ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಹಿಂದಿನ ಅಪಾಯ

Last Updated 22 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕಣಗಿಲೆ ಪ್ರಭೇದಕ್ಕೆ ಸೇರಿದ ಈ ಹೂವಿನ ಹೆಸರು ನೇರಿಯಂ ಓಲಿಯಂಡರ್. ‘ಅತಿ ಅಪಾಯಕಾರಿ ಗಿಡ’ ಎನಿಸಿಕೊಂಡಿರುವ ಇದರ ಮೂಲ ಅಮೆರಿಕ. ಅಲಂಕಾರಕ್ಕೆ ಹೆಚ್ಚು ಬಳಕೆಯಾಗುವ ಈ ಹೂವಿನ ಸರಳ ಸೌಂದರ್ಯವೇ ಇದರ ಪ್ರಮುಖ ಆಕರ್ಷಣೆ.
 
ಆದರೆ ಈ ಸೌಂದರ್ಯದ ಹಿಂದೆ ಅಪಾಯವೂ ಅಡಗಿದೆ. ಈ ಹೂವಿನ ಗಿಡದ ಯಾವುದೇ ಭಾಗವನ್ನು ಒಂದಿಷ್ಟು ತಿಂದರೂ ಜೀವಕ್ಕೇ ತೊಂದರೆ. ಇದರ ಎಲೆ, ಹೂವು ಮತ್ತು ಹಣ್ಣಿನಲ್ಲಿ ಓಲಿಯಂಡ್ರಿನ್ ಹಾಗೂ ಓಲಿಯನ್‌ಡ್ರಿಜೆನಿನ್ ಎಂಬ ರಾಸಾಯನಿಕವಿದ್ದು, ಇವು ‘ಕಾರ್ಡಿಯಕ್ ಗ್ಲೈಕೊಸೈಡ್‌’ ಎನಿಸಿಕೊಂಡಿವೆ.
 
ಇದನ್ನು ಕೆಲವು ಔಷಧಕ್ಕೆ ಬಳಸಿದರೂ ಕ್ರಮಬದ್ಧವಲ್ಲದ ಸೇವನೆಯಿಂದ ಹೃದಯಸ್ತಂಭನ ಉಂಟಾಗುವ ಸಾಧ್ಯತೆಯಿದೆಯಂತೆ. ಆದ್ದರಿಂದಲೇ ಈ ಹೂವನ್ನು ಅತಿ ವಿಷಕಾರಿ ಹೂವು ಎಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT