ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಬಿಕ್ ಕ್ಯೂಬ್: ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ ಗಿನ್ನೆಸ್‌ಗೆ

Last Updated 19 ಫೆಬ್ರುವರಿ 2017, 19:49 IST
ಅಕ್ಷರ ಗಾತ್ರ

ಉಜಿರೆ: ವಿದ್ಯಾರ್ಥಿಗಳು ರೂಬಿಕ್ ಕ್ಯೂಬ್ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ರೂಬಿಕ್‌ ಕ್ಯೂಬ್ ರಚನೆಯಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ  ಹೇಳಿದರು.

ಅವರು ಭಾನುವಾರ ಧರ್ಮಸ್ಥಳದ ತಮ್ಮ ನಿವಾಸದಲ್ಲಿ ಉಜಿರೆಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ರೂಬಿಕ್ಸ್ ಕ್ಯೂಬ್ ರಚನೆಗಾಗಿ ದೊರಕಿದ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು.

ಗಿನ್ನೆಸ್ ದಾಖಲೆಗೆ ಸೇರ್ಪಡೆ: ಉಜಿರೆಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಪೃಥ್ವೀಶ್ ಕೆ. ಭಟ್ ನೇತೃತ್ವದಲ್ಲಿ 20 ವಿದ್ಯಾರ್ಥಿಗಳ ತಂಡ 2016ರ ಅಕ್ಟೋಬರ್ 2 ರಂದು ಉಜಿರೆಯಲ್ಲಿ ಇಂದ್ರಪ್ರಸ್ಥ ಒಳಾಂಗಣದಲ್ಲಿ 4,500 ಕ್ಯೂಬ್‌ಗಳನ್ನು ಬಳಸಿ ಒಟ್ಟು 14.981 ಚದರ ಮೀಟರ್ ವಿಸ್ತೀರ್ಣದ ಮೊಸಾಯಿಕ್‌ ಅನ್ನು ರಚಿಸಿತ್ತು. ಇದರ ತಯಾರಿಗೆ ₹ 4 ಲಕ್ಷ ವೆಚ್ಚವಾಗಿತ್ತು.

ವಿವೇಕ್ ಪ್ರಸಾದ್ ಮಾಡ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ ಅಜಿಲ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳಮರ್ವ ಇದನ್ನು ವೀಕ್ಷಿಸಿ ಪ್ರಮಾಣೀಕರಿಸಿದರು.

ಪೂರ್ಣಕಾರ್ಯವನ್ನು ವೀಡಿಯೊ ದಾಖಲೀಕರಣಗೊಳಿಸಿ ಲಂಡನ್‌ನಲ್ಲಿರುವ ಗಿನ್ನೆಸ್ ದಾಖಲೆಯ ಪ್ರಧಾನ ಕಚೇರಿಗೆ ಕಳುಹಿಸಲಾಗಿತ್ತು.  2017ರ ಜನವರಿ 13ರಂದು ಇದು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದಾಗಿ ಸಂದೇಶ ಬಂದಿದ್ದು ಇದೀಗ ಪ್ರಮಾಣ ಪತ್ರವೂ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT