ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪಣಿ ಬಿಡಿಭಾಗ ಉತ್ಪಾದನೆ ಒಪ್ಪಂದ

Last Updated 17 ಫೆಬ್ರುವರಿ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕ್ಷಿಪಣಿಗಳ ಬಿಡಿಭಾಗಗಳ ಉತ್ಪಾದನೆ ಸಂಬಂಧ ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಹಾಗೂ ಅಮೆರಿಕದ ರೇತಿಯಾನ್ ವಾರ್‌ಫೇರ್ ಸಿಸ್ಟಮ್ಸ್‌ ಕಂಪೆನಿಗಳು ಶುಕ್ರವಾರ ಒಪ್ಪಂದ ಮಾಡಿಕೊಂಡಿವೆ.

ಒಪ್ಪಂದದ ಪ್ರಕಾರ, ಕ್ಷಿಪಣಿಗೆ ಅಗತ್ಯವಾದ ಬಿಡಿಭಾಗಗಳನ್ನು ಟಿಎಎಸ್‌ಎಲ್‌ ತಯಾರಿಸಿ ಕೊಡಲಿದೆ. ಈ ಕ್ಷಿಪಣಿ ಭೂಮಿಯಿಂದ-ಆಕಾಶಕ್ಕೆ, ಆಕಾಶದಿಂದ ಆಕಾಶಕ್ಕೆ ಚಿಮ್ಮಿ ಎದುರಾಳಿ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಟಿಎಎಸ್‌ಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಕರಣ್ ಸಿಂಗ್, ‘ಕ್ಷಿಪಣಿಗಳಿಗೆ ಬಿಡಿಭಾಗಗಳನ್ನು ಪೂರೈಸುವ ಜಗತ್ತಿನ ಪ್ರಮುಖ ಕಂಪೆನಿಯಾಗುವ ಗುರಿ ನಮ್ಮದು’ ಎಂದು ಹೇಳಿದರು.
ಟಾಟಾ ಸನ್ಸ್‌ ಸಂಸ್ಥೆಯ ಮುಖ್ಯಸ್ಥ ರತನ್‌ ಟಾಟಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT