ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಕ ರೋಗ: ನಿಯಂತ್ರಣಕ್ಕೆ ಕ್ರಮ

Last Updated 20 ಫೆಬ್ರುವರಿ 2017, 7:35 IST
ಅಕ್ಷರ ಗಾತ್ರ

ನಾಪೋಕ್ಲು: ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಮಾರಕ ರೋಗಗಳು ಕಾಣಿಸಿಕೊಂಡಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾ ಯಿತಿ ಸಭಾಂಗಣದಲ್ಲಿ ನಡೆದ ನೀರು ನೈರ್ಮಲ್ಯ ಸಮಿತಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಪಿಡಿಒ ಟಿ.ಆರ್.ಕೇಶವ ಮಾತನಾಡಿ, ಇತ್ತೀಚೆಗೆ ಕಾಮಾಲೆ ಮತ್ತಿತರ ರೋಗಗಳು ವ್ಯಾಪ ಕವಾಗಿ ಹಬ್ಬಿದ್ದು  ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ಕಸವನ್ನು ವಿಂಗಡಿಸಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಗ್ರಾಮ ಪಂಚಾಯಿತಿ ವಾಹ ನಕ್ಕೆ ಹಾಕಬೇಕು ಎಂದು ಮನವಿ ಮಾಡಿದರು.

ಕಸ ವಿಲೇವಾರಿ ಮಾಡಲು ಚೆರಿಯಪರಂಬು ಬಳಿಯಲ್ಲಿ ಸುಮಾರು ₹8 ಲಕ್ಷ ವೆಚ್ಚದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿನಸುಗಳ ಮತ್ತು ಹೋಟೆಲ್‌ಗಳ ಬಗ್ಗೆ ಪರಿಶೀಲಿಸಿ ಅವರಿಗೆ ಪರವಾನಗಿ ನೀಡಲಾಗುತ್ತಿದೆ. ಪಟ್ಟಣದ ವರ್ತಕರು ಮತ್ತು ನೀರು ಬಳಕೆದಾರರು ₹4 ಲಕ್ಷಕ್ಕೂ ಅಧಿಕ ಹಣವನ್ನು  ಪಾವತಿಸ ಬೇಕಾಗಿದ್ದು , ಅದನ್ನು ಪಾವತಿಸದಿದ್ದರೆ ಅಂಗಡಿಗಳ ಪರವಾನಗಿ ನವೀಕರಿಸುವುದಿಲ್ಲ ಎಂದು ನೋಟಿಸ್‌ ನೀಡಲಾಗಿದೆ ಎಂದು ಎಚ್ಚರಿಸಿದರು. 

ಪಟ್ಟಣದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಂಡಿದ್ದು ವ್ಯಾಪಾರ ಸ್ಥರು ಇದಕ್ಕೆ ಸ್ವಂದಿಸದಿರು ವುದು ಸರಿಯಲ್ಲ . ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನದಿಗಳ ನೀರು ಕಲುಷಿತಗೊಳ್ಳ ದಂತೆ ಮತ್ತು ವಾಹನಗಳನ್ನು ಹೊಳೆ ಯಲ್ಲಿ ತೊಳೆಯದಂತೆ ತಡೆಗಟ್ಟಲು ಹೊಳೆಗೆ ಹೋಗುವ ದಾರಿಯಲ್ಲಿ 8 ಅಡಿ ಆಳ ಮತ್ತು 4 ಅಡಿ ಅಗಲದ ಗುಂಡಿ ತೆಗೆ ಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಪಿ. ಹೇಮಲತಾ, ಕಾಮಾಲೆ ರೋಗ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀರು ನೈರ್ಮಲ್ಯ ಸಮಿತಿ ಅಧ್ಯಕ್ಷ  ಪಿ.ಎಂ. ಅಜೀಜ್ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ಟಿ.ಎ. ಮಹಮ್ಮದ್, ಶಹನಾಜ್, ಸಮಿತಿ ಸದಸ್ಯರಾದ ಬಿದ್ದಾಟಂಡ ಜಿನ್ನು ನಾಣಯ್ಯ, ನಿಡುಮಂಡ ಕೃತಿ, ಆರೋಗ್ಯ ಇಲಾಖೆಯ ರಘು, ಪಂಚಾಯಿತಿ ಕಾರ್ಯದರ್ಶಿ ದೇವಕ್ಕಿ, ನಂದಿನಿ, ತಂಗಮ್ಮ, ಶಿವಚಾಳಿಯಂಡ ಕುಟ್ಟಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT