ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಜಿಲ್ಲೆ ಎಲ್ಲೆಡೆ ಆಕ್ರೋಶ: ಭ್ರಷ್ಟಾಚಾರಿ, ಸ್ವ ಹಿತ ಪಕ್ಷಪಾತಿ, ಆಡಳಿತದಲ್ಲಿ ಅಭಿವೃದ್ಧಿಯಿಲ್ಲ: ಆರೋಪ, ಬೃಹತ್‌ ಮೆರವಣಿಗೆ
Last Updated 21 ಫೆಬ್ರುವರಿ 2017, 4:51 IST
ಅಕ್ಷರ ಗಾತ್ರ
ಕಾರವಾರ: ಬರಗಾಲದಿಂದ ರಾಜ್ಯದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ಬಿಜೆಪಿ ಗ್ರಾಮೀಣ ಘಟಕದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. 
 
ಇಲ್ಲಿನ ಮಿತ್ರಸಮಾಜದಿಂದ ಮೆರವಣಿಗೆ ಹೊರಟ 30ಕ್ಕೂ ಅಧಿಕ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡರು. 
 
‘ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರವು, ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಗಳನ್ನು ಹುಸಿಗೊಳಿಸಿದೆ. ರಾಜ್ಯದ ಪ್ರಮುಖ ವ್ಯಕ್ತಿಗಳ ಮನೆಗಳ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾ ಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ’ ಎಂದು ಕಾರವಾರ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜನ್ ಕೊಳಂಬಕರ ಆರೋಪಿಸಿದರು. 
 
ಆನಂತರ ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಣಪತಿ ಉಳ್ವೇಕರ, ನಾಗರಾಜ ಜೋಶಿ, ಪೂರ್ಣಿಮಾ ಮಹೇಕರ, ನಯನಾ ನೀಲಾವರ, ಉದಯ ಬ.ಶೆಟ್ಟಿ, ಜಗದೀಶ್‌ ಗೋವೆಕರ, ರೋಷನ್‌ ವೆರ್ಣೇಕರ, ರಾಜೇಶ್‌ ನಾಯ್ಕ, ಸಂದೇಶ್‌ ಶೆಟ್ಟಿ ಹಾಜರಿದ್ದರು.
 
ಆಡಳಿತದಲ್ಲಿ ವಿಫಲ
ಶಿರಸಿ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಮತ್ತು ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಘಟಕದ ಕಾರ್ಯಕರ್ತರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು. 
 
ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿದ್ದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಖುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‌ಗೆ ಕಪ್ಪ ನೀಡಿದ್ದು ಬಹಿರಂಗಗೊಂಡಿದೆ. ಕಾಂಗ್ರೆಸ್‌ನ ಕೆಲ ಸಚಿವರು ಮುಖಂಡ ಮನೆಯಲ್ಲಿ ಕೋಟಿಗಟ್ಟಲೆ ಹಣ, ಬಂಗಾರ ಪತ್ತೆಯಾಗಿದೆ. ಆದರೆ ಸರ್ಕಾರ ಇವರ ರಕ್ಷಣೆಗೆ ನಿಂತಿದೆ. ಸರ್ಕಾರದ ಎಲ್ಲ ಯೋಜನೆಗಳು, ಕಾರ್ಯಕ್ರಮಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು. 
 
ಶೋಭಾ ನಾಯ್ಕ, ಆರ್‌.ಡಿ. ಹೆಗಡೆ ಜಾನ್ಮನೆ ಮಾತನಾಡಿದರು. 
 
ನಂತರ ಮೆರವಣಿಗೆಯಲ್ಲಿ ತೆರಳಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
 
ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಪ್ರಮುಖರಾದ  ಶ್ರೀರಾಮ ನಾಯ್ಕ, ಉಷಾ ಹೆಗಡೆ, ಪ್ರಭಾವತಿ ಗೌಡ, ವೀಣಾ ಶೆಟ್ಟಿ, ರಿತೇಶ ಕೆ, ಉಷಾ ನಾಯ್ಕ, ವೀಣಾ ಭಟ್ಟ, ನಾಗರಾಜ ನಾಯ್ಕ, ಸುವರ್ಣಾ ಸಜ್ಜನ್, ವಿಶಾಲ ಮರಾಠೆ, ಸಿಖಂದರ್ ಶುಂಠಿ ಇದ್ದರು. 
 
ಪ್ರತಿಭಟನಾ ಮೆರವಣಿಗೆ 
ಭಟ್ಕಳ: ಭ್ರಷ್ಟ ಸರ್ಕಾರದ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳ ತಾಲ್ಲೂಕು ಬಿಜೆಪಿ ಘಟಕದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
 
ಪಕ್ಷದ ಪ್ರಮುಖರಾದ ರಾಜೇಶ ನಾಯ್ಕ, ಗೋವಿಂದ ನಾಯ್ಕ, ಸುನೀಲ್ ನಾಯ್ಕ, ಈಶ್ವರ ದೊಡ್ಮನೆ, ಮಂಜುನಾಥ ನಾಯ್ಕ, ದಿನೇಶ ನಾಯ್ಕ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
ಸರ್ಕಾರ ವಜಾಕ್ಕೆ ಆಗ್ರಹ
ಮುಂಡಗೋಡ: ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ, ತಾಲ್ಲೂಕು ಬಿಜೆಪಿ ಘಟಕದವರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.
 
ಮಾಜಿ ಶಾಸಕ ವಿ.ಎಸ್‌.ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ತುಕಾರಾಮ ಇಂಗಳೆ, ಮಹೇಶ ಹೊಸಕೊಪ್ಪ, ಬಸವರಾಜ ಓಶಿಮಠ, ಕೆ.ರಾಜು, ಪಿ.ಜಿ.ತಂಗಚ್ಚನ್‌ ಇದ್ದರು.
 
ಸರ್ಕಾರದಲ್ಲಿ ಅಭಿವೃದ್ಧಿ ಇಲ್ಲ                      
ಸಿದ್ದಾಪುರ: ರಾಜ್ಯ ಸರ್ಕಾರದ ವಿರುದ್ಧ  ಬಿಜೆಪಿ ತಾಲ್ಲೂಕು ಮಂಡಳದ ಆಶ್ರಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
 
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್, ಬಿಜೆಪಿ ತಾಲ್ಲೂಕು ಮಂಡಳದ ಅಧ್ಯಕ್ಷ ಎಂ.ವಿ.ಭಟ್ ತಟ್ಟಿಕೈ  ಮತ್ತಿತರರು ಮಾತನಾಡಿದರು. ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
 
ಜನವಿರೋಧಿ ಆಡಳಿತ
ಯಲ್ಲಾಪುರ: ಜನವಿರೋಧಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸೋಮವಾರ ಪ್ರತಿ ಭಟನೆ ನಡೆಸಿದರು. ಅಂಬೇಡ್ಕರ್ ವೃತ್ತ ದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರ ವಣಿಗೆಯಲ್ಲಿ ತೆರಳಿ ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಡಿ.ಜಿ.ಹೆಗಡೆ ಮನವಿ ಸ್ವೀಕರಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಕಳುಹಿಸುವುದಗಿ ತಿಳಿಸಿದರು.
 
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ನಾಯ್ಕ, ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನರಸಿಂಹ ಕೋಣೆಮನೆ, ಧೀರಜ್ ತಿನೆಕರ್, ಎಂ. ಎನ್. ಭಟ್ಟ, ಸದಾಶಿವ ಹರಿಗದ್ದೆ, ನಟ ರಾಜ ಗೌಡರ್, ನಾಗರಾಜ ಕವಡಿಕೆರೆ, ಗಜಾನನ ನಾಯ್ಕ, ನಾಗೇಂದ್ರ ಹೆಗಡೆ, ಪ್ರಸಾದ ಹೆಗಡೆ, ಟಿ. ಆರ್. ಹೆಗಡೆ, ಗಣಪತಿ ಕುಂಟೆಮನೆ, ಕೃಷ್ಣ ನಾಯರ್, ಎಲ್. ಆರ್. ಭಟ್ಟ ತೋಟ್ಮನೆ, ಬಾಬಾ ಸಾಬ್ ಅಲನ್, ಅಶೋಕ ಕೊಠಾರಕರ್ ಇತರರಿದ್ದರು. 
 
**
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೇಲೆ ರಾಜ್ಯದ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ
-ಗಂಗಾಧರ ಭಟ್‌,
ಬಿಜೆಪಿ ಮುಖಂಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT