರ್‌ಗಳ  ಕಣ್ತಪ್ಪಿಸಬಲ್ಲ ಕವಚವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಂಗಸಂಸ್ಥೆಯಾದ ಕಾನ್ಪುರದ ರಕ್ಷಣಾ ಸಾಧನ ಮತ್ತು ಸಲಕರಣೆ ಸಂಶೋಧನೆ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

ಟ್ಯಾಂಕರ್‌ ನಂತಹ ಯುದ್ಧೋಪಕರಣಗಳು,  ಸೈನಿಕರು, ರಾಡಾರ್‌  ಕಣ್ಣಿಗೆ ಬೀಳದಂತೆ ಮರೆ ಮಾಚಲು ಈ ಕವಚ ಬಳಕೆ ಆಗಲಿದೆ. ಮೈಕ್ರೋವೇವ್‌, ಇನ್‌ಫ್ರಾ ರೆಡ್‌ ಹಾಗೂ ಥರ್ಮಲ್‌... ಮೂರು ಬಗೆಯ ರಾಡಾರ್‌ಗಳ ಕಣ್ಣಿಗೆ ಮಣ್ಣೆರಚುವ ಸಾಮರ್ಥ್ಯ ಈ ಕವಚಕ್ಕಿದೆ.

ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ಡಿಆರ್‌ಡಿಒ ಮಳಿಗೆಯಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ.

‘ಸಂಪೂರ್ಣ ದೇಸಿ ತಂತ್ರಜ್ಞಾನ ಬಳಸಿ    ಈ ಕವಚವನ್ನು ಅಭಿವೃದ್ಧಿಪಡಿಸಿದ್ದೇವೆ. ಇದಕ್ಕೆ ರಾಡಾರ್‌ ಸಂಕೇತವನ್ನು ಹೀರಿಕೊಳ್ಳುವ ವಸ್ತುಗಳನ್ನು ಬಳಸಲಾಗಿದೆ. ತೀರಾ ಸಮೀಪಕ್ಕೆ ಬಂದರೆ ಮಾತ್ರ ಈ ಕವಚವನ್ನು ರಾಡಾರ್‌ ಗುರುತಿಸುತ್ತದೆ. ಸಾಮಾನ್ಯವಾಗಿ ರಾಡಾರ್‌ ಹೊಂದಿರುವ ವಿಮಾನ ಅಷ್ಟು ಸಮೀಪಕ್ಕೆ ಬರಲು ಸಾಧ್ಯವಿಲ್ಲ’ ಎಂದು ಡಿಆರ್‌ಡಿಒ ವಿಜ್ಞಾನಿಯೊಬ್ಬರು  ತಿಳಿಸಿದರು.

ಪ್ಲಾಸ್ಟಿಕ್‌ ತ್ಯಾಜ್ಯದಿಂದ ಗ್ರೀಸ್‌: ಇದೇ ಸಂಸ್ಥೆಯು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಗ್ರೀಸ್‌ ಉತ್ಪಾದಿಸುವ ತಂತ್ರಜ್ಞಾನವನ್ನೂ ಕಂಡುಹಿಡಿದಿದೆ. ಈ ಗ್ರೀಸನ್ನು ಬ್ರಹ್ಮೋಸ್‌ ಕ್ಷಿಪಣಿಯಲ್ಲಿ ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT