ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರ್ಸ್‌ಗಳ ಅನಾದರ ಬೇಡ’

ನರ್ಸಿಂಗ್ ರಿಸರ್ಚ್‌ ಸೊಸೈಟಿ ಆಫ್ ಇಂಡಿಯಾದ ದಕ್ಷಿಣ ಭಾರತ ಸಮ್ಮೇಳನ
Last Updated 18 ಫೆಬ್ರುವರಿ 2017, 9:35 IST
ಅಕ್ಷರ ಗಾತ್ರ
ವಿಜಯಪುರ: ನರ್ಸಿಂಗ್ ಕ್ಷೇತ್ರದಲ್ಲಿ ಭಾರತೀಯ ನರ್ಸ್‌ಗಳು ಜಗತ್ತಿನಾದ್ಯಂತ ಮನ್ನಣೆ ಪಡೆದಿದ್ದಾರೆ. ಇದಕ್ಕೆ ಅವರ ಪ್ರಾಮಾಣಿಕತೆ, ನಿಸ್ವಾರ್ಥ ಸೇವೆ ಕಾರಣವಾಗಿವೆ ಎಂದು ಜಲಸಂಪನ್ಮೂಲ ಸಚಿವ, ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
 
ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನಲ್ಲಿ ನಡೆದ ನರ್ಸಿಂಗ್ ರಿಸರ್ಚ್‌ ಸೊಸೈಟಿ ಆಫ್ ಇಂಡಿಯಾದ ದಕ್ಷಿಣ ಭಾರತ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ ಭಾರತೀಯ ವೈದ್ಯರು, ನರ್ಸ್‌ಗಳು ಸೇವೆಯಲ್ಲಿದ್ದು, ಇವರ ಸೇವಾ ತತ್ಪರತೆ ಎಲ್ಲ ದೇಶಗಳ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
 
ನಾವು ವೈದ್ಯರನ್ನು ಗೌರವದಿಂದ ಕಂಡು ಅವರಿಗೆ ಉನ್ನತ ಸ್ಥಾನ ಕಲ್ಪಿಸಿದ್ದೇವೆ. ಆದರೆ ನರ್ಸ್‌ಗಳ ಬಗ್ಗೆ ಅನಾದರ ಹೊಂದಿದ್ದೇವೆ. ನರ್ಸ್‌ ಸಹೋದರ, ಸಹೋದರಿಯರು ವೈದ್ಯರ ಎಲ್ಲ ಚಿಕಿತ್ಸೆ ಮತ್ತು ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿ, ರೋಗಿಗಳೊಂದಿಗೆ ತೊಡ ಗಿಸಿಕೊಂಡಿರುತ್ತಾರೆ. ಕಾರಣ ವೈದ್ಯರಷ್ಟೇ ಪ್ರಾಮುಖ್ಯತೆಯನ್ನು ನರ್ಸಿಂಗ್ ಸಮುದಾಯಕ್ಕೆ ನೀಡಬೇಕಿದೆ ಎಂದರು. 
 
ರೋಗಿಗಳು, ಅವರ ಸಂಬಂಧಿಕರು ಸದಾ ಉತ್ತಮ ಸೇವೆಯನ್ನು, ವಿನಯ ವನ್ನು ಬಯಸುತ್ತಾರೆ. ಆತ್ಮೀಯತೆಯಿಂದ ವಾತ್ಸಲ್ಯ ವಾತಾವರಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಅಗತ್ಯತೆ ಇದೆ ಎಂದರು.
 
ನರ್ಸಿಂಗ್ ರಿಸರ್ಚ್‌ ಸೊಸೈಟಿ ಆಫ್ ಇಂಡಿಯಾ ಕಾರ್ಯದರ್ಶಿ ಡಾ.ಆ್ಯಂಜಲ್ ಗ್ಯಾಂಡರ್ ಪ್ರಾಸ್ತಾವಿಕವಾಗಿ ಮಾತನಾಡಿ ಆಸ್ಪತ್ರೆಯಲ್ಲಿ ರೋಗಿಗಳ ವಾಸ್ತವ್ಯದ ದಿನಗಳು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೇವೆಯಲ್ಲಿ ಉತ್ಕೃಷ್ಟತೆ ತರಬೇಕು. ಇದರಿಂದ ರೋಗಿಗಳ ಹಾಗೂ ಆಸ್ಪತ್ರೆಯ ವೆಚ್ಚ ಕಡಿಮೆಯಾಗಿ,  ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗುವುದು ಎಂದರು.
 
ನರ್ಸಿಂಗ್ ರಿಸರ್ಚ್‌ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷೆ ಡಾ.ಅಸ್ಸೂಮಾ ಬಿವಿ, ಬಿಎಲ್‌ಡಿಇ ವಿ.ವಿ. ಕುಲಪತಿ ಡಾ.ಎಂ.ಎಸ್.ಬಿರಾದಾರ, ಡಾ.ಶೊಲಮನ್ ಚೋಪಡೆ ಮಾತ ನಾಡಿದರು. ಸಂಘಟಕರಾದ ಕವಿತಾ ಕೆ, ಸುಚಿತ್ರಾ ರಾಟಿ, ಶಕುಂತಲಾ, ಪ್ರಕಾಶ ಸಿದ್ದಾಪುರ, ಬಸೀರ, ಸಿದ್ದು ತಡಲಗಿ, ನಿಂಗನಗೌಡ ಇದ್ದರು.  ಆಂಧ್ರಪ್ರದೇಶ, ತಮಿಳು ನಾಡು, ಕೇರಳ, ಪುದುಚೇರಿ, ಮಹಾರಾಷ್ಟಗಳಿಂದ 300 ಪ್ರತಿ ನಿಧಿಗಳು  ಪಾಲ್ಗೊಂಡಿದ್ದರು.
 
* ದೇಶ–ವಿದೇಶಗಳ ತಾಂತ್ರಿಕತೆಯನ್ನು ನರ್ಸಿಂಗ್ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಈ ರೀತಿಯ ಸಮ್ಮೇಳನಗಳು ಸಹಕಾರಿಯಾಗಿವೆ
-ಎಂ.ಬಿ.ಪಾಟೀಲ, ಜಿಲ್ಲಾ  ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT