ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸಾಗಿಸಲು ಎರಡು ವಾಹನ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ನಗರಸಭೆ ಆಡಳಿತಕ್ಕೆ ದೇಣಿಗೆ: ಉಚಿತ ಸೇವೆ
Last Updated 20 ಫೆಬ್ರುವರಿ 2017, 6:53 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದಲ್ಲಿ ಯಾರಾ­ದರೂ ಸತ್ತರೆ ಅಂತಿಮ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಶವ ಕೊಂಡೊಯ್ಯಲು ಎರಡು ಸುಸಜ್ಜಿತ ವಾಹನಗಳನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ನಗರಸಭೆ ಆಡಳಿತಕ್ಕೆ ದೇಣಿಗೆ ನೀಡಿದೆ.

ಇಲ್ಲಿಯವರೆಗೂ ಬಿ.ವಿ.ವಿ ಸಂಘ ಹಾಗೂ ನಗರಸಭೆಯ ಶವ ಸಾಗಣೆ ವಾಹ­ನಗಳು ಸಾರ್ವಜನಿಕರಿಗೆ ನೆರ­ವಾಗಿ­ದ್ದವು. ಇದೀಗ ಬಿಟಿಡಿಎ ನೀಡಿದ ಎರಡು ವಾಹನಗಳು ಈ ಕೆಲಸಕ್ಕೆ ಮೀಸಲಾಗಲಿದ್ದು, ನಗರದ ವ್ಯಾಪ್ತಿ­ಯಲ್ಲಿ ಶವ ಕೊಂಡೊಯ್ಯುವ ವಾಹನ­ಗಳ ಕೊರತೆ ನೀಗಿದಂತಾಗಿದೆ. ಬೆಂಜ್ ಕಂಪೆನಿಯ ಈ ಎರಡೂ ವಾಹನ­ಗಳನ್ನು ₹ 35 ಲಕ್ಷ ವೆಚ್ಚದಲ್ಲಿ ಖರೀದಿಸಿ ಶವ ಸಾಗಣೆಗೆ ಅನುಕೂಲವಾಗುವಂತೆ ಸಜ್ಜುಗೊಳಿಸಲಾಗಿದೆ.

ಉಚಿತ ಸೇವೆ
‘ಸಾರ್ವಜನಿಕರಿಗೆ ದಿನದ 24 ಗಂಟೆಯೂ ಈ ವಾಹನಗಳ ಸೇವೆ ಲಭ್ಯವಿದೆ. ವಾಹನ ಸೇವೆ ಸಂಪೂರ್ಣ ಉಚಿತವಾಗಿದೆ. ಮೊದಲು ನಗರಸಭೆ­ಯಿಂದ ಶವ ಸಾಗಣೆಗೆ ಒಂದು ಟಾಟಾ ಏಸ್ ವಾಹನ ಮೀಸಲಿಡಲಾಗಿತ್ತು. ಅದಕ್ಕೆ ₹400 ಶುಲ್ಕ ಭರಿಸಬೇಕಿತ್ತು. ಈಗ ಬಿಟಿಡಿಎ ದೇಣಿಗೆ ನೀಡಿರುವ ವಾಹನಗಳ ಡೀಸೆಲ್, ಚಾಲಕರ ವೇತನ, ಭತ್ಯೆಯನ್ನು ನಾವೇ ಭರಿಸಲಿ­ದ್ದೇವೆ. ಹಾಗಾಗಿ ಸಾರ್ವಜನಿಕರು ಹಣ ಪಾವತಿಸುವ ಅಗತ್ಯವಿಲ್ಲ’ ಎಂದು ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ ಹೇಳುತ್ತಾರೆ.

ಜಾತಿ–ಧರ್ಮದ ಬೇಧವಿಲ್ಲ:
ಹಿಂದು,ಮುಸ್ಲಿಮ್ ಹಾಗೂ ಕ್ರೈಸ್ತ ಸಮುದಾಯದ ಏಳು ಸ್ಮಶಾನಗಳು ನಗರಸಭೆ ಹಾಗೂ ಬಿಟಿಡಿಎ ವ್ಯಾಪ್ತಿ­ಯಲ್ಲಿ ಇವೆ. ಮೂರು ಧರ್ಮಗಳ ಬಡವರು ಯಾವುದೇ ಜಾತಿ–ಬೇಧ­ವಿಲ್ಲದೇ ಈ ವಾಹನಗಳ ಉಪಯೋಗ ಮಾಡಿಕೊಳ್ಳಬಹು­ದಾಗಿದೆ. ಸಾಗಣೆ ವೇಳೆ ಶವ ಕೂರಿಸಿ ಕೊಂಡೊಯ್ಯು­ವುದಾದರೆ ಅದಕ್ಕೆ ಸುಸಜ್ಜಿತ ಕುರ್ಚಿ, ಮಲಗಿಸಿ ಒಯ್ಯುವುದಾದರೆ ಅದಕ್ಕೆ ಅಗತ್ಯವಿರುವ ಮಂಚವನ್ನು ರೂಪಿಸಲಾಗಿದೆ.

ಮೂರು ಧರ್ಮಗಳ ನಂಬಿಕೆ, ಧಾರ್ಮಿಕ ಪರಂಪರೆಗೆ ಅನುಗುಣವಾಗಿ ಶವ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ಆಯಾ ಧರ್ಮಗಳ ಪ್ರಾರ್ಥನೆ ಗೀತೆಗಳನ್ನು ವಾಹನಗಳಿಗೆ ಅಳವಡಿಸಲಾಗಿದೆ ಹಾಗಾಗಿ ಎಲ್ಲರೂ ಬಳಕೆ ಮಾಡಬಹುದು ಎಂದು ಕಲಾ­ದಗಿ ತಿಳಿಸಿದರು. ಶವ ಸಾಗಿಸುವಾಗ ವಾಹನಗಳ ಒಳಗೆ 15ರಿಂದ 20 ಮಂದಿ ಕುಳಿ­ತು­ಕೊಳ್ಳಲು ಆಸನಗಳ ವ್ಯವಸ್ಥೆ ಮಾಡ­ಲಾಗಿದೆ. ಉತ್ತಮ ಬೆಳಕಿನ ವ್ಯವಸ್ಥೆ­ಯನ್ನೂ ಮಾಡ­ಲಾಗಿದ್ದು, ನಗರದ ವ್ಯಾಪ್ತಿಯಲ್ಲಿ ಆಸ್ಪತ್ರೆ ಇಲ್ಲವೇ ಮನೆ­ಯಿಂದ ಶವವನ್ನು ನೇರವಾಗಿ ಸ್ಮಶಾ­ನಕ್ಕೆ ಕೊಂಡೊಯ್ಯಲು ಮಾತ್ರ ಈ ಸೇವೆ ಬಳಕೆ ಮಾಡಿಕೊಳ್ಳಬಹುದಾಗಿದೆ.
ವಾಹನ ಬೇಕಿದ್ದವರು (ದಲಾ­ಯತ್–9945874782) ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ಕಲಾದಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT