ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ತಾನ ಸಂಸತ್ತಿನಲ್ಲಿ ಅನುಮೋದನೆ

Last Updated 18 ಫೆಬ್ರುವರಿ 2017, 16:25 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಬಹುನಿರೀಕ್ಷಿತ ಹಿಂದೂ ವಿವಾಹ ಕಾಯ್ದೆ ಮಸೂದೆಗೆ ಪಾಕಿಸ್ತಾನ ಸಂಸತ್ತು ಶನಿವಾರ ಅನುಮೋದನೆ ನೀಡಿದೆ.

ಹಿಂದೂ ವಿವಾಹ ಕಾಯ್ದೆ 2017 ರ ಅನ್ವಯ ವೈಯಕ್ತಿಕ ಹಿಂದೂ ಕಾನೂನು ಜಾರಿಗೆ ಶುಕ್ರವಾರ ಮಂಡಿಸಿದ್ದ ಅರ್ಜಿಗೆ ಸಂಸತ್‌ ಭವನದಲ್ಲಿ ಒಪ್ಪಿಗೆ ನೀಡಲಾಗಿತ್ತು.

ಪಾಕ್‌ ಸಂಸತ್ತಿನ ಕೆಳಮನೆ ಅಥವಾ ನ್ಯಾಷನಲ್‌ ಅಸೆಂಬ್ಲಿಯಲ್ಲಿ 2015 ಸೆಪ್ಟೆಂಬರ್‌ 26 ರಂದು ಈ ಕಾಯ್ದೆ ಜಾರಿಗೆ ಹಸಿರು ನಿಶಾನೆ ನೀಡಿತ್ತು. ಇದೀಗ ಲೋಕಸಭೆಯಲ್ಲೂ ಅನುಮೋದನೆ ದೊರೆತಿದೆ. ರಾಷ್ಟ್ರಪತಿ ಅಂಕಿತ ದೊರೆತರೆ ಕಾಯ್ದೆಗೆ ಶಾಸನಬದ್ಧ ಮಾನ್ಯತೆ ಸಿಗಲಿದೆ.

ಇದರಿಂದ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂಗಳಿಗೆ ವಿವಾಹ, ವಿವಾಹ ನೊಂದಣಿ, ಮರುವಿವಾಹ ಮತ್ತು ವಿವಾಹಕ್ಕೆ ನಿಗದಿತ ವಯಸ್ಸು ಮೀಸಲಾತಿ ಸೇರಿದಂತೆ ಇನ್ನಿತರ ಮಹತ್ವದ ಕಾನೂನುಗಳು ಅನ್ವಯವಾಗಲಿವೆ.

ಹಿಂದೂ ಸಮುದಾಯಕ್ಕೆ ಪಾಕಿಸ್ತಾನದಲ್ಲಿ ದೊರೆತಿರುವ ಮೊಟ್ಟಮೊದಲ ಸಂವಿಧಾನಾತ್ಮಕ ವಿಧೇಯಕ ಇದಾಗಿದೆ.

ಪಾಕ್‌ನ ಪಂಜಾಬ್‌, ಬಲೂಚಿಸ್ತಾನ, ಖೈಬರ್‌ ಪಕ್‌ತುಕ್ವ ಮತ್ತು ಸಿಂಧ್‌ ಪ್ರಾಂತ್ಯಗಳಲ್ಲಿ ನೆಲೆಸಿರುವ ಹಿಂದೂಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಕಾನೂನು ಸಚಿವ ಜಾಹಿದ್‌ ಹಮಿದ್‌ ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗೆ ಯಾರಿಂದಲೂ ವಿರೋಧ ವ್ಯಕ್ತವಾಗಲಿಲ್ಲ. ಸರ್ವ ಪಕ್ಷಗಳು ಮಸೂದೆ ಜಾರಿಗೆ ಸಹಮತ ಸೂಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT