ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದಿ ಜಂಗಲ್ ಬುಕ್'ಗೆ ಅತ್ಯುತ್ತಮ ವಿಶುವಲ್‌ ಎಫೆಕ್ಟ್ಸ್‌ ಪ್ರಶಸ್ತಿ

Last Updated 27 ಫೆಬ್ರುವರಿ 2017, 7:08 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಭಾರತದಲ್ಲೂ ಹೆಚ್ಚು ಗಳಿಕೆ ಕಂಡ ಹಾಲಿವುಡ್‌ ಸಿನಿಮಾ ‘ದಿ ಜಂಗಲ್ ಬುಕ್’ ಅತ್ಯುತ್ತಮ ವಿಶುವಲ್‌ ಎಫೆಕ್ಟ್ಸ್‌ ಪ್ರಶಸ್ತಿ ಪಡೆದಿದೆ.

ಡಿಸ್ನಿ ಸಂಸ್ಥೆ ನಿರ್ಮಿಸಿರುವ ‘ದಿ ಜಂಗಲ್ ಬುಕ್’ ಸಿನಿಮಾದಲ್ಲಿ ಭಾರತ ಮೂಲದ ಬಾಲಕ ನೀಲ್ ಸೇಥಿ ಮೋಗ್ಲಿ ಪಾತ್ರದಲ್ಲಿ ನಟಿಸಿದ್ದರು.


ಕಾಡು, ಅಲ್ಲಿನ ಪ್ರಾಣಿಗಳು, ಅವುಗಳ  ಚಲನೆ ಎಲ್ಲಕ್ಕೂ ವಿಶುವಲ್‌ ಎಫೆಕ್ಟ್‌ ಮೂಲಕ ನೈಜತೆಯ ಸ್ಪರ್ಶ ನೀಡಲಾಗಿದೆ.

ಬೆನ್‌ ಕಿಂಗ್ಸ್‌ಲೇ, ಬಿಲ್‌ ಮುರ್ರೇ, ಸ್ಕಾರ್ಲೆಟ್‌ ಜಾನ್ಸನ್‌, ಇರ್ದಿಸ್‌ ಎಲ್ಬಾ ಮತ್ತು ಕ್ರಿಸ್ಟೋಫರ್‌ ವಾಕೆನ್‌ ಅವರು ವಿವಿಧ ಪಾತ್ರಗಳಿಗೆ ಕಂಠ ದಾನ ಮಾಡಿದ್ದಾರೆ.

ರಾಬರ್ಟ್‌ ಲೆಗಾಟೋ, ಆ್ಯಡಮ್‌ ವಾಲ್ಡೆಜ್‌, ಆ್ಯಂಡ್ರೂ ಆರ್‌.ಜೋನ್ಸ್‌ ಹಾಗೂ ಡ್ಯಾನ್‌ ಲೆಮ್ಮೊನ್‌ ಚಿತ್ರದ ವಿಶುವಲ್‌ ಎಫೆಕ್ಟ್ಸ್‌ಗಾಗಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT