ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂ ಧರ್ಮ ಅವಹೇಳನ ಖಂಡಿಸಿ ಪ್ರತಿಭಟನೆ

Last Updated 18 ಫೆಬ್ರುವರಿ 2017, 9:51 IST
ಅಕ್ಷರ ಗಾತ್ರ
ಹುಬ್ಬಳ್ಳಿ:  ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ರವಾನಿಸುತ್ತಿರುವುದನ್ನು ಖಂಡಿಸಿ ಹುಬ್ಬಳ್ಳಿ–ಧಾರವಾಡ ಮುಸ್ಲಿಂ ಇತ್ತೆಹಾದ್‌ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
 
ಇಲ್ಲಿನ ತಹಶೀಲ್ದಾರ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದ ಸಂಘಟನೆಯ ಪದಾಧಿಕಾರಿಗಳು, ಇಸ್ಲಾಂ ಧರ್ಮವನ್ನು ಅವಹೇಳನ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
 
ಅವಳಿ ನಗರದಲ್ಲಿ ಹಿಂದೂ–ಮುಸ್ಲಿಂ ಧರ್ಮಿಯರು ಪ್ರೀತಿ, ವಿಶ್ವಾಸದಿಂದ ಕೂಡಿ ಬಾಳುತ್ತಿದ್ದು, ಇದನ್ನು ಸಹಿಸಲಾಗದ ಕೆಲ ಮತಾಂಧ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿಯವರನ್ನು ಕೀಳಾಗಿ ಬಿಂಬಿಸುವ ಮೂಲಕ ಕೋಮುಗಲಭೆಗೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಸಾಮಾಜಿಕ ಜಾಲತಾಣದಲ್ಲಿರುವ ಸಂದೇಶಗಳು ಹಾಗೂ ಪೋಸ್ಟರ್‌ಗಳು ಮುಸ್ಲಿಮರನ್ನು ಉದ್ರೇಕಿಸುವಂತಿವೆ. ಈ ರೀತಿ ಘಟನೆಗಳು ಮುಂದುವರಿದರೆ ಶಾಂತಿ ಕದಡುವ ಸಾಧ್ಯತೆ ಇದೆ. ತಕ್ಷಣ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಕಾನೂನುಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿ–ಧಾರವಾಡ ಮುಸ್ಲಿಂ ಇತ್ತೆಹಾದ್‌ ಸಂಘಟನೆ ಅಧ್ಯಕ್ಷ ಶಫಕತ್‌ ಅಲಿ, ಉಪಾಧ್ಯಕ್ಷ ಹಮೀದ್‌ ಬಂಗಾಲಿ, ಕಾರ್ಯದರ್ಶಿ ಮಹಮ್ಮದ್‌ ರಫೀಕ್‌ ಲಷ್ಕರ್‌,  ರಫೀಕ್‌ ಡೊಮಿನಿ, ಮಜಹರ್‌ ಜಹಗೀರ್‌ದಾರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT