ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯು: ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಹೊಸ ಸ್ಪರ್ಶ

Last Updated 20 ಫೆಬ್ರುವರಿ 2017, 7:42 IST
ಅಕ್ಷರ ಗಾತ್ರ

ಮೈಸೂರು:  ಇಲ್ಲಿನ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಹೊಸ ಸ್ಪರ್ಶ ನೀಡಿ, ಕೌಶಲ ಅಭಿವೃದ್ಧಿ ಕೇಂದ್ರವಾಗಿ ಪರಿವರ್ತಿಸಲು ಸಿದ್ಧತೆ ನಡೆದಿದೆ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ತರಬೇತಿ ನೀಡುವ ಜತೆಗೆ, ನಿರುದ್ಯೋಗಿಗಳಿಗೆ ಕೌಶಲ ಕಲಿಸಲು ಕೆಎಸ್‌ಒಯು ಉದ್ದೇಶಿಸಿದೆ. ಹೊಲಿಗೆ, ಮೇಣದಬತ್ತಿ ತಯಾರಿಕೆ, ಕಂಪ್ಯೂಟರ್‌ ಕಲಿಕೆ, ಸಂವಹನ ಇಂಗ್ಲಿಷ್‌, ವಿದ್ಯುನ್ಮಾನ ಉಪಕರಣಗಳ ದುರಸ್ತಿ ಸೇರಿ 72 ವಿವಿಧ ಕೌಶಲ ಕಲಿಕೆ ಕಾರ್ಯಕ್ರಮ ಪರಿಚಯಿಸುವ ಉದ್ದೇಶ ಹೊಂದಿದೆ.

‘ಯುಪಿಎಸ್‌ಸಿ’, ‘ಕೆಪಿಎಸ್‌ಸಿ’, ‘ಐಬಿಪಿಎಸ್‌’, ‘ಎಸ್‌ಎಸ್‌ಸಿ’, ‘ಎಫ್‌ ಡಿಎ’, ‘ಎಸ್‌ಡಿಎ’, ‘ಪಿಡಿಒ’, ‘ನೆಟ್‌’, ‘ಕೆ–ಸೆಟ್‌’, ‘ಟಿಇಟಿ’ ಸ್ಪರ್ಧಾ ಪರೀಕ್ಷೆಗಳಿಗೆ ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ಮುಂದುವರಿಯಲಿದೆ.

ನಿರುದ್ಯೋಗಿಗಳು ಸ್ವಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ಅಲ್ಪಾವಧಿ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಪ್ರಾತಿನಿಧಿಕ ಶುಲ್ಕ ನಿಗದಿಪಡಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ.

‘ಸ್ಪರ್ಧಾತ್ಮಕ ತರಬೇತಿ ಕೇಂದ್ರವನ್ನು ಕೌಶಲ ಅಭಿವೃದ್ಧಿ ಕೇಂದ್ರವಾಗಿ ಪರಿವರ್ತಿ ಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಿವಿಯ ಪ್ರಾಧ್ಯಾಪಕರೊಬ್ಬರನ್ನು ಕೇಂದ್ರದ ನಿರ್ದೇಶಕರಾಗಿ ಶೀಘ್ರದಲ್ಲಿ ನೇಮಕ ಮಾಡಲಾಗುವುದು’ ಎಂದು ಕೆಎಸ್‌ ಒಯು ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸು, ಫೇಲಾದವರು, ಗೃಹಿಣಿಯರಿಗೆ ಪೂರಕ ತರಬೇತಿ ಕಾರ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಮೈಸೂರು ಮತ್ತು ಸುತ್ತಲಿನ ಜಿಲ್ಲೆಗಳ ಗ್ರಾಮೀಣ ಪ್ರದೇಶದವರೂ ಸದುಪಯೋಗಪಡಿಸಿ ಕೊಳ್ಳಬಹುದು’ ಎಂದು ಹೇಳಿದರು.

2011ರ ಸೆಪ್ಟೆಂಬರ್‌ನಲ್ಲಿ ಸ್ಪರ್ಧಾ ತ್ಮಕ ತರಬೇತಿ ಕೇಂದ್ರ ಆರಂಭವಾಗಿದ್ದು, ಸುಮಾರು 16 ಸಾವಿರ ಉದ್ಯೋಗಾ ಕಾಂಕ್ಷಿಗಳು ಈವರೆಗೆ ತರಬೇತಿ ಪಡೆದಿ ದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉದ್ಯೋಗ ಪಡೆದುಕೊಂಡಿದ್ದಾರೆ.

ಮಾನ್ಯತೆ ರದ್ದು ಸಂಕಷ್ಟದಲ್ಲಿ ನಲುಗಿ ರುವ ಕೆಎಸ್‌ಒಯು ಈಗ ಆರ್ಥಿಕ ಮಿತ ವ್ಯಯ ಪಾಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಯೋಜನಾ ಧಿಕಾರಿ ಹುದ್ದೆ ಕೈಬಿಟ್ಟು, ವಿ.ವಿಯ ಪ್ರಾಧ್ಯಾಪಕರೊ ಬ್ಬರಿಗೆ ನಿರ್ದೇಶಕ ಹುದ್ದೆಯ ಜವಾಬ್ದಾರಿ ವಹಿಸಲು ನಿರ್ಧರಿಸಿದೆ. ಇದರಿಂದ ಹಣಕಾಸಿನ ಹೊರೆ ಕಡಿಮೆಯಾಗಲಿದೆ ಎಂಬುದು ವಿವಿ ಲೆಕ್ಕಾಚಾರ.

ಮಾರ್ಚ್‌ನಲ್ಲಿ ತರಬೇತಿ ಆರಂಭಿಸಲು ಸಿದ್ಧತೆ ನಡೆದಿದೆ. ಎಂಬಿಎ, ಇಂಗ್ಲಿಷ್‌, ಕಂಪ್ಯೂಟರ್‌    ಅಧ್ಯಯನ ವಿಭಾಗಗಳ ಬೋಧಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬಳಸಲು ನಿರ್ಧರಿಸಲಾಗಿದೆ
- ಪ್ರೊ.ಡಿ.ಶಿವಲಿಂಗಯ್ಯ,ಕುಲಪತಿ, ಕೆಎಸ್‌ಒಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT