ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮ ಸಹಿಷ್ಣು ಛತ್ರಪತಿ ಶಿವಾಜಿ

ಶಿವಾಜಿ ಜಯಂತಿ ಸಮಾರಂಭದಲ್ಲಿ ವಿ.ಪ. ಸದಸ್ಯ ಎಸ್.ವಿ. ಸಂಕನೂರ ಅಭಿಮತ
Last Updated 20 ಫೆಬ್ರುವರಿ 2017, 6:21 IST
ಅಕ್ಷರ ಗಾತ್ರ

ಗದಗ: ದೇಶಭಕ್ತ, ಸ್ವಾತಂತ್ರ್ಯಕ್ಕಾಗಿ ಜೀವ ವನ್ನೇ ಪಣಕ್ಕಿಟ್ಟು ನಾಡಿನ ಎಳ್ಗೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಜೀವನ ಸಮಾಜಕ್ಕೆ ಮಾದರಿ. ಅವರು ಸರ್ವ ಧರ್ಮ ಸಹಿಷ್ಣು ಎಂದು ವಿಧಾನ ಪರಿ ಷತ್ ಸದಸ್ಯರಾದ ಎಸ್.ವಿ.ಸಂಕನೂರ ಹೇಳಿದರು.

ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಶಿವಾಜಿ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮರಾಠಾ ವಿದ್ಯಾವ ರ್ಧಕ ಸಂಘ ಹಾಗೂ ವಿವಿಧ ಕ್ಷತ್ರೀಯ ಮರಾಠಾ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಸಮಾಜದ ಏಳ್ಗೆ ಹಾಗೂ ಒಗ್ಗಟ್ಟಿಗಾಗಿ ಹೋರಾಡಿದವರನ್ನು ಎಂದಿಗೂ ಮರೆಯಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಜಯಂತಿ ಗಳನ್ನು ಆಚರಿಸಲು ಮುಂದಾಗಿವೆ. ಭಾವೈಕ್ಯಕ್ಕೆ ಮಾದರಿಯಾಗಿದ್ದ ಶಿವಾಜಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.
ಶಿವಾಜಿಯ ಸ್ವರಾಜ್ಯ ಸ್ಥಾಪನೆ ಆಶಯ ಅರ್ಥವುಳ್ಳದ್ದಾಗಿತ್ತು ಎಂದು ಸಧೀರ ಸಿಂಗ್ ಘೋರ್ಪಡೆ ತಿಳಿಸಿದರು.

ಛತ್ರಪತಿ ಶಿವಾಜಿಯ ಜೀವನ ಮತ್ತು ಸಂದೇಶ ಕುರಿತು ವಿಡಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಉಪನ್ಯಾಸ ನೀಡಿದರು.
ಹೊಸಪೇಟೆಯ ಶಾರದಾಶ್ರಮದ ಅಧ್ಯಕ್ಷೆ ಪ್ರಮೋದಮಯಿ ಮಾತಾಜಿ, ಗೋಕಾಕನ ಶಾರದಾ ಶಕ್ತಿ ಪೀಠದ ಅಧ್ಯಕ್ಷೆ ಶಿವಮಯಿ ಮಾತಾಜಿ  ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜಿ.ಗ ದ್ಯಾಳ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ರುದ್ರಪ್ಪ, ತಹಶೀ ಲ್ದಾರ್‌ ಎಂ.ಬಿ. ಬಿರಾದಾರ, ನಗರಸಭೆ ಸದಸ್ಯ ಬರ್ಕತಲಿ ಮುಲ್ಲಾ, ಮೋಹನ ರಾವ್ ಗ್ವಾರಿ, ಡಾ.ಗೋಡಬೋಲೆ, ವಿಜಯಕುಮಾರ ಗಡ್ಡಿ, ರಾಜು ಕುರಡಗಿ ಭಾಗವಹಿಸಿದ್ದರು.
ಪ್ರೇರಣಾ ರೋಖಡೆ ಪ್ರಾರ್ಥಿಸಿದರು, ಪುಟ್ಟರಾಜ ಗವಾಯಿ ಸಂಗೀತ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿದರು, ರಾಜು ರೋಖಡೆ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT