ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ ಚಿತ್ರ ಪ್ರಶಸ್ತಿ ಘೋಷಣೆಯಲ್ಲಿ ಗೊಂದಲ

ಮೂನ್‌ಲೈಟ್‌ ಬದಲು ಲಾ ಲಾ ಲ್ಯಾಂಡ್‌ !
Last Updated 27 ಫೆಬ್ರುವರಿ 2017, 9:10 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರದ ಹೆಸರು ಅದಲು ಬದಲಾಗಿದೆ. ಮೂನ್‌ಲೈಟ್‌ ಬದಲು ಲಾ ಲಾ ಲ್ಯಾಂಡ್‌ ಚಿತ್ರದ ಹೆಸರು ಪ್ರಕಟಿಸಿ, ಪ್ರಶಸ್ತಿ ಪ್ರದಾನವೂ ನಡೆದ ನಂತರ ಗೊಂದಲ!

ಈ ಸಾಲಿನ ಅತ್ಯುತ್ತಮ ಚಿತ್ರ...‘ಲಾ ಲಾ ಲ್ಯಾಂಡ್‌’...ಜೋರಾದ ಚಪ್ಪಾಳೆ, ವೇದಿಕೆ ಏರಿದ ಸಿನಿಮಾ ನಿರ್ಮಾಪಕರು ಪ್ರಶಸ್ತಿಯನ್ನೂ ಪಡೆದದ್ದಾಯಿತು. ಆದರೆ, ಅಲ್ಲೇ ಪ್ರಶಸ್ತಿಯನ್ನೂ ಹಿಂದಿರುಗಿಸಬೇಕಾಯಿತು.


ನಟರಾದ ವಾರೆನ್‌ ಬೆಟಿ ಮತ್ತು ಫೇಯ್‌ ದುನವೇ ಪ್ರಶಸ್ತಿ ಚೀಟಿಯನ್ನು ಬದಲಿಸಿ ಓದಿದ್ದು ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.

ಲಾ ಲಾ ಲ್ಯಾಂಡ್‌ ಚಿತ್ರ ನಿರ್ಮಾಪಕ ಜಾರ್ಡನ್‌ ಹೋರೋವಿಟ್ಜ್‌ ವಿಷಯ ತಿಳಿಯುತ್ತಿದ್ದಂತೆ ಪ್ರಶಸ್ತಿಯನ್ನು ಮೂನ್‌ಲೈಟ್‌ ಚಿತ್ರ ತಂಡಕ್ಕೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT