ಹಲವು ವಸ್ತುಗಳನ್ನು ಬಳಸಿ ವಿವಿಧ ಪದರಗಳಲ್ಲಿ ಗೂಡು ಕಟ್ಟುತ್ತದೆ. ಮರದ ಕಾಂಡ, ಟೊಳ್ಳು ಭಾಗ ಮತ್ತು ದ್ರಾಕ್ಷಿಯ ಬಳ್ಳಿಗಳಲ್ಲಿ ಸಾಮಾನ್ಯವಾಗಿ ಅಳಿಲು ಗೂಡು ಕಟ್ಟುತ್ತದೆ. ಗೂಡಿನ ಮೇಲಿನ ಪದರ ತೇವಭರಿತ ಎಲೆ ಮತ್ತು ಪಾಚಿಯನ್ನು ಒಳಗೊಂಡಿರುತ್ತದೆ. ಅದರ ಒಳಗಿನ ಪದರ ಸ್ವಲ್ಪ ಗಟ್ಟಿಯಾಗಿದ್ದು, ಅದು ರೆಂಬೆ ಮತ್ತು ಬಳ್ಳಿಯ ಭಾಗವನ್ನು ಹೊಂದಿರುತ್ತದೆ.