ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ದಾಳಿಗಾಗಿ ಸಿಸಿಎಫ್‌ ವ್ಯವಸ್ಥೆ

Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ನಿರ್ದಿಷ್ಟ ದಾಳಿ ನಡೆಸುವ ಸಂದರ್ಭದಲ್ಲಿ ವಿಮಾನದಿಂದ ಪ್ಯಾರಾಚೂಟ್‌ ಬಳಸಿ ವೈರಿ ದೇಶದ ಭೂಪ್ರದೇಶದೊಳಗೆ ಇಳಿಯುವ ಯೋಧರಿಗೆ ನೆರವಾಗುವ ಸಲುವಾಗಿ ಡಿಆರ್‌ಡಿಒ  ಕಂಬ್ಯಾಟ್‌ ಫ್ರೀ ಫಾಲ್‌  ಪ್ಯಾರಾಚೂಟ್ ಸಿಸ್ಟಂ (ಸಿಸಿಎಫ್‌ಪಿಎಸ್‌) ಅನ್ನು ಅಭಿವೃದ್ಧಿಪಡಿಸಿದೆ.

ನಿರ್ದಿಷ್ಟ ದಾಳಿ ಸಂದರ್ಭದಲ್ಲಿ ಶತ್ರುಗಳ ರಾಡಾರ್‌ ಕಣ್ತಪ್ಪಿಸುವ ಸಲುವಾಗಿ ವಿಮಾನಗಳು ಸಮುದ್ರಮಟ್ಟದಿಂದ 25 ಸಾವಿರದಿಂದ 30ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿ, ಅಲ್ಲಿಂದಲೇ ಶತ್ರುವಿನ ಭೂಪ್ರದೇಶದೊಳಗೆ ಸೈನಿಕರನ್ನು ಪ್ಯಾರಾಚೂಟ್‌ ಮೂಲಕ ಇಳಿಸುತ್ತವೆ. ಇಷ್ಟು ಎತ್ತರದಲ್ಲಿ ಉಷ್ಣಾಂಶ 45ಡಿಗ್ರಿ ಸೆಂಟಿಗ್ರೇಡ್‌ನಿಂದ 50 ಡಿಗ್ರಿ ಸೆಂಟಿಗ್ರೇಡ್‌ವರೆಗೂ ಇರುತ್ತದೆ. 

ಇಂತಹ ಸಂದರ್ಭದಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗಿ ಸೈನಿಕರಲ್ಲಿ  ಹೈಪೋಥರ್ಮಿಯ  ಸಮಸ್ಯೆ   ಅಥವಾ ಜೀವಕೋಶಗಳಲ್ಲಿ ಆಮ್ಲಜನಕ  ಪ್ರಮಾಣ  ಕಡಿಮೆಯಾಗಿ   ಹೈಪೊ ಆಕ್ಸಿಯ ಸಮಸ್ಯೆ ಕಾಣಿಸಿಕೊಳ್ಳಬಹುದು. ವಾತಾವರಣದ ಒತ್ತಡ ಕುಸಿತದಿಂದ  ದೇಹದ ದ್ರವದಲ್ಲಿ   ನೈಟ್ರೋಜನ್‌ ಗುಳ್ಳೆಗಳು ಕಾಣಿಸಿಕೊಂಡು ತೀವ್ರ ನೋವು ಉಂಟಾಗಬಹುದು.

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸಿಸಿಎಫ್‌ ವ್ಯವಸ್ಥೆ   ಇದಕ್ಕೆಲ್ಲ  ಪರಿಹಾರ ಒದಗಿಸುತ್ತದೆ. ಇದು ಸಮವಸ್ತ್ರ, ಶಿರಸ್ತ್ರಾಣ ಹಾಗೂ ಮುಖ ಕವಚವನ್ನು ಒಳಗೊಂಡಿದೆ ಎನ್ನುತ್ತಾರೆ  ಡಿಆರ್‌ಡಿಒ ವಿಜ್ಞಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT