ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ

ಬೃಹತ್ ಕನ್ನಡ ಧ್ವಜ ಪ್ರದರ್ಶನ, ಮೆರವಣಿಗೆ ಕಳೆ ಹೆಚ್ಚಿಸಿದ ಕಲಾ ತಂಡಗಳು
Last Updated 20 ಫೆಬ್ರುವರಿ 2017, 6:59 IST
ಅಕ್ಷರ ಗಾತ್ರ

ಹೂವಿನಹಡಗಲಿ : ಬಳ್ಳಾರಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಭಾನುವಾರ ಪಟ್ಟಣದ ಮುಖ್ಯ ಬೀದಿಯಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಜರುಗಿತು.

ಮೈಲಾರಲಿಂಗೇಶ್ವರ ದೇವಸ್ಥಾನ ಬಳಿ ಜಿಲ್ಲಾಧಿಕಾರಿ ಡಾ. ರಾಮಪ್ರಸಾದ್ ಮನೋಹರ್ ಅನುಪಸ್ಥಿತಿಯಲ್ಲಿ ಹಿರಿಯ ಮುಖಂಡ ಕೋಡಿಹಳ್ಳಿ ಮುದುಕಪ್ಪ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.

ಕನ್ನಡ ಬಾವುಟಗಳಿಂದ ಸಿಂಗರಿಸಿದ್ದ ಸಾರೋಟ ವಾಹನದಲ್ಲಿ ಸಮ್ಮೇಳನ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಹಾಗೂ ಅವರ ಪತ್ನಿ ರುದ್ರಮ್ಮ, ಮೊಮ್ಮಕ್ಕಳಾದ ಸುಹಾಸ್, ರಶ್ಮಿ ಆಸೀನರಾಗಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ, ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಂ.ಪಿ.ಎಂ. ಮಂಜುನಾಥ ವಾಹನದಲ್ಲಿ ಇದ್ದರು. ಮುಖ್ಯರಸ್ತೆಯ ಮೂಲಕ ಸಾಗಿದ ಮೆರವಣಿಗೆ ಅಂಬೇ ಡ್ಕರ್ ವೃತ್ತದ ಮಾರ್ಗವಾಗಿ ತಾಲ್ಲೂಕು ಕ್ರೀಡಾಂಗಣದ ವೇದಿಕೆ ತಲುಪಿತು.

ತುಂಗಭದ್ರಾ ಪ್ರೌಢಶಾಲೆ ವಿದ್ಯಾರ್ಥಿ ಗಳು ಬೃಹತ್ ಕನ್ನಡ ಧ್ವಜವನ್ನು ಪ್ರದ ರ್ಶಿಸಿ ಅಭಿಮಾನ ಮೆರೆದರು. ಗಾದಿಗ ನೂರು ಕಲಾವಿದರ ತಾಷ್ ಡೋಲ್ ವಾದನ, ತಾರಾನಗರದ ವೀರಗಾಸೆ ತಂಡ, ಮಗಿಮಾವಿನಹಳ್ಳಿಯ ಕೋಲಾಟ ತಂಡ, ಹಡಗಲಿಯ ಹೆಜ್ಜೆ ಮೇಳ, ಹೊನ್ನೂರಿನ ಮಾರುತಿ ಭಜನಾ ಸಂಘ, ಭರಮಸಾಗರದ ಮರಗಾಲು ಕುಣಿತ ಕಲಾ ತಂಡಗಳು ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದವು. ಆಯ್ದ ಬೆರ ಳೆಣೆಕೆಯ ಕಲಾ ತಂಡ ಭಾಗವಹಿಸಿದ್ದ ರಿಂದ ನೀರಸದಿಂದ ಕೂಡಿತ್ತು.

ಶಾಸಕರ ವಿರುದ್ಧ ಘೋಷಣೆ: ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಭಾಷಣ ಮಾಡುತ್ತಿದ್ದ ವೇಳೆ ಎಐಟಿಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ‘ಕನ್ನಡ ವಿರೋಧಿ ಶಾಸಕರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿ, ಕಪ್ಪು ಬಟ್ಟೆ ಪ್ರದರ್ಶಿಸಿದರು. ಬಳಿಕ ಪೊಲೀಸರು ಅವರನ್ನು ಹೊರಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT