ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಂಸ್ಕೃತಿ ಶಿಥಿಲಕ್ಕೆ ಸರ್ಕಾರವೇ ಹೊಣೆ

Last Updated 21 ಫೆಬ್ರುವರಿ 2017, 4:21 IST
ಅಕ್ಷರ ಗಾತ್ರ
ಹೂವಿನಹಡಗಲಿ (ಎಂ.ಪಿ.ಪ್ರಕಾಶ್ ವೇದಿಕೆ): ‘ಸಂವಿಧಾನದ ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಅನ್ನದ ಶಕ್ತಿಯನ್ನು ಅವಲಂಬಿಸಿದೆ. ನಮ್ಮ ನಾಗರಿಕತೆ ಕೃಷಿ ಸಂಸ್ಕೃತಿಯ ಮೇಲೆ ನಿಂತಿದೆ. ಹೀಗಾಗಿ ಸರ್ಕಾರಗಳು ಕೃಷಿಗೆ ಮೊದಲ ಆದ್ಯತೆ ನೀಡಬೇಕು’ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಒತ್ತಾಯಿಸಿದರು.
 
ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಬಳ್ಳಾರಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂರನೇ ಗೋಷ್ಠಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
ಕೃಷಿ ಬೆಲೆ ಆಯೋಗದ ವರದಿ ಪ್ರಕಾರ ರಾಜ್ಯದ 27 ಬೆಳೆಗಳಿಗೆ ಉತ್ಪಾ ದನಾ ವೆಚ್ಚವೂ ಸಿಗುತ್ತಿಲ್ಲ. ರೈತರು ಪರಿ ವಾರದೊಡನೆ ವರ್ಷವಿಡೀ ಬೆವರು ಸುರಿಸಿದರೂ ಸಾಲದಿಂದ ಮುಕ್ತರಾ ಗದೇ ಸಾಲದ ಶೂಲಕ್ಕೆ ಬಲಿಯಾಗುತ್ತಿದ್ದಾರೆ. ಸರ್ಕಾರಗಳು ಕೃಷಿಯನ್ನು ಅಲಕ್ಷಿಸಿರುವ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಂಗಳೂರು ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡದೇ ಕೃಷಿಯ ಬೆಳವಣಿಗೆಗೆ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
 
ಬಳ್ಳಾರಿ ಜಿ.ಪಂ.ನ ಮುಖ್ಯ ಲೆಕ್ಕಾಧಿ ಕಾರಿ ಎ.ಚನ್ನಪ್ಪ ಮಾತನಾಡಿ, ಕೃಷಿ ಮತ್ತು ನೀರನ್ನು ದೈವ ಎಂದು ನಂಬಿದ್ದ ಪ್ರಾಚೀನರಲ್ಲಿ ಇವುಗಳ ಬಳಕೆ ಕುರಿತು ವೈಜ್ಞಾನಿಕ ತಿಳಿವಳಿಕೆ ಇತ್ತು. ಮರು ಉತ್ಪಾದನೆ ಸಾಧ್ಯವಿಲ್ಲದ ಕೃಷಿ, ನೀರಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯವಿದೆ ಎಂದರು.
 
ಬಳ್ಳಾರಿಯ ಬಿಐಟಿಎಂ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಚ್.ಮಹಾಬಲೇಶ್ವರಪ್ಪ ‘ಬಳ್ಳಾರಿ ಜಿಲ್ಲೆಯ ನದಿ, ಕೆರೆ, ಜಲಾಶಯಗಳ ಸ್ಥಿತಿಗತಿ’ ಕುರಿತು ವಿಷಯ ಮಂಡಿಸಿ, ಜಲಾಶಯಗಳಿಗಿಂತ ಕೆರೆಗಳು ಶ್ರೇಷ್ಠವಾಗಿವೆ. ಸ್ವತಂತ್ರ ನೀರಿನ ಸಂಗ್ರಹಣೆ ಮತ್ತು ಬಳಕೆಗೆ ಕೆರೆಗಳು ಸಹಕಾರಿ ಯಾಗಿವೆ ಎಂದರು.
 
ವಿಸ್ತರಣಾ ಮುಂದಾಳು ಡಾ. ಸಿ.ಎಂ. ಕಾಲಿಬಾವಿ ‘ಸಿಂಗಟಾಲೂರು ಯೋಜನೆ ವಿಸ್ತರಣೆ’ ಕುರಿತು ವಿಷಯ ಮಂಡಿಸಿ, ಈ ಯೋಜನೆ ಅಡಿಯಲ್ಲಿ ಎಡ ಮತ್ತು ಬಲ ದಂಡೆಗೆ ನೀರಿನ ಹಂಚಿಕೆಯಲ್ಲಿ ಭಾರೀ ತಾರತಮ್ಯವಾಗಿದೆ. ಬಲದಂಡೆ ಹೂವಿನ ಹಡಗಲಿ ಭಾಗದಲ್ಲಿ ಸೂಕ್ಷ್ಮ ನೀರಾವರಿ ಅಳವಡಿಕೆಯಿಂದ ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಬಹುದು ಎಂದು ತಿಳಿಸಿದರು.
 
‘ನಗರ ಪ್ರದೇಶದಲ್ಲಿ ವಾತಾವರಣ ಕಲುಷಿತಗೊಳ್ಳುವುದರಿಂದ ಹೆಚ್ಚು ಜನರು ಹಳ್ಳಿಗಳತ್ತ ಮುಖ ಮಾಡಿ ಕೃಷಿ ಕಡೆ ವಾಲುತಿದ್ದಾರೆ. ಸಮಗ್ರ ಕೃಷಿ ಪದ್ದತಿ ಕೈಗೊಂಡಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.
 
ಮುನಿರಾಬಾದ್‌ನ ಸಹಾಯಕ ಪ್ರಾಧ್ಯಾಪಕ ಜಿ.ಬಿ. ಶ್ರೀನಿವಾಸಲು ‘ಮಲ್ಲಿಗೆ ಬೆಳೆಯ ಉತ್ತೇಜನ, ಸಂಗ್ರ ಹಣೆ, ಬೇಸಾಯ ಕ್ರಮಗಳು’ ಕುರಿತು ಮಾತನಾಡಿ, ಇಲ್ಲಿನ ಭೌಗೋಳಿಕ ಬೆಳೆಯ ಮಾನ್ಯತೆ ಪಡೆದಿರುವ ‘ಹಡಗಲಿ ಮಲ್ಲಿಗೆ’ಯಲ್ಲಿ ಸುಗಂಧ ದ್ರವ್ಯ, ತೈಲದ ಉತ್ಪಾದನೆ ಸಾಧ್ಯವಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಗಳಿಗೆ ಲಗ್ಗೆ ಇಡಲು ಕೆಲವು ಸಂರಕ್ಷಣಾ ವಿಧಾನ ಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದರೂರು ಪುರುಷೋ ತ್ತಮಗೌಡ ಪ್ರತಿಕ್ರಿಯೆ ನೀಡಿದರು.
 
ಗೋಷ್ಠಿಯಲ್ಲಿ ಚರ್ಚೆ
ಹೂವಿನಹಡಗಲಿ (ಎಂ.ಪಿ.ಪ್ರಕಾಶ್ ವೇದಿಕೆ): ಬಳ್ಳಾರಿಯ ಸಹಾಯಕ ಪ್ರಾಧ್ಯಾಪಕ ಡಾ. ಹೊನ್ನೂರ್ ವಲಿ ಮಾತನಾಡಿ, ಒಂದೆಡೆ ಬದುಕಲು ಗುಳೇ ಹೊರಟಿದ್ದರೆ, ಇನ್ನೊಂದೆಡೆ ಮಕ್ಕಳಿ ಲ್ಲದೇ ಕನ್ನಡ ಶಾಲೆ ಮುಚ್ಚುವ ಸಂದಿಗ್ದತೆ ಎದುರಾಗಿದೆ. ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿಯ ಪರಿಕಲ್ಪನೆಯಿಂದ ಮಾತ್ರ ಬೆಳವಣಿಗೆ ಸಾಧ್ಯವಿದೆ ಎಂದರು.
 
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಅಲ್ಲಮಪ್ರಭು ಬೆಟದೂರು ಮಾತನಾಡಿ, ಪಕ್ಷ ರಾಜಕೀಯ ಮತ್ತು ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹೈ.ಕ. ಭಾಗ ಹಿಂದುಳಿದಿದೆ.  ಹೋರಾಟ ಗಳು ಬರೀ ಹೋರಾಟಗಾರರ ಸ್ವತ್ತಾಗ ಬಾರದು. ಜನರು ಜಾಗೃತರಾಗಿ ಸರ್ಕಾರ ಗಳ ಮೇಲೆ ಒತ್ತಡ ಹೇರಬೇಕು. ಹಿಂದು ಳಿದ ಹೈ.ಕ. ಭಾಗಕ್ಕೆ ಸಾಂಸ್ಕೃತಿಕ ಮೀಸ ಲಾತಿಯ ಅವಶ್ಯಕತೆ ಇದೆ ಎಂದು ಪ್ರತಿ ಪಾದಿಸಿದರು. 
 
‘ಪ್ರಾದೇಶಿಕ ಅಸಮಾನತೆ ಮತ್ತು ರಾಜಕೀಯ ಇಚ್ಛಾಶಕ್ತಿ’ ಕುರಿತು ಪತ್ರಕರ್ತ ಗಂಗಾಧರ ಕುಷ್ಟಗಿ ಮಾತ ನಾಡಿ, ಕಾವೇರಿಗಾಗಿ ವಿಧಾನಸೌಧವೇ ಕಾವೇರು ತ್ತದೆ. ಆದರೆ ಕೃಷ್ಣೆಯ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ರಾಜ ಕೀಯ ಗುಲಾಮಗಿರಿ ಹೆಚ್ಚಾಗಿರುವುದು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಇಂಬು ನೀಡುತ್ತದೆ. 371(ಜೆ) ಪರಿಣಾಮಕಾರಿ ಅನುಷ್ಠಾನ ಕ್ಕಾಗಿ ಸಂಪುಟ ಉಪ ಸಮಿತಿಯ ಅಧ್ಯಕ್ಷ  ಸ್ಥಾನದಿಂದ ಸಚಿವ ಎಚ್.ಕೆ.ಪಾಟೀಲ ಅವರನ್ನು ಕಿತ್ತು ಹಾಕಬೇಕು ಎಂದರು. 
 
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಸಾಮಾಜಿಕ ಹೊಣೆಗಾರಿಕೆ’ ಕುರಿತು ಬಳ್ಳಾರಿ ವಿವಿಯ ಸಿಂಡಿಕೇಟ್ ಸದಸ್ಯೆ ಸಾವಿತ್ರಿ ಮಜುಮದಾರ್ ಮಾತ ನಾಡಿ,  ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ಬದುಕು ಅಸಹನೀಯ ವಾಗಿದೆ. ಕಣ್ಣೀರು ಖರೀದಿ ವಸ್ತುವಾಗಿದ್ದರೆ ಮಹಿಳೆ ಶ್ರೀಮಂತೆ ಆಗಿರುತ್ತಿದ್ದಳು’ ಎಂದರು. ಪ್ರಾಧ್ಯಾಪಕ ಡಾ.ಎಸ್.ಎಸ್. ಪಾಟೀಲ್, ಡಾ. ನಾ ಕೊಟ್ರೇಶ್ ಉತ್ತಂಗಿ ಪ್ರತಿಕ್ರಿಯೆ ನೀಡಿದರು.
 
***
ಹತ್ತು  ನಿರ್ಣಯ ಮಂಡನೆ 
ಹೂವಿನಹಡಗಲಿ (ಎಂ.ಪಿ.ಪ್ರಕಾಶ್ ವೇದಿಕೆ): ‘ಪಟ್ಟಣದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಪ್ರಮುಖ ಹತ್ತು ನಿರ್ಣಯಗಳನ್ನು ಸರ್ವಾನು ಮತದಿಂದ ಅಂಗೀಕರಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಯಿತು.
 
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ ಅಧ್ಯಕ್ಷತೆಯಲ್ಲಿ ನಡೆದ ಬಹಿ ರಂಗ ಅಧಿವೇಶನದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ಪಿ.ಎಂ. ಮಂಜುನಾಥ ನಿರ್ಣಯ ಮಂಡಿಸಿದರು.
 
1) ಬಳ್ಳಾರಿ–ಆಂಧ್ರ ಗಡಿ ಭಾಗದ ಕನ್ನಡಿಗರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 5 ಹೊರನಾಡ ಕನ್ನಡಿಗರ ಮೀಸಲಾತಿ ನೀಡಬೇಕು, 2) ಹೂವಿನಹಡಗಲಿ ತಾಲ್ಲೂಕಿನ ಮಲ್ಲಿಗೆ ಬೆಳಗಾರರನ್ನು ಉತ್ತೇಜಿಸಲು ಮಲ್ಲಿಗೆ ಸಂಗ್ರಹ ಮತ್ತು ಸಂಸ್ಕರಣ ಘಟಕ ಸ್ಥಾಪಿಸಬೇಕು, 3) ಹಗರಿ ಬೊಮ್ಮನಹಳ್ಳಿಯ ಮಾಲವಿ ಜಲಾ ಶಯಕ್ಕೆ ತುಂಗಭದ್ರಾ ನದಿಯಿಂದ ಶಾಶ್ವತ ನೀರು ತುಂಬಿಸಬೇಕು, 4) ಬಳ್ಳಾರಿ ಜಿಲ್ಲೆಯ ಜೀವನಾಡಿ ತುಂಗ ಭದ್ರಾ ಜಲಾಶಯ ಹೂಳು ತೆಗೆದು ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸ ಬೇಕು, 5) ಗಣಿ ಕಾರ್ಮಿಕರಿಗೆ ಪುನ ರ್ವಸತಿ ಕಲ್ಪಿಸಿ, ಅವರ ಕ್ಷೇಮಾಭಿವೃದ್ಧಿ ಕಾಪಾಡುವುದು, 6) ಬಳ್ಳಾರಿಯಲ್ಲಿ ಸರ್ಕಾರದ ವತಿಯಿಂದ ಜೋಳದ ರಾಶಿ ದೊಡ್ಡನಗೌಡ ಟ್ರಸ್ಟ್‌ ಸ್ಥಾಪಿಸು ವುದು, 7) ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳ ‘ಬಸವತತ್ವ ರತ್ನಾಕರ’ ಹಾಗೂ ಅವರ ಎಲ್ಲ ಕೃತಿಗಳ ಮರುಮುದ್ರಣ ಮಾಡಿಸು ವುದು, 8) ಪ್ರಾಥಮಿಕ ಶಿಕ್ಷಣವನ್ನು ಬೋಧನಾ ಮಾಧ್ಯಮವಾಗಿ 1ರಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಮಾತೃಭಾಷೆ ಕನ್ನಡದಲ್ಲೇ ಕಲಿಸು ವುದು, 9) ಸಿಂಗಟಾಲೂರ ಏತ ನೀರಾವರಿಗೆ ಎಂ.ಪಿ.ಪ್ರಕಾಶ ಎಂದು ಹೆಸರಿಡಬೇಕು, 10) ಹೂವಿನ ಹಡಗಲಿಯನ್ನು ಶೈಕ್ಷಣಿಕ ಜಿಲ್ಲೆಯ ನ್ನಾಗಿ ಘೋಷಣೆ ಮಾಡಬೇಕು ಎಂಬ ನಿರ್ಣಯ ಮಂಡಿಸಲಾಯಿತು.
 
ನಿರ್ಣಯಗಳನ್ನು ಕೆ.ವೆಂಕಟೇಶ ಸೂಚಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ಎಂ.ಪಿ.ಎಂ. ಮಂಜು ನಾಥ ಅನುಮೋದಿಸಿದರು. ಕಸಾಪ ತಾಲ್ಲೂಕು ಮತ್ತು ಹೋಬಳಿ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.
 
***
‘ಅನುದಾನ ಅನ್ಯ ಉದ್ದೇಶಕ್ಕೆ  ಸಲ್ಲದು’
‘371(ಜೆ)ಗೆ ಸಂವಿಧಾನಿಕ ಮಾನ್ಯತೆ ಸಿಕ್ಕರೂ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ. ಹೈ.ಕ. ಭಾಗದಲ್ಲಿ ಪ್ರಶ್ನಿಸುವ ಮನೋಭಾವ ಕೊರತೆಯಿಂದ ಅನ್ಯಾಯಗಳು ಮುಂದುವರಿದಿವೆ’ ಎಂದು ಹೈ.ಕ. ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್ ಬೇಸರ ವ್ಯಕ್ತಪಡಿಸಿದರು.
 
ಇಲ್ಲಿನ ತಾಲ್ಲೂಕು ಕ್ರೀಡಾಂಗಣ ದಲ್ಲಿ ಹಮ್ಮಿಕೊಂಡಿರುವ ಬಳ್ಳಾರಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇ ಳನ ಎರಡನೇ ಗೋಷ್ಠಿಯಲ್ಲಿ ಅವರು ‘371(ಜೆ) ಕಲಂನ ಶೈಕ್ಷಣಿಕ ಸೌಲಭ್ಯ ಗಳು ಮತ್ತು ಅನುಷ್ಠಾನದ ಸವಾಲು ಗಳು’ ಕುರಿತು ವಿಷಯ ಮಂಡಿಸಿದರು.
 
371(ಜೆ) ಅಡಿ ಹೈ.ಕ. ಭಾಗದ ಅವಶ್ಯಕತೆಗಳನ್ನು ನೀಗಿಸಲು ಮೀಸ ಲಿಟ್ಟ ಅನುದಾನವನ್ನು ಅನ್ಯ ಯೋಜ ನೆಗಳಿಗೆ ಬಳಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ  ಅವರು, ಬಸ್‌ಗಳ ಖರೀದಿ, ವಿದ್ಯುತ್ ಕಂಬ, ಪರಿವರ್ತಕ ಖರೀದಿ, ಸಿ.ಸಿ.ರಸ್ತೆ, ವರ್ತುಲ ರಸ್ತೆ ನಿರ್ಮಾಣಕ್ಕೆ ಮೀಸಲು ಹಣ ಬಳಕೆಯಾಗಿದೆ. ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೂ ಅನು ದಾನ ನೀಡುವಂತೆ ಗೃಹ ಸಚಿವರು ಹೈ.ಕ.ಮಂಡಳಿಗೆ ಬೇಡಿಕೆ ಸಲ್ಲಿಸಿರು ವುದು ನಾಚಿಕೆಗೇಡು ಸಂಗತಿ ಎಂದರು. 
 
‘ಅನುಷ್ಠಾನ ಅಧಿಕಾರಿಗಳ ಗೊಂದಲ, ವಿಶ್ವವಿದ್ಯಾಲಯ ಕುಲ ಪತಿಗಳ ಮೇಲಾಟದಿಂದ ಉನ್ನತ ಶಿಕ್ಷಣದಲ್ಲಿ ನಿಗದಿತ ಮೀಸಲಾತಿ ಸಿಗುತ್ತಿಲ್ಲ. ಇರುವ ಮೀಸಲಾತಿಯನ್ನು ಕಬಳಿಸುವ ದೊಡ್ಡಜಾಲ ರಾಜ್ಯದಲ್ಲಿ ಕಾರ್ಯಪ್ರವೃತ್ತವಾಗಿರು ವುದರಿಂದ ಎಲ್ಲರೂ ಎಚ್ಚರ ವಹಿಸಬೇಕು. ಮೂಲ ನಿವಾಸಿಗಳಿಗೆ ಮಾತ್ರ ಮೀಸಲು ಸೌಲಭ್ಯ ಸಿಗಬೇಕು. ಇಲ್ಲಿಗೆ ಬದುಕಲು ಬಂದವರಿಗೆ ಅನುಕೂಲ ಸಿಗಬಾರದು.  ಮೀಸಲಾತಿ ಪ್ರಮಾಣ ಪತ್ರಗಳ ದುರುಪಯೋಗ ತಡೆಯಬೇಕು ಎಂದು ಹೇಳಿದರು.
 
**
ಜಿಲ್ಲೆಯ ಜೀವನಾಡಿ ತುಂಗ ಭದ್ರಾ ಜಲಾಶಯ ಹೂಳು ತುಂಬಿರುವುದರಿಂದ ರಾಜ್ಯಕ್ಕೆ ಅದರ ಪರಿಣಾಮ ಹೆಚ್ಚಾಗಿದೆ. ತಂತ್ರಜ್ಞಾನದ ನೆರವಿನಿಂದ ಹೂಳು ತೆಗೆಯಲು ಸಾಧ್ಯ.
-ಡಾ.ಎಚ್.ಮಹಾಬಲೇಶ್ವರಪ್ಪ
ಪ್ರಾಧ್ಯಾಪಕ, ಬಿಐಟಿಎಂ ಕಾಲೇಜು
 
**
 
‘ಹೈ.ಕ. ಮೀಸಲು ಹಣ ಬರೀ ಕಟ್ಟಡ ಕಾಮಗಾರಿಗೆ ವಿನಿಯೋಗಿಸದೇ ಶಿಕ್ಷಣ ಮತ್ತು ಮೂಲಸೌಕರ್ಯಕ್ಕೆ ಬಳಸ ಬೇಕು. ಉಚಿತ ಶಿಕ್ಷಣಕ್ಕೆ ಮಂಡಳಿ ಯಿಂದಲೇ ಹಣ ಭರಿಸಬೇಕು.
-ಡಾ. ರಜಾಕ್ ಉಸ್ತಾದ್
ಹೈ.ಕ. ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT