ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಧೋರಣೆಗೆ ಆಕ್ಷೇಪ

ಕುಂದಾಪುರ: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 18 ಫೆಬ್ರುವರಿ 2017, 6:50 IST
ಅಕ್ಷರ ಗಾತ್ರ
ಕುಂದಾಪುರ: ಸದಸ್ಯರ ಗಮನಕ್ಕೆ ತಾರದೆ ಶಾಲೆಗಳಿಗೆ ಪೀಠೋಪಕರಣ, ನಕಲಿ ವರ್ಗಾವಣೆ ಪತ್ರಗಳ ಕುರಿತು ಶಿಕ್ಷಣ ಇಲಾಖೆ ಮೃದು ಧೋರಣೆ, ನಿಯ ಮಾವಳಿ ಪುಸ್ತಕ ನೀಡದೇ ಇರುವುದು, ಅಂಗನವಾಡಿ ಸಹಾಯಕಿಯರ ನೇಮಕ ದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೇ ಇರುವ ಕುರಿತು ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 
ಶಾಲೆಗಳಿಗೆ ಪೀಠೋಪಕರಣಗಳ ಸರಬರಾಜು ಮಾಡುವ ವಿಚಾರದಲ್ಲಿ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಸದಸ್ಯ ಕರುಣ ಪೂಜಾರಿ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ವಾಸುದೇವ ಪೂಜಾರಿ, ಉದಯ ಪೂಜಾರಿ, ಜಗದೀಶ ಪೂಜಾರಿ, ಪುಷ್ಪ ರಾಜ್‌ ಶೆಟ್ಟಿ ಹಾಗೂ ಉಮೇಶ್‌ ಶೆಟ್ಟಿ ಅವರು ಧ್ವನಿಗೂಡಿಸಿದರು.  
 
ಪೀಠೋಪಕರಣ ಖರೀದಿ ವಿಚಾರ ಸಭೆಯಲ್ಲಿ ಇಒ ಹಾಗೂ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ಸದಸ್ಯರ ಪ್ರಶ್ನೆಗೆ ಉತ್ತರ ಸಿಗದೇ ಇದ್ದರೇ ಸಭೆಯಲ್ಲಿ ಇರುವುದು ಸರಿಯಲ್ಲ, ಸಭೆ ಯಿಂದ ಹೊರ ಹೋಗುತ್ತೇವೆ ಎಂದು ಉಮೇಶ ಶೆಟ್ಟಿ ಹೇಳಿದರು. 
 
ತಾ.ಪಂ ಇಒ ಅವರು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿರುವ ಟೆಂಡರ್ ಪ್ರತಿ ನೀಡುವಂತೆ ಕೇಳಿದಾಗ ಸದಸ್ಯರ ಆಕ್ರೋಶ ಮತ್ತಷ್ಟು ಹೆಚ್ಚಿತ್ತು. ಸದಸ್ಯ ಪುಷ್ಪರಾಜ ಶೆಟ್ಟಿ ಅವರು ಶಿಕ್ಷಣ ಅಧಿಕಾರಿಗಳು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. 
 
ಸಭೆಯ ನಿಯಾಮವಳಿ ಪುಸ್ತಕ ನೀಡುವುದು ಕಡ್ಡಾಯ. 6 ನೇ ಸಾಮಾನ್ಯ  ಸಭೆ ನಡೆಯುತ್ತಿದ್ದರೂ ಸದಸ್ಯರಿಗೆ ನಿಯಮಾವಳಿಯ ಪುಸ್ತಕ ನೀಡುವ ಕೆಲಸ ಆಗಿಲ್ಲ ಎಂದು ಜ್ಯೋತಿ ಪುತ್ರನ್, ಪುಷ್ಪರಾಜ ಶೆಟ್ಟಿ, ಕರುಣ ಪೂಜಾರಿ ಆಗ್ರಹಿಸಿದರು.
 
ಅಂಗನವಾಡಿ ಸಹಾಯಕಿಯರ ನೇಮಕದ ವೇಳೆ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕು. ಬೇರೆ ಗ್ರಾಮದವರನ್ನು ನೇಮಕ ಮಾಡುವುದರಿಂದ ಸಮಸ್ಯೆ ಉಂಟಾಗುತ್ತದೆ. ಸ್ಥಳೀಯರಿಗೆ ಆದ್ಯತೆ ಸಿಗಬೇಕು. ಸಿಡಿಪಿಒ ಪ್ರಭಾರ ಹೊಣೆ ಯಾರಿಗೆ ನೀಡಲಾಗಿದೆ ಎನ್ನುವ ಕುರಿತು ಮಾಹಿತಿ ಇಲ್ಲ ಎಂದು ಸದಸ್ಯೆ ಇಂದಿರಾ ಶೆಟ್ಟಿ ಆರೋಪಿಸಿದರು. ಹಲವಾರು ಇಲಾಖೆಯಲ್ಲಿ ಪ್ರಭಾರ ಅಧಿಕಾರಿಗಳನ್ನು ನೇಮಕ ಮಾಡಿರುವುದರಿಂದ ಆಡಳಿ ತಕ್ಕೆ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.  
 
ಕೆಎಸ್ಆರ್‌ಟಿಸಿ ಬಸ್‌ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಸುರೇಂದ್ರ ಖಾರ್ವಿ, ಜಗದೀಶ ಪೂಜಾರಿ, ಉಮೇಶ ಶೆಟ್ಟಿ ಪರವಾನಗಿ ನೀಡಲಾಗಿರುವ ಬಸ್‌ ಸಂಚಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಚ್‌. ರಾಜೂ ದೇವಾಡಿ ಅವರು ಕೆ.ಗೋಪಾಲ ಪೂಜಾರಿ ಅವರಿಗೆ ಸಮಸ್ಯೆ ಕುರಿತು ಗಮನ ಸೆಳೆಯೋಣ  ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗವೀರ ಅಧ್ಯಕ್ಷತೆ ವಹಿಸಿ ದ್ದರು.ಉಪಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಕಡ್ಕೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಕಾರ್ಯನಿರ್ವಹಣಾದಿಕಾರಿ ಚನ್ನಪ್ಪ ಮೊಯಿಲಿ ಇದ್ದರು.
 
* ನಕಲಿ ಶಾಲಾ ವರ್ಗಾವಣೆ ಪತ್ರದ ಪ್ರಕರಣ ಬೆಳಕಿಗೆ ಬಂದು ಇಷ್ಟು ದಿನಗಳಾದರೂ ಇನ್ನೂ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ?
- ಕರುಣ ಪೂಜಾರಿ, ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT