ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್‌ ಬಳಸಿದ ‘ಟೆಲಿಫೋನ್’ ಹರಾಜಿಗೆ ‌ಚಿಂತನೆ

Last Updated 18 ಫೆಬ್ರುವರಿ 2017, 14:28 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಅವರು ಬಳಸುತ್ತಿದ್ದ ‘ಟೆಲಿಫೋನ್’ಅನ್ನು ಅಮೆರಿಕದ ಅಲೆಕ್ಸಾಂಡರ್‌ ಐತಿಹಾಸಿಕ ವಸ್ತು ಸಂಗ್ರಹ ಸಂಸ್ಥೆ ಹರಾಜು ಹಾಕಲು ಚಿಂತಿಸಿದೆ.

ತನ್ನ ಅಡಳಿತ ಅವಧಿಯಲ್ಲಿ ಹಿಟ್ಲರ್‌ ಎಲ್ಲ ಆದೇಶಗಳನ್ನು ಹೊರಡಿಸಲು ಬಳಸುತ್ತಿದ್ದ ವೈಯಕ್ತಿಕ ದೂರವಾಣಿ ಇದ್ದಾಗಿತ್ತು.

1945ರಲ್ಲಿ ಸರ್ವಾಧಿಕಾರಿ ಹಿಟ್ಲರ್‌ ಅಡಳಿತಾವಧಿ ಮುಕ್ತಾಯದ ನಂತರ ಈ ದೂರವಾಣಿ ರಷ್ಯಾ ಭದ್ರತಾಪಡೆಗಳ ವಶದಲ್ಲಿತ್ತು. ರಷ್ಯಾ ‘ಟೆಲಿಫೋನ್’ಅನ್ನು ಇಂಗ್ಲೆಂಡ್‌ಗೆ ಉಡುಗೋರೆಯಾಗಿ ನೀಡಿತ್ತು. ಬ್ರಿಟೀಷ್‌ ಬ್ರಿಗೇಡಿಯರ್ ಸರ್‌ ರಾಲ್ಫ್‌ ರೇನಾರ್‌ ಬಂಕರ್‌ ರಷ್ಯಾಗೆ ಭೇಟಿ ನೀಡಿದ ವೇಳೆ ರಷ್ಯಾದ ಸೇನಾಧಿಕಾರಿಯೊಬ್ಬರು ರೇನಾರ್‌ ಬಂಕರ್‌ ಅವರಿಗೆ ಉಡುಗೋರೆಯಾಗಿ ನೀಡಲಾಗಿತ್ತು.

ದೂರವಾಣಿ ಮೂಲತಃ ಕಪ್ಪು ಬಣ್ಣದ್ದಾಗಿತ್ತು. ಆದರೆ, ಹಿಟ್ಲರ್‌ನ ಪೌರುಷತ್ವ ಸಂಕೇತಿಸುವ ಹಾಗೇ ಕಪ್ಪು ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾಯಿಸಲಾಯಿತ್ತು.

‘ಟೆಲಿಫೋನ್’ಅನ್ನು ಹರಾಜಿಗೆ ಇಡಲಾಗಿದ್ದು, ಇದು ₹13.41 ಕೋಟಿಯಿಂದ 20.12 ಕೋಟಿಗಳಿಗೆ ಹರಾಜಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT