ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ, ಪೈಪೋಟಿ, ಅವಕಾಶಗಳ ಸುತ್ತ...

ಸುಚಿತ್‌ ಸಂದರ್ಶನ
Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಜೆ.ಸುಚಿತ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅವರ ಆಟವನ್ನು ಸನಿಹದಿಂದ ಗಮನಿಸಿದ್ದೇನೆ. ಸೂಕ್ತ ಮಾರ್ಗ ದರ್ಶನ ಹಾಗೂ ಅವಕಾಶ ಲಭಿಸಿದರೆ ಉತ್ತಮ ಆಟಗಾರರಾಗಿ ಬೆಳೆಯಬಲ್ಲ ತಾಕತ್ತು ಇವರಲ್ಲಿದೆ’
 
–2015ರ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಚಾಂಪಿಯನ್ ಆದಾಗ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌ ಹಾಗೂ  ರಿಕಿ ಪಾಂಟಿಂಗ್ ವ್ಯಕ್ತಪಡಿಸಿದ್ದ ಮೆಚ್ಚುಗೆಯ ಮಾತುಗಳಿವು. ಸಚಿನ್‌, ಪಾಂಟಿಂಗ್‌ ಅವರಂಥ ಆಟಗಾರ ರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳು ವುದು ಅಷ್ಟು ಸುಲಭದ ಮಾತಲ್ಲ.
 
ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಈಗ ಭಾರತ ಕ್ರಿಕೆಟ್‌ ತಂಡದಲ್ಲಿ ಮಿಂಚುತ್ತಿ ರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಮೈಸೂ ರಿನ ಎಡಗೈ ಸ್ಪಿನ್ನರ್‌ ಜೆ.ಸುಚಿತ್‌ ಕೂಡ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿ ದ್ದಾರೆ. ಐಪಿಎಲ್‌, ಕೆಪಿಎಲ್, ಸಿ.ಕೆ.ನಾಯ್ಡು  , ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗಳಲ್ಲಿ ಪಡೆದಿರುವ ವಿಕೆಟ್‌ಗಳು ಅವರ ಪ್ರತಿಭೆಯನ್ನು ಬಿಚ್ಚಿಡುತ್ತವೆ.
 
ಅದರಲ್ಲೂ ಏಳು ಮಂದಿ ಅಂತರ ರಾಷ್ಟ್ರೀಯ ಆಟಗಾರರನ್ನು ಒಳಗೊಂ ಡಿದ್ದ ಬಾಂಗ್ಲಾದೇಶ ‘ಎ’ ಎದುರು ಏಳು ವಿಕೆಟ್‌ ಕಬಳಿಸಿದ್ದರು. ಅದು ಸುಚಿತ್‌ ಆಡಿದ ಚೊಚ್ಚಲ ಪ್ರಥಮ ದರ್ಜೆ ಪಂದ್ಯ ಎಂಬುದು ವಿಶೇಷ. ಅವರು ಬೌಲಿಂಗ್‌ ಮಾತ್ರವಲ್ಲ; ಉಪ ಯುಕ್ತ ಬ್ಯಾಟಿಂಗ್‌ ಮೂಲಕ ಆಲ್‌ ರೌಂಡರ್‌ ಎನಿಸಿಕೊಳ್ಳುತ್ತಿದ್ದಾರೆ. ಐಪಿಎಲ್‌ನಲ್ಲಿ ಬೌಂಡರಿ, ಸಿಕ್ಸರ್‌ ಬಾರಿಸಿ ಗಮನ ಸೆಳೆದಿದ್ದರು. ಅದು ಕೆಪಿಎಲ್‌ ನಲ್ಲೂ ಮುಂದುವರಿದಿತ್ತು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. 2014ರಲ್ಲಿ ಮೈಸೂರು ವಾರಿಯರ್ಸ್‌ ತಂಡ ಕೆಪಿಎಲ್‌ ಚಾಂಪಿಯನ್‌ ಆಗು ವಲ್ಲಿ ಸುಚಿತ್‌ ಕೊಡುಗೆ ಅಪಾರ. ಆದರೆ 23 ವರ್ಷದ ಆಟಗಾರ ನಿಗೆ ದೊಡ್ಡ ಮಟ್ಟದಲ್ಲಿ ಆಡಲು ಇನ್ನೂ ಅವಕಾಶ ಲಭಿಸಿಲ್ಲ.
 
 2015–16ರ ರಣಜಿ ಋತುವಿನಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದರು. 2016–17ರ ಋತುವಿ ನಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ. ಐಪಿಎಲ್‌ನಲ್ಲೂ ಹೆಚ್ಚು ಪಂದ್ಯ ಆಡಲಿಲ್ಲ. ಆದರೆ, ಲೀಗ್ ಹಾಗೂ ಇನ್ನಿತರ ಟೂರ್ನಿಗಳಲ್ಲಿ ಹೆಚ್ಚು ವಿಕೆಟ್‌ ಪಡೆದವರಲ್ಲಿ ಸುಚಿತ್‌ ಮೊದಲನೇ ಸಾಲಿ ನಲ್ಲಿ ನಿಲ್ಲುತ್ತಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.
 
* ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ನಿಮ್ಮಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿದೆ. ಈ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿದೆಯೇ?
ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಗೆಲುವಿಗೆ ಕಾರಣವಾಗುತ್ತಿರುವುದು ಖುಷಿ ನೀಡಿದೆ. ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿ ಯಲ್ಲಿ ಕರ್ನಾಟಕ ಚಾಂಪಿಯನ್‌ ಆಯಿತು.    ಕೆಪಿಎಲ್‌ನಲ್ಲೂ  ಪ್ರತಿನಿಧಿಸಿದ್ದ ಮೈಸೂರು ವಾರಿಯರ್ಸ್‌ ಸೆಮಿ ಫೈನಲ್ ಪ್ರವೇಶಿಸಿತ್ತು. ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಆಲ್‌ ರೌಂಡ್‌ ಪ್ರದ ರ್ಶನ ನೀಡಿದ್ದೇನೆ. ಆದರೆ, ರಣಜಿ ಹಾಗೂ ಐಪಿ ಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
 
* ಐಪಿಎಲ್‌ ಸಮೀಪಿ ಸುತ್ತಿದೆ. ಮುಂಬೈ  ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದೀರಿ. ಈ ಬಗ್ಗೆ?
ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆರು ಮಂದಿ ಸ್ಪಿನ್ನರ್‌ಗಳಿದ್ದಾರೆ. ಹೀಗಾಗಿ, ತುಂಬಾ ಸ್ಪರ್ಧೆ ಇದೆ. ಆಡಲು ಅವಕಾಶ ಸಿಕ್ಕಿದ ಪಂದ್ಯ ದಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಉಳಿ ಗಾಲ. ಸದ್ಯಕ್ಕೆ ಉತ್ತಮ ಫಾರ್ಮ್‌ನಲ್ಲಿದ್ದೇನೆ. ಇಲ್ಲಿ ನೀಡುವ ಪ್ರದರ್ಶನ ಮುಂದಿನ ಅವಕಾಶಗಳಿಗೆ ರಹದಾರಿ ಮಾಡಿಕೊಡಲಿದೆ.
 
* 2015ರ ಐಪಿಎಲ್‌ನಲ್ಲಿ ನೀವು ಕ್ರಿಕೆಟ್‌ ದಿಗ್ಗಜರಿಂದ ಮೆಚ್ಚುಗೆ ಗಿಟ್ಟಿಸಿದವರು. ಆ ಬಳಿಕ ಏಕೆ ದೊಟ್ಟಮಟ್ಟದಲ್ಲಿ ಅವಕಾಶ ಸಿಗಲಿಲ್ಲ?
ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಕೊಳ್ಳುವಲ್ಲಿ ಎಡವಿದೆ ಅನಿಸುತ್ತದೆ. 2016ರ ಐಪಿಎಲ್‌ನಲ್ಲಿ ಒಂದು ಪಂದ್ಯದಲ್ಲಿ ಅವಕಾಶ ಲಭಿಸಿತ್ತು. ಆದರೆ, ವಿಕೆಟ್‌ ಪಡೆಯುವಲ್ಲಿ ವಿಫಲ ನಾದೆ. ಹಾಗೆಯೇ, ರಣಜಿಯಲ್ಲೂ ಹೆಚ್ಚು ಪೈಪೋಟಿ ಇದ್ದ ಕಾರಣ  ಅವಕಾಶ ಸಿಗಲಿಲ್ಲ.
 
* ದೇಶಿ ಟೂರ್ನಿಗಳಲ್ಲಿ ಮಿಂಚಿರುವ ನೀವು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಅವ ಕಾಶ ಗಿಟ್ಟಿಸಿಕೊಳ್ಳುವ ವಿಶ್ವಾಸ ಹೊಂದಿದ್ದೀರಾ?
ಖಂಡಿತ ದೊಡ್ಡಮಟ್ಟದಲ್ಲಿ ಆಡಲು ಅವಕಾಶ ಲಭಿಸಲಿದೆ ಎಂಬ ವಿಶ್ವಾಸ ಇದೆ. ಅದಕ್ಕಾಗಿ ಚೆನ್ನಾಗಿ ತಾಲೀಮು ನಡೆಸಿ ಹೆಚ್ಚು ವಿಕೆಟ್‌ ಪಡೆಯಬೇಕು.
 
* ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ಗೂ ಒತ್ತು ನೀಡುತ್ತಿದ್ದೀರಿ. ಈ ಬಗ್ಗೆ?
ಬ್ಯಾಟಿಂಗ್ ಮೂಲಕವೂ ತಂಡದ ಗೆಲುವಿಗೆ ಕಾಣಿಕೆ ನೀಡಿದರೆ ಅವಕಾಶಗಳು ಹೆಚ್ಚು. ಸಿ.ಕೆ.ನಾಯ್ಡು ಟ್ರೋಫಿಯಲ್ಲಿ 210 ರನ್‌ ಗಳಿಸಿದೆ. ಆಲ್‌ರೌಂಡರ್‌ಗಳಿಗೆ ಅವಕಾಶದ ಬಾಗಿಲು ತೆರೆದಿರುತ್ತದೆ. ತಂಡ ಬಯಸುವುದು ಕೂಡ ಆಲ್‌ರೌಂಡರ್‌ಗಳನ್ನು.
 
* ಇದುವರೆಗಿನ ನಿಮ್ಮ ಕ್ರಿಕೆಟ್‌ ಜೀವನ ದಲ್ಲಿ ಮರೆಯಲಾಗದ ಕ್ಷಣ?
ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಥಾನ ಲಭಿಸಿದ್ದೇ ನನ್ನ ಕ್ರಿಕೆಟ್ ಜೀವನದ ಪ್ರಮುಖ ತಿರುವು. ಅಲ್ಲದೆ, 2015ರ ಐಪಿಎಲ್‌ ಅವತರ ಣಿಕೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ 13 ಪಂದ್ಯ ಆಡಲು ಅವಕಾಶ ಲಭಿಸಿತು. ಸಚಿನ್, ಪಾಂಟಿಂಗ್ ಅವರನ್ನು ಟಿ.ವಿಯಲ್ಲಿ ನೋಡಿ ಆನಂದಿಸಿದವನು ನಾನು. ಅವ ರೊಂದಿಗೆ ಮಾತನಾಡಲು, ಅಭ್ಯಾಸ ನಡೆಸಲು ಅವಕಾಶ ಸಿಕ್ಕಿದ್ದು  ಮರೆಯಲಾಗದ ಕ್ಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT