ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 25–2–1967

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಡಾ. ಲೋಹಿಯಾ ಅವರ ಆಯ್ಕೆ
ಲಖನೌ, ಫೆ. 24–
ಸಂಯುಕ್ತ ಸೋಷಲಿಸ್ಟ್ ನಾಯಕ ಡಾ. ರಾಮಮನೋಹರ ಲೋಹಿಯಾ ಅವರು ಕನೂಜ್ ಕ್ಷೇತ್ರದಿಂದ ಲೋಕಸಭೆಗೆ ಅಲ್ಪಬಹುಮತದಿಂದ ಚುನಾಯಿತರಾಗಿರುವರೆಂದು ಇಲ್ಲಿಗೆ ಸುದ್ದಿ ಬಂದಿದೆ.

ಕೃಷ್ಣಮೆನನ್ ಪರಾಭವ?
ನವದೆಹಲಿ, ಫೆ. 24–
ಈಶಾನ್ಯ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ರಕ್ಷಣಾ ಸಚಿವರಾದ ಪಕ್ಷೇತರ ಅಭ್ಯರ್ಥಿ
ಶ್ರೀ ವಿ.ಕೆ.ಕೃಷ್ಣಮೆನನ್ ಅವರನ್ನು ಯೋಜನಾ ಆಯೋಗದ ಮಾಜಿ ಸದಸ್ಯ ಕಾಂಗ್ರೆಸ್‌ನ ಶ್ರೀ ಎಸ್.ಜಿ. ಬರ್ವೆ
ಅವರು ಸುಮಾರು ಹತ್ತು ಸಾವಿರ ಮತಗಳಿಂದ ಸೋಲಿಸಿದ್ದಾರೆಂದು ಇಲ್ಲಿಗೆ ತಲುಪಿರುವ ಸುದ್ದಿ ತಿಳಿಸಿದೆ.

ಮುರಾರ್ಜಿ, ಜಗಜೀವನರಾಂ, ರೆಡ್ಡಿ, ಡಾಂಗೆ ಆಯ್ಕೆ
ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಮುರಾರ್ಜಿ ದೇಸಾಯಿ, ಜಗಜೀವನರಾಂ, ಸಂಜೀವ ರೆಡ್ಡಿ ಲೋಕಸಭೆಗೆ ಗೆದ್ದಿದ್ದಾರೆ. ಯೋಜನಾ ಸಚಿವ ಅಶೋಕ ಮೆಹತಾ, ಯೋಜನಾ ಆಯೋಗದ ಮತ್ತೊಬ್ಬ ಮಾಜಿ ಸದಸ್ಯ ಡಾ. ವಿ.ಕೆ.ಆರ್.ವಿ. ರಾವ್ ಸಹ ಚುನಾಯಿತರಾಗಿದ್ದಾರೆ. ವಿರೋಧ ಪಕ್ಷಗಳ ನಾಯಕರಾದ ಎಸ್.ಎ. ಡಾಂಗೆ, ಹಿರೇನ್ ಮುಖರ್ಜಿ, ನಾಥಪೈ ಯಶಸ್ವಿಯಾಗಿದ್ಸಾರೆ. ಸ್ವತಂತ್ರ ಪಕ್ಷದ ಅಧ್ಯಕ್ಷ ಎನ್.ಜಿ. ರಂಗಾ ಪರಾಜಿತರಾಗಿದ್ದಾರೆ. ಪಕ್ಷೇತರರಾದ ಪ್ರಕಾಶ ವೀರಶಾಸ್ತ್ರೀ ಆರಿಸಿ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT