ಕಲರ್ಸ್‌ ಕನ್ನಡ

‘ಸೂಪರ್‌ ಮಿನಿಟ್‌’ನಲ್ಲಿ ಕಲಾವಿದರ ದಂಡು

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುವ ‘ಸೂಪರ್‌ ಮಿನಿಟ್‌’ ಶೋದ ಮೊದಲ ಸಂಚಿಕೆ ವೀಕ್ಷಕರ ಮನಗೆದ್ದಿತ್ತು. ಇದೀಗ ಮತ್ತೊಂದು ಸಂಚಿಕೆಗೆ ಸೆಲೆಬ್ರಿಟಿಗಳು ಸಜ್ಜಾಗಿದ್ದಾರೆ.

ಶನಿವಾರ, ‘ಪುಟ್ಟ ಗೌರಿ ಮದುವೆ’ ಮತ್ತು ‘ಮಂಗಳೂರು ಹುಡುಗಿ ಹುಬ್ಳಿ ಹುಡುಗ’ ಧಾರಾವಾಹಿಗಳ ಕಲಾವಿದರು  ಆಡಲಿದ್ದಾರೆ. ‘ಪುಟ್ಟ ಗೌರಿ’ ತಂಡದಲ್ಲಿ ಹಿಮಾ, ಗೌರಿ, ಮಹೇಶ, ಸಾಗರಿ ಮತ್ತು ಶ್ರವಂತ್‌ ಆಡಿದರೆ, ‘ಮಂಗಳೂರು ಹುಡ್ಗ’ದಿಂದ  ಅಮೂಲ್ಯಾ, ಸುಂದರ್‌, ಅನಿರುದ್ಧ, ಗೌರಾಂಬಿಕಾ ಮತ್ತು ಈರಣ್ಣ  ಪಾತ್ರಧಾರಿಗಳು ಸೆಣಸಲಿದ್ದಾರೆ.

ಭಾನುವಾರದ ಸಂಚಿಕೆಯಲ್ಲಿ ‘ಗಾಂಧಾರಿ’ ತಂಡದ ಎದುರು ‘ಕುಲವಧು’ ಕಲಾವಿದರು ಆಡಲಿದ್ದಾರೆ. ಗಾಂಧಾರಿಯ ಚಿರು, ದೃಷ್ಟಿ, ತ್ರಿಶಾಲ್‌, ತ್ರಿವೇಣಿ ಮತ್ತು ಕುಶಾಲ್‌ ಹಾಗೂ ‘ಕುಲವಧು’ನಿಂದ ವೇದ್‌, ಧನ್ಯಾ, ಗೌರವ್‌, ಅಮೃತಾ ಮತ್ತು ಹರಿ ಪಾತ್ರಧಾರಿಗಳು ಆಡಲಿದ್ದಾರೆ.

Comments