ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಿಂದ ಸುಗಮ ಸಂಗೀತ ಸಮ್ಮೇಳನ

Last Updated 20 ಫೆಬ್ರುವರಿ 2017, 19:47 IST
ಅಕ್ಷರ ಗಾತ್ರ

ಮಂಡ್ಯ: ಕರ್ನಾಟಕ ಸುಗಮ ಸಂಗೀತ ಪರಿಷತ್‌ ಹಾಗೂ ಜಿಲ್ಲಾಡಳಿತದ ವತಿಯಿಂದ ಫೆ. 25, 26ರಂದು 14ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನವನ್ನು ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷರಾಗಿ ವೈ.ಕೆ.ಮುದ್ದುಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಸುಕನ್ಯಾ ಅವರಿಗೆ ಕಾವ್ಯಶ್ರೀ, ಎಸ್‌.ಮಲ್ಲಣ್ಣ ಅವರಿಗೆ ‘ಭಾವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬುರ್ಖಾ ಧರಿಸಿ ಪಾಠ: ವಿರೋಧ
ಭಟ್ಕಳ (ಉತ್ತರ ಕನ್ನಡ):
ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯರು ಬುರ್ಖಾ ಧರಿಸಿ ಪಾಠ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಸೋಮವಾರ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದು ತಮ್ಮ ಪ್ರತಿಭಟನೆ ದಾಖಲಿಸಿದರು.

ನಾಲ್ವರು ಉಪನ್ಯಾಸಕಿಯರು ಕಾಲೇಜಿಗೆ ಬುರ್ಖಾ ಧರಿಸಿ ಬರುವುದಲ್ಲದೇ ಪಾಠ ಮಾಡುವ ಸಂದರ್ಭದಲ್ಲೂ ಬುರ್ಖಾ
ಧರಿಸಿರುತ್ತಾರೆ ಎಂದು ಆರೋಪಿಸಿ ಈ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮೌಖಿಕವಾಗಿ ದೂರು ನೀಡಿದ್ದರು.

ಸೋಮವಾರದೊಳಗೆ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಬುರ್ಖಾ ವಿವಾದ ಬಗೆಹರಿಸಬೇಕು. ಒಂದು ವೇಳೆ
ಇದು ಪುನರಾವರ್ತನೆಯಾದರೆ ಕೇಸರಿ ಶಾಲು ಧರಿಸಿ ಬಂದು, ತರಗತಿಗಳನ್ನು ಬಹಿಷ್ಕರಿಸಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ
ತಿಳಿಸಿದ್ದರು. ಸೋಮವಾರ, ಉಪನ್ಯಾಸಕಿಯರು ಬುರ್ಖಾ ಧರಿಸಿಯೇ ಪಾಠ ಮಾಡಲು ಮುಂದಾದುರಿಂದ  ವಿದ್ಯಾರ್ಥಿಗಳು ಪ್ರತಿಭಟನೆ
ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT