ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಫೀಜ್ ಸಯೀದ್ ಮತ್ತು ಸಹಚರರ ಶಸ್ತ್ರಾಸ್ತ್ರ ಪರವಾನಗಿ ರದ್ದು ಮಾಡಿದ ಪಾಕ್

Last Updated 21 ಫೆಬ್ರುವರಿ 2017, 14:57 IST
ಅಕ್ಷರ ಗಾತ್ರ

ಲಾಹೋರ್: ಜಮಾತ್‌ ಉದ್ ದವಾ ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಮತ್ತು ಈತನ ನಾಲ್ವರು ಸಹಚರರ ಶಸ್ತ್ರಾಸ್ತ್ರ ಪರವಾನಗಿಯನ್ನು ಪಾಕಿಸ್ತಾನ ರದ್ದು ಪಡಿಸಿದೆ.

ಸಯೀದ್ ಮತ್ತು ಆತನ ಸಹಚರರಿಗೆ ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಆದೇಶಿಸಿತ್ತು. ಇದೀಗ 44 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದು ಮಾಡಿಲಾಗಿದೆ ಎಂದು  ಪಂಜಾಬ್ ಗೃಹ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಸಯೀದ್ ಮತ್ತು ಆತನ ಸಂಘಟನೆಗಳಾದ ಜಮಾತ್ ಉದ್ ದವಾ ಮತ್ತು ಫಲಾನಾ ಇ ಇನ್ಸಾನಿಯತ್ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಮಾಡಲಾಗಿದೆ.

ಸಯೀದ್ ಮತ್ತು ಆತನ ನಾಲ್ವರು ಸಹಚರರನ್ನು ಪಾಕಿಸ್ತಾನ 90 ದಿನಗಳ ಕಾಲ ಗೃಹಬಂಧನದಲ್ಲಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT