ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತೆಗಳು ನಗುತ್ತಿವೆ, ಜನರು ಅಳುತ್ತಿದ್ದಾರೆ, ಭಾರತದಲ್ಲಿ ಏನಾಗುತ್ತಿದೆ?

Last Updated 26 ಫೆಬ್ರುವರಿ 2017, 9:57 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಅವರ ಕತ್ತೆ ಹೇಳಿಕೆ ವಿವಾದ ಸುದ್ದಿಯಾಗುತ್ತಿರುವ ಹೊತ್ತಲ್ಲಿ ಆಮ್ ಆದ್ಮಿ ಪಕ್ಷದ ನೇತಾರ, ಕವಿ ಕುಮಾರ್ ವಿಶ್ವಾಸ್ ಅವರು ಓಂ ಪ್ರಕಾಶ್ ಆದಿತ್ಯ ಅವರ 'ಇಲ್ಲಿಯೂ ಕತ್ತೆ ಇದೆ' ಎಂಬ ಕವನವನ್ನು ವಾಚಿಸಿ ಯೂಟ್ಯೂಬ್‌ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.


ಅಖಿಲೇಶ್ ಮತ್ತು ನರೇಂದ್ರ ಮೋದಿಯವರ ಜಗಳ ನನಗೆ ಆದಿತ್ಯ ಅವರ ಕವನವನ್ನು ನೆನಪಿಸಿತು ಎಂದು ವಿಶ್ವಾಸ್ ಹೇಳಿದ್ದು, ಈ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಹಿಂದಿ ಭಾಷೆಯಲ್ಲಿರುವ ಆ ಕವನದ ಆಯ್ದ ಕೆಲವು ಸಾಲುಗಳ ಅನುವಾದ:

ಇಲ್ಲಿಯೂ ಕತ್ತೆಗಳಿವೆ, ಅಲ್ಲಿಯೂ ಕತ್ತೆಗಳಿವೆ
ಎಲ್ಲಿ ನೋಡಿದರೂ ಕತ್ತೆಗಳೇ ಇವೆ
ಕತ್ತೆಗಳು ನಗುತ್ತಿವೆ
ಜನರು ಅಳುತ್ತಿದ್ದಾರೆ
ಭಾರತದಲ್ಲಿ ಇದು ಏನಾಗುತ್ತಿದೆ?

ಈ ಜಗತ್ತೇ ಕತ್ತೆಗಳದ್ದು ಎಂದು ಹೇಳುವ ಸಾಲುಗಳು ಹೀಗಿವೆ

ಕತ್ತೆಗಳಿಗೆ ಹುಲ್ಲು ಸಿಗುತ್ತಿಲ್ಲ
ಅವುಗಳು ಚವನಪ್ರಾಶ್ ತಿನ್ನುತ್ತಿವೆ
ಇಲ್ಲಿ ಮನುಷ್ಯನಿಗೆ ಏನು ಸಿಗುತ್ತಿದೆ
ಈ ಜಗತ್ತೇ ಕತ್ತೆಗಳಿಗಾಗಿ ಇರುವುದಾಗಿದೆ

ಮೈಕ್ರೋಫೋನಿನ ಮುಂದೆ ನಿಂತು ಕಿರುಚಾಡುವವರು ನಿಜವಾದ ಕತ್ತೆಗಳು ಎನ್ನುವ ಮೂಲಕ  ರಾಜಕಾರಣಿಗಳಿಗೆ ಟಾಂಗ್ 

ಗಲ್ಲಿಯಲ್ಲಿ ತಿರುಗಾಡುತ್ತಿರುವವುಗಳು
ದುರ್ಬಲವಾದ ಕತ್ತೆಗಳು
ಬಂಗಲೆಯಲ್ಲಿ ವಾಸಿಸುತ್ತಿರುವವುಗಳೇ
ನಿಜವಾದ ಕತ್ತೆಗಳು
ಗದ್ದೆಯಲ್ಲಿ ಕಾಣುವವು ಉಳುಮೆಯ ಕತ್ತೆಗಳು
ಮೈಕ್ ಹಿಡಿದು ಅರಚುವವು
ಅಸಲಿ ಕತ್ತೆಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT