ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಟಮರಾಯುಡು’ ಹೊಸ ದಾಖಲೆ

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ADVERTISEMENT

ತೆಲುಗಿನ ಪವರ್‌ಸ್ಟಾರ್ ಪವನ್‌ ಕಲ್ಯಾಣ್‌ ಅವರ ‘ಕಾಟಮರಾಯುಡು’ ಚಿತ್ರದ ಟೀಸರ್‌ ಅನ್ನು 81 ಲಕ್ಷ ಜನ ವೀಕ್ಷಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಇದು ದಾಖಲೆ ನಿರ್ಮಿಸಿದೆ.

ಈ ಹಿಂದೆ ರಜನೀಕಾಂತ್ ಅವರ ‘ಕಬಾಲಿ’ ಚಿತ್ರದ ಟೀಸರ್‌ 60 ಲಕ್ಷ ಜನ ವೀಕ್ಷಿಸಿದ್ದರು. ಆ ದಾಖಲೆ ಅಳಿಸಿ ಹಾಕಿದ್ದು ಚಿರಂಜೀವಿ ಅವರ ‘ಖೈದಿ ನಂ150’.  ಚಿರಂಜೀವಿ ಅಭಿನಯದ ‘ಖೈದಿ ನ.150’ ಟೀಸರ್‌ ಅನ್ನು 77 ಲಕ್ಷ ವೀಕ್ಷಿಸಿದ್ದರು. ಫೆ.4ರಂದು ಯುಟ್ಯೂಬ್‌ಗೆ ಅಪ್‌ಲೋಡ್ ಆದ  ‘ಕಾಟಮರಾಯುಡು’ ಟೀಸರ್‌  ಮೂಲಕ ಅಣ್ಣನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ ಪವನ್‌ ಕಲ್ಯಾಣ್‌.

ಕಿಶೋರ್‌ ಕುಮಾರ್ ಪರ್ದಾಸನಿ (ಡಾಲಿ) ನಿರ್ದೇಶಿಸುತ್ತಿರುವ ಈ ಚಿತ್ರ ತಮಿಳಿನ ಸೂಪರ್ ಹಿಟ್ ಚಿತ್ರ ‘ವೀರಂ’ನ ರಿಮೇಕ್‌. ಶ್ರುತಿ ಹಾಸನ್‌ ನಾಯಕಿ. ಚಿತ್ರ ಮಾರ್ಚ್‌ 29ಕ್ಕೆ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT