ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರರನ್ನು ಬದುಕಲು ಬಿಡುವುದೇ ಧರ್ಮ

ಸಾಸಲವಾಡ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಧರ್ಮಸಭೆಯಲ್ಲಿ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯ
Last Updated 18 ಫೆಬ್ರುವರಿ 2017, 11:16 IST
ಅಕ್ಷರ ಗಾತ್ರ
ಕೂಡ್ಲಿಗಿ: ಉಜ್ಜನಿ ಸದ್ಧರ್ಮ ಪೀಠಕ್ಕೂ, ಸಾಸಲವಾಡ ಗ್ರಾಮಕ್ಕೂ ಶತಮಾನ­ಗಳಷ್ಟು ಹಳೆಯದಾದ ಬಾಂಧವ್ಯ ಹೊಂದಿವೆ ಎಂದು ಉಜ್ಜನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜ­ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ ಹೇಳಿದರು.
 
ಅವರು  ತಾಲ್ಲೂಕಿನ ಸಾಸಲವಾಡ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವದ ನಂತರ ನಡೆದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.
ಸಾಸಲವಾಡ ಗ್ರಾಮದಲ್ಲಿನ ಅನೇಕ ವ್ಯಾಜ್ಯಗಳನ್ನು ಬಗೆಹರಿಸಿದ ಕೀರ್ತಿ ಉಜ್ಜನಿ ಸದ್ಧರ್ಮ ಪೀಠಕ್ಕಿದ್ದು, ಅದರ ದಾಖಲೆಗಳು ಗ್ರಾಮದಲ್ಲಿ ಇಂದಿಗೂ ಲಭ್ಯವಿವೆ. ನಾವು ಬದುಕಿ ಮತ್ತೊಬ್ಬರನ್ನು ಬದಕಲು ಬಿಡುವುದೇ ಧರ್ಮವಾಗಿದೆ. ಪರರ ವಸ್ತುಗಳ ಮೇಲಿನ ಮೋಹವನ್ನು ತೊರೆದು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವಂತಹ ಗುಣಗಳನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಎಂದು ಹೇಳಿದರು.
 
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ. ನಾಗೇಂದ್ರ ಮಾತನಾಡಿ, ‘ನಾನು ಪಕ್ಷೇತರ ಶಾಸಕನಾಗಿರುವುದರಿಂದ ನಮಗೆ ಅನುದಾನ ಕಡಿಮೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದ್ದು ಬಿ.ಎಸ್. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಲ್ಲಿದ್ದು ಆ ಸಮಯದಲ್ಲಿ ಭದ್ರ ಮೇಲ್ದಾಂಡೆ ಯೋಜನೆ ಜಾರಿಗೊಳಿಸುವ ಮೂಲಕ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುವುದು. ಇಲ್ಲವಾದಲ್ಲಿ ತುಂಗಭದ್ರ ಡ್ಯಾಂ ಹಿನ್ನೀರಿನಿಂದದಾರೂ ಕೆರೆಗಳಿಗೆ ನೀರು ತುಂಬಿಸುವುದಾಗಿ ಅವರು ಭರವಸೆ ನೀಡಿದರು.
 
ಕೊಟ್ಟೂರು ಡೋಣೂರು ಚಾನಕೋಟಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಕೊಟ್ಟೂರು ಹಿರೇಮಠದ ಕ್ರಿಯಾಮೂರ್ತಿ ಶಂಕರ್ ಸ್ವಾಮಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಎಂ.ಜೆ. ಹರ್ಷವರ್ದನ, ತಾಲ್ಲೂಕು ಪಂಚಾಯ್ತಿ ಸದಸ್ಯ ಚಿನ್ನಾಪ್ರಾಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರುಸಪ್ಪ, ಎಪಿಎಂಸಿ ಅಧ್ಯಕ್ಷ ಸಿ.ಜಿ. ಮಂಜುನಾಥ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಗುಡೇಕೋಟೆ ರಾಜಣ್ಣ ಮುಖಂಡರಾದ ಮಂಜುನಾಥ, ಟಿ.ಜಿ. ಮಲ್ಲಿಕಾರ್ಜುನ, ಗ್ರಾಮದ ಮುಖಂಡ­ರಾದ ಎಸ್.ಜೆ,ಎಂ, ಗುರುಸ್ವಾಮಿ, ಡಾ. ಟಿ.ಎಂ. ವಿರುಪಾಕ್ಷಯ್ಯ ಮುಂತಾದವರು ವೇದಿಕೆಯಲ್ಲಿದ್ದರು. ಇದಕ್ಕೂ ಮುನ್ನ ಗ್ರಾಮದಲ್ಲಿ ಉಜ್ಜನಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಸಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT