ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ₹ 114 ಕೋಟಿ ಬಿಡುಗಡೆ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಕೈಗಾರಿಕಾ ಪ್ರದೇಶ ಹಾಗೂ ವಸಾಹತುಗಳ ಅಭಿವೃದ್ಧಿಗೆ ಸರ್ಕಾರ ₹ 114 ಕೋಟಿ ಬಿಡುಗಡೆ ಮಾಡಿದೆ.

ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಏರೋಸ್ಪೇಸ್‌ ಕಾಮನ್‌ ಫಿನಿಷಿಂಗ್‌ ಫೆಸಿಲಿಟಿ ಸೆಂಟರ್‌ ಸ್ಥಾಪಿಸಲು ₹ 20 ಕೋಟಿ ಮತ್ತು ಸಿಪೆಟ್‌ ಸಂಸ್ಥೆಯಿಂದ ಅಡ್ವಾನ್ಸ್ ಪಾಲಿಮರ್‌ ಡಿಸೈನ್ ಡೆವಲಪ್‌ಮೆಂಟ್‌ ರಿಸರ್ಚ್‌ ಲ್ಯಾಬರೇಟರಿ (ಎಪಿಡಿಡಿಆರ್‌ಎಲ್) ಸ್ಥಾಪಿಸಲು ₹ 10 ಕೋಟಿ ಬಿಡುಗಡೆ ಮಾಡಿದೆ.
ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಎಚ್ಎಎಲ್ ಸಂಸ್ಥೆಗೆ ಪರ್ಯಾಯ ರಸ್ತೆ ಕಲ್ಪಿಸಲು ₹ 4.80 ಕೋಟಿ ಬಿಡುಗಡೆ ಮಾಡಿ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಕೈಗಾರಿಕಾ ಪ್ರದೇಶಕ್ಕೆ ₹ 24 ಕೋಟಿ, ಮೈಸೂರಿನ ನಂಜನಗೂಡು ಮತ್ತು ಹೆಬ್ಬಾಳ ಕೈಗಾರಿಕಾ ಪ್ರದೇಶಕ್ಕೆ ₹9.63 ಕೋಟಿ,
ಧಾರವಾಡದ ಬೇಲೂರು ಕೈಗಾರಿಕಾ  ಪ್ರದೇಶಕ್ಕೆ ₹13.50 ಕೋಟಿ, ಹುಬ್ಬಳ್ಳಿ ಕೈಗಾರಿಕಾ (ಗೋಕಾಕ್‌ ರಸ್ತೆ) ವಸಾಹತುಗೆ ₹5 ಕೋಟಿ, ಬೆಂಗಳೂರು ನಗರ ಜಿಲ್ಲೆ ವೀರಸಂದ್ರ ಕೈಗಾರಿಕಾ ಪ್ರದೇಶಕ್ಕೆ ₹3.97 ಕೋಟಿ, ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕೈಗಾರಿಕಾ ಪ್ರದೇಶಕ್ಕೆ ₹ 3 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT