ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ಎಸಿಬಿ ಬಲೆಗೆ

Last Updated 21 ಫೆಬ್ರುವರಿ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು: ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ ನೀಡಲು ₹5 ಸಾವಿರ ಲಂಚ  ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆ ಬೆರಳಚ್ಚುಗಾರ ಶ್ರೀನಿವಾಸ ಮೂರ್ತಿ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳದ  (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ದೊಮ್ಮಲೂರಿನ ಖಾಸಗಿ ಕಂಪ್ಯೂಟರ್‌ ಸಂಸ್ಥೆಯೊಂದು ಮೂರು ತಿಂಗಳಿಂದ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಯೂಸರ್‌ ನೇಮ್ ಮತ್ತು ಪಾಸ್‌ವರ್ಡ್‌ ಅನ್ನು ವಾಣಿಜ್ಯ ತೆರಿಗೆ ಇಲಾಖೆ ತಡೆ ಹಿಡಿದಿತ್ತು. ಹೊಸದಾಗಿ ಯೂಸರ್‌ ನೇಮ್ ಮತ್ತು ಪಾಸ್‌ವರ್ಡ್ ನೀಡಲು ₹ 8 ಸಾವಿರ ಲಂಚ ಕೇಳಿದ ಶ್ರೀನಿವಾಸಮೂರ್ತಿ, ₹5 ಸಾವಿರ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷೆ ಮಧ್ಯೆ ಆಹಾರ ಸೇವನೆಗೆ  ಅವಕಾಶ
ಬೆಂಗಳೂರು: 
ಟೈಪ್‌–1 ಡಯಾಬಿಟೀಸ್‌ (ಮಧುಮೇಹ) ಇರುವ 10ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಬರೆಯುವ ಮಧ್ಯದಲ್ಲಿ ಉಪಾಹಾರ ಸೇವಿಸಲು ಅವಕಾಶ ನೀಡಿ ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ.

ಮಧುಮೇಹ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಬರುವ ಸಂದರ್ಭದಲ್ಲಿ ಹಣ್ಣು, ಸ್ಯಾಂಡ್‌ವಿಚ್‌ ಸೇರಿದಂತೆ ನಿಗದಿತ ಆಹಾರ ಪದಾರ್ಥಗಳನ್ನು ತಂದು ಅದನ್ನು ಪರೀಕ್ಷಾ ಮೇಲ್ವಿಚಾರಕರಿಗೆ ಒಪ್ಪಿಸಬೇಕು. ಪರೀಕ್ಷೆ ಆರಂಭವಾಗಿ 90 ನಿಮಿಷಗಳ ನಂತರ ವಿರಾಮ ಸಿಗಲಿದ್ದು, ಆ  ಸಂದರ್ಭದಲ್ಲಿ ಆಹಾರ ಸೇವಿಸಬಹುದು.

ಆಹಾರ ತೆಗೆದುಕೊಂಡು ಬರುವ ವಿದ್ಯಾರ್ಥಿಗಳು ಮಧುಮೇಹ ಇರುವ ಬಗ್ಗೆ ವೈದ್ಯಕೀಯ ದಾಖಲೆಗಳೊಂದಿಗೆ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಬೇಕು.

ಇಂದಿನಿಂದ ಅನ್ವೇಷಣಾ ಕಾರ್ಯಕ್ರಮ

ಬೆಂಗಳೂರು:‘ಅಗಸ್ತ್ಯ ಇಂಟರ್‌ ನ್ಯಾಷ ನಲ್ ಫೌಂಡೇಷನ್ ವತಿಯಿಂದ ಫೆ.22 ಮತ್ತು  23 ರಂದು ಅನ್ವೇಷಣಾ ಕಾರ್ಯ ಕ್ರಮ ನಗರದ ಶಿಕ್ಷಕರ ಸದನದಲ್ಲಿ ನಡೆಯಲಿದೆ’ ಎಂದು ಫೌಂಡೇಷನ್‌ನ ಕಾರ್ಯದರ್ಶಿ ಟಿ.ಎಸ್. ಸುರೇಶ್ ತಿಳಿಸಿದರು.

ಮಂಗಳವಾರ ಮಾತನಾಡಿದ ಅವರು, ‘ನಗರದ ಸಮಸ್ಯೆಗಳು, ಮರಗಳ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳಿಗೆ ಅನ್ವೇಷಣಾ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯದಾದ್ಯಂತ  ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ 192 ವರದಿಗಳು ಬಂದಿದ್ದವು. ಆ ವರದಿಗಳನ್ನು ಪರಿಶೀಲಿಸಿ ಅಂತಿಮಸುತ್ತಿಗೆ 40 ವರದಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.

‘ಅಂತಿಮಸುತ್ತಿಗೆ ಆಯ್ಕೆಯಾದ 40 ವರದಿಗಳನ್ನು ತಯಾರಿಸಿದ ವಿದ್ಯಾರ್ಥಿಗಳು   ಫೆ.22 ರಂದು ತಮ್ಮ ಯೋಜನೆಗಳ ಕುರಿತು ವಿಚಾರ ಮಂಡಿಸಲಿದ್ದಾರೆ. ಅದರಲ್ಲಿ 10 ವರದಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿ ಮೊತ್ತ ₹1.25 ಲಕ್ಷ ಒಳಗೊಂಡಿದ್ದು, ಆಯ್ಕೆಯಾದ 10 ವರದಿಗಳಿಗೆ ಹಣವನ್ನು ವಿಭಜನೆ ಮಾಡಿ ನೀಡುತ್ತೇವೆ’ ಎಂದರು.

*******

ಶಾಂಡಿಲ್ಯ ಶ್ರೀ ನಿಧನ 
ಖಾನಾಪುರ (ಬೆಳಗಾವಿ ಜಿಲ್ಲೆ):  ತಾಲ್ಲೂಕಿನ ಅವರೊಳ್ಳಿ ಬಿಳಕಿ ಹಾಗೂ ಬೈಲಹೊಂಗಲ ತಾಲ್ಲೂಕು ಹುಣ ಶಿಕಟ್ಟಿ ರುದ್ರಸ್ವಾಮಿ ಮಠದ ಮಠಾ ಧೀಶ ರಾಗಿದ್ದ ಶಾಂಡಿಲ್ಯ ಶ್ರೀಗಳು ಸೋಮವಾರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾದರು.

ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ ಅವರೊಳ್ಳಿ ಬಿಳಕಿಯ ಶಾಂಡಿಲ್ಯ ಮಠಕ್ಕೆ ತರಲಾ ಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ  ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT