ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟ್ಲ ಸಮೀಪದ ಕೇಪು–ಮಾಣಿಲದಲ್ಲಿ ಬೆಂಕಿ

Last Updated 18 ಫೆಬ್ರುವರಿ 2017, 6:42 IST
ಅಕ್ಷರ ಗಾತ್ರ
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಕೇಪು ಮತ್ತು ಮಾಣಿಲ ಗ್ರಾಮಗಳ ಎರಡು ಕಡೆ ಗಳ ಅರಣ್ಯಕ್ಕೆ ಶುಕ್ರವಾರ ಮತ್ತೆ ಬೆಂಕಿ ತಗುಲಿದ ಪರಿಣಾಮ ಹಲವು ಬೆಲೆ ಬಾಳುವ ಮರಗಳು ಭಸ್ಮಗೊಂಡಿವೆ.
 
ಮಾಣಿಲ ಗ್ರಾಮದ ಮಾಣಿ ಮೂಲೆ, ಸುಣ್ಣಂಬಳ ಎಂಬಲ್ಲಿರುವ ಅರಣ್ಯಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗು ಲಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ವಿಪರೀತ ಗಾಳಿ ಬೀಸಿ ದ್ದರಿಂದ ಬೆಂಕಿಯ ತೀವ್ರತೆ ಮತ್ತೆ ಮುಂದುವರೆದಿದೆ. 
 
ಈ ಅರಣ್ಯದ ಸಮೀಪ ರಬ್ಬರ್ ತೋಟ ಹಾಗೂ ಖಾಸಗಿ ಜಾಗಗ ಳಿದ್ದು, ಸಾರ್ವಜನಿಕರನ್ನು ಆತಂಕಪಡುವಂತೆ ಮಾಡಿದೆ. ಬಳಿಕ ಮಾಣಿಲ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಅವರ ತಂಡ ವಿವಿಧ ಕಡೆಗಳ ಆಗ್ನಿಶಾ ಮಕ ದಳಕ್ಕೆ ಮಾಹಿತಿ ನೀಡಿತು.  ಪುತ್ತೂರು, ಬಂಟ್ವಾಳ ತಾಲ್ಲೂಕಿನ ಎರಡು ವಾಹನಗಳು ಬಂದರೂ ಅರಣ್ಯ ದಲ್ಲಿ ವಾಹನ ತೆರಳಲು ಸರಿಯಾದ ವ್ಯವ ಸ್ಥೆಯಿಲ್ಲದೇ ಪರದಾಡಿದವು. 
 
ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಸತತ ಪ್ರಯತ್ನಪಟ್ಟಿದ್ದಾರೆ. ರಾತ್ರಿವರೆಗೂ ಕಾರ್ಯಾಚರಣೆ ಮುಂದುವರಿಸಿದ್ದು, ಬೆಂಕಿಯ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ರಾತ್ರಿ ವೇಳೆ ಬೆಂಕಿಯ ತೀವ್ರತೆ ಹೆಚ್ಚಾ ಗುವ ಮುನ್ಸೂಚನೆ ಎದ್ದು ಕಾಣುತ್ತಿದ್ದು, ಇನ್ನಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT